ಡಾ. ಅರ್ಜುನ ಗೊಳಸಂಗಿಯವರ ಕವಿತೆಗಳಲ್ಲಿ ಹೆಣ್ಣಿನ ಭಿನ್ನ ನೆಲೆಗಳು

Authors

  • ಸುಮಾ ವಸಂತ ಸಾವಂತ ಪ್ರಾಚಾರ್ಯರು, ಎ.ಜಿ.ಎಂ. ಪದವಿ ಮಹಾವಿದ್ಯಾಲಯ, ವರೂರ, ಧಾರವಾಡ.

Keywords:

ದಲಿತ ಸಾಹಿತ್ಯ, ದಲಿತ ಸಾಹಿತ್ಯ ಪರಿಷತ್ತು, ಕವನ, ಹೆಣ್ಣು, ತಾಯಿ, ಹೆಂಡತಿ

Abstract

ಎಪ್ಪತ್ತನೆಯ ದಶಕದಲ್ಲಿ ಕನ್ನಡದಲ್ಲಿ ಆರಂಭವಾದ ದಲಿತ ಮತ್ತು ಬಂಡಾಯ ಸಾಹಿತ್ಯ ಪಂಥ ನೊಂದವರ ದನಿಯಾಗಿ ಮೂಡಿ ಬಂದವು. ಆರಂಭದಲ್ಲಿ ‘ಇಕ್ರಲಾ ಒದಿರಲ’ ಎಂಬಂತಹ ಆಕ್ರೋಶ ಭರಿತ ಮಾತುಗಳನ್ನು ಆಡುತ್ತಲೇ ತನ್ನ ಸುತ್ತಲಿನವರು ತನ್ನ ಮೇಲೆ ಶತಮಾನಗಳ ಕಾಲ ಮಾಡುತ್ತಾ ಬಂದ ಅನ್ಯಾಯವನ್ನು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮಾಡಿದ ಶೋಷಣೆಯನ್ನೂ ವಿರೋದಿಸಲೆಂದೇ ಈ ಸಾಹಿತ್ಯ ಪಂಥಗಳು ಮೂಡಿ ಬಂದವು. ನಂತರದಲ್ಲಿ ಆಕ್ರೋಶ ತುಸು ಕಡಿಮೆಯಾದಂತೆನಿಸಿದರೂ ಅದರ ಸ್ವರೂಪ ಬದಲಾಯಿತೇ ಹೊರತು ಆಳದ ಅಕ್ರೋಶ ಹೋಗಲಿಲ್ಲ.


ದಲಿತ ಸಾಹಿತ್ಯದ ಎರಡನೆಯ ತಲೆಮಾರಿನಲ್ಲಿ ಬಂದ ಲೇಖಕರು ಆಕ್ರೋಶಕ್ಕಿಂತ ಬದುಕನ್ನು ನಿರುಮ್ಮಳವಾಗಿ ಆದರೆ ಒಂದು ಅಭಿಮಾನ ತುಂಬಿದ ದನಿಯಲ್ಲಿ ಬಿತ್ತರಿಸಿದರು. ಅವರ ಸಾಲಿನಲ್ಲಿ ಬಂದ ಪ್ರಮುಖ ಕವಿ ಡಾ. ಅರ್ಜುನ ಗೊಳಸಂಗಿಯವರು. ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಕಟ್ಟಿ ಕಳೆದ ಎರಡು ದಶಕಗಳಿಂದ ಅದರ ಅಧ್ಯಕ್ಷರೂ ಅಗಿರುವ ಅವರು ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ದಲಿತ ಕಾವ್ಯದ ಮುಖ್ಯ ಧ್ವನಿಯಾದವರು. ‘ಬುದ್ಧ ಬೆಳಕು’ ಮತ್ತು ‘ನನ್ನಜ್ಜಿ ನನ್ನವ್ವ ಮತ್ತು ನನ್ನಾಕೆ’ ಎಂಬ ಎರಡು ಕವನ ಸಂಕಲನಗಳನ್ನು ರಚಿಸಿದ್ದಾರೆ.

References

ಅರ್ಜುನ ಗೊಳಸಂಗಿ. (2011). ಬುದ್ಧ ಬೆಳಕು. ದಲಿತ ಸಾಹಿತ್ಯ ಪರಿಷತ್ತು. ಗದಗ.

ಅರ್ಜುನ ಗೊಳಸಂಗಿ. (2011). ನಮ್ಮಜ್ಜಿ ನಮ್ಮವ್ ನನಾಕೆ. ದಲಿತ ಸಾಹಿತ್ಯ ಪರಿಷತ್ತು. ಗದಗ.

Downloads

Published

09.07.2024

How to Cite

ಸುಮಾ ವಸಂತ ಸಾವಂತ. (2024). ಡಾ. ಅರ್ಜುನ ಗೊಳಸಂಗಿಯವರ ಕವಿತೆಗಳಲ್ಲಿ ಹೆಣ್ಣಿನ ಭಿನ್ನ ನೆಲೆಗಳು. AKSHARASURYA, 4(03), 103 to 108. Retrieved from https://aksharasurya.com/index.php/latest/article/view/65

Issue

Section

ಪುಸ್ತಕ ವಿಮರ್ಶೆ. | BOOK REVIEW.

Most read articles by the same author(s)