ಕವಿರಾಜಮಾರ್ಗ - ಬಹುಮುಖಿ ಓದು

Main Article Content

ಎಂ.ಎಸ್. ಸಿದ್ದಾರ್ಥ

Abstract

ಕನ್ನಡದ ಮೊಟ್ಟಮೊದಲ ಉಪಲಬ್ಧ ಕೃತಿಯಾದ ‘ಕವಿರಾಜಮಾರ್ಗ’ವನ್ನು ಕೇವಲ ಲಕ್ಷಣ ಗ್ರಂಥವಾಗಿ ಪರಿಭಾವಿಸದೆ, ಕಾವ್ಯಮೀಮಾಂಸೆ, ಭಾಷೆ, ವ್ಯಾಕರಣ, ಛಂದಸ್ಸು, ಇತಿಹಾಸ, ಭೂಗೋಳ ಮತ್ತು ಸಂಸ್ಕೃತಿಯ ನೆಲೆಗಳಲ್ಲಿ ಬಹುಮುಖಿಯಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೃತಿಯ ಕರ್ತೃತ್ವದ ಹಿಂದಿನ ವಾಗ್ವಾದಗಳು, ಕಾವ್ಯಮಾರ್ಗಗಳ ವಿವೇಚನೆ ಮತ್ತು ಅರಿಸಮಾಸದಂತಹ ಭಾಷಿಕ ನಿಯಮಗಳನ್ನು ವಿವರಿಸಲಾಗಿದೆ. ಕಾವೇರಿಯಿಂದ ಗೋದಾವರಿಯವರೆಗಿನ ನಾಡಿನ ವಿಸ್ತಾರ, ಕನ್ನಡಿಗರ ಗುಣಸ್ವಭಾವ, ಬೆದಂಡೆ-ಚತ್ತಾಣಗಳಂತಹ ದೇಸಿ ಪ್ರಕಾರಗಳು ಹಾಗೂ ಪೂರ್ವಕವಿಗಳ ಉಲ್ಲೇಖಗಳನ್ನು ಗುರುತಿಸಲಾಗಿದೆ. ಒಕ್ಕೂಟ ವ್ಯವಸ್ಥೆ, ಗಡಿ-ಜಲ ವಿವಾದಗಳು ಹಾಗೂ ಭಾಷಿಕ ಅಸ್ಮಿತೆಯ ಇಂದಿನ ಪ್ರಕ್ಷುಬ್ಧ ಸಂದರ್ಭದಲ್ಲಿ, ಕವಿರಾಜಮಾರ್ಗದ ಓದು ಹೇಗೆ ಸಮಕಾಲೀನ ವಾಸ್ತವಗಳಿಗೆ ಸ್ಪಂದಿಸುತ್ತದೆ ಹಾಗೂ ವರ್ತಮಾನದ ಸಾಂಸ್ಕೃತಿಕ-ರಾಜಕೀಯ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗುತ್ತದೆ ಎಂಬ ಮೌಲಿಕ ಒಳನೋಟಗಳನ್ನು ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಎಂ.ಎಸ್. ಸಿದ್ದಾರ್ಥ

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳಳೂರು.

How to Cite

ಎಂ.ಎಸ್. ಸಿದ್ದಾರ್ಥ. (2026). ಕವಿರಾಜಮಾರ್ಗ - ಬಹುಮುಖಿ ಓದು. ಅಕ್ಷರಸೂರ್ಯ (AKSHARASURYA), 14(02), 07 to 14. https://aksharasurya.com/index.php/latest/article/view/659

References

ಕೃಷ್ಣಮೂರ್ತಿ ಕೆ. (ಸಂ), (2015), ಕವಿರಾಜಮಾರ್ಗಂ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ರಹಮತ್ ತರೀಕೆರೆ (ಸಂ), (2008), ಕವಿರಾಜಮಾರ್ಗ- ಸಾಂಸ್ಕೃತಿಕ ಮುಖಾಮುಖಿ, ಹಂಪಿ: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ.

ಸುಬ್ಬಣ್ಣ ಕೆ.ವಿ., (2010), ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಶಶಿಕಲಾ ಎಚ್., (2021), ಕನ್ನುಡಿಯ ಒಡಲು, ಬೆಂಗಳೂರು: ಸಪ್ನ ಬುಕ್ ಹೌಸ್.

ಮುಗಳಿ ರಂ.ಶ್ರೀ., (2015), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಗೀತಾ ಬುಕ್ ಹೌಸ್.

ಷೆಲ್ಡನ್ ಪೊಲಾಕ್, ಕೆ.ವಿ. ಅಕ್ಷರ (ಅನು), (2003), ವಿಶ್ವಾತ್ಮಕ ದೇಶಭಾಷೆ, ಹೆಗ್ಗೋಡು: ಅಕ್ಷರ ಪ್ರಕಾಶನ.

ಶೆಟ್ಟರ್ ಷ., (2007), ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ, ಬೆಂಗಳೂರು: ಅಭಿನವ ಪ್ರಕಾಶನ.

ಜಯಲಲಿತ (ಅನು), (2017), ತೋಲ್ಕಾಪ್ಪಿಯಂ, ಬೆಂಗಳೂರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ.