ಆಧುನಿಕೋತ್ತರ ಚಿಂತನೆಗಳು: ಎದೆಯ ಹಣತೆ

Main Article Content

ಸವಿತಾ ಗು ಕೊಟಬಾಗಿ

Abstract

ಬಾನು ಮುಸ್ತಾಕ್ ಅವರ ‘ಎದೆ ಹಣತೆ’ ಕಥಾ ಸಂಕಲನವು ಆಧುನಿಕೋತ್ತರ ಸಮಸ್ಯೆಗಳ ಕುರಿತು ಅನಾವರಣ ಮಾಡುತ್ತದೆ. ಜೊತೆಗೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬ ಸೂಕ್ಷ್ಮತೆಯ ಸುಳಿವುಗಳನ್ನು ನೀಡುತ್ತದೆ. ಈ ದೃಷ್ಟಿಕೋನದಲ್ಲಿ ವ್ಯಕ್ತಿಯ ಅಂತರಂಗ, ಸಾಮಾಜಿಕ ಭಿನ್ನತೆ, ಗುರುತರ ನೋವು, ದುಃಖ-ದುಮ್ಮಾನಗಳು ವಿಭಿನ್ನ ರೀತಿಯಾಗಿ ವಿಶ್ಲೇಷಣೆಗೆ ಬಾನು ಅವರು ಒಳಪಡಿಸಿದ್ದಾರೆ. ಈ ಕಥಾ ಸಂಕಲನದ ಕೆಲ ಮುಗ್ಧ ಸ್ತ್ರೀ ಪಾತ್ರಗಳು ಸಾಂಪ್ರದಾಯಿಕ ಮೌಲ್ಯಗಳಿಂದಾಗಿ, ಲೋಕ ಜ್ಞಾನದ ಕೊರತೆಯಿಂದಾಗಿ ಜೀವನ ಕಳೆದುಕೊಂಡಿದ್ದರೆ, ಇನ್ನೂ ಕೆಲ ವಿದ್ಯಾವಂತ ಸ್ತ್ರೀ ಪಾತ್ರಗಳು ಅಂಧ ಸಾಂಪ್ರದಾಯಿಕ ಮೌಲ್ಯಗಳನ್ನು, ಮೂಲಭೂತಿವಾದಿಗಳನ್ನು ಪ್ರಶ್ನಿಸುತ್ತಾರೆ.
ಈ ಕಥಾ ಸಂಕಲನವು ಕ್ರಮಬದ್ಧವಲ್ಲದ ತುಂಡು ತುಂಡಾದ ರಚನೆಗಳು, ಸರಳ ಭಾಷಾ ಸಂವಹನ ಅಭಿವ್ಯಕ್ತಿಯಲ್ಲಿ ಸಂಕೀರ್ಣತೆಗಳು ಮತ್ತು ಅಂತರಶಿಸ್ತೀಯ ವಿಷಯಗಳನ್ನು ಒಳಗೊಂಡಿದೆ. ಇದರಿಂದ ವ್ಯಕ್ತಿಯ ಮಾನಸಿಕ ಸಂಘರ್ಷ ಮತ್ತು ಸಮಾಜ ಅಸ್ಥಿರತೆಯನ್ನು ಸೂಚಿಸುತ್ತದೆ. ಕಥೆಗಳ ರಚನೆಯಲ್ಲಿ ಹಲವು ವಿನೂತನ ತಂತ್ರ ಶೈಲಿಗಳನ್ನೊಳಗೊಂಡಿದ್ದರಿಂದ ಸಹೃದಯರನ್ನು ಓದಿಸಿಕೊಂಡು ಹೋಗುತ್ತವೆ. ಕಲ್ಪನಾ ಹಂದರದಲ್ಲಿ ಪಾತ್ರಗಳು ರಚನೆಯಾದರೂ ಅವುಗಳು ವಾಸ್ತವಕ್ಕೆ ಮುಖಾಮುಖಿಯಾಗಿವೆ. ಪ್ರಸ್ತುತ ಕಥೆಗಳಲ್ಲಿ ಹೆಚ್ಚು ಕಥೆಗಳು ಮುಸ್ಲಿಂ ಸಮುದಾಯದ ಬಡತನ, ಅಲ್ಲಿಯ ಲಿಂಗ ತಾರತಮ್ಯಗಳಂತಹ ವಿಶಿಷ್ಟ ಅನುಭವಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಜೊತೆಗೆ ತೀರಾ ಕೆಳ ಅಂಚಿನ ಜನರ ದುರ್ಗಮ ನೋವು-ನಿರಾಶೆ-ಸಂಕಟಗಳನ್ನೂ ದಾಖಲಿಸುತ್ತದೆ. ಇಂತಹ ವಿಶಿಷ್ಟ ಅನುಭವ ಲೋಕ ಹಾಗೂ ಕಥಾ ರಚನೆಯ ಶೈಲಿಯ ಆಧುನಿಕೋತ್ತರ ಕಥೆಗಳ ಪ್ರಮುಖ ಲಕ್ಷಣವಾಗಿವೆ.
ಪ್ರಸ್ತುತ ಕಥಾ ಸಂಕಲನದ ಕಥೆಗಳಲ್ಲಿ ಒಂದೇ ಸತ್ಯದ ಹಲವು ಅನುಭವಗಳು (ಸತ್ಯ ಅನಿಶ್ಚಿತತೆ), ಸ್ತ್ರೀ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ ನೋವುಗಳು, ಕೆಳಸ್ತರ ವ್ಯಕ್ತಿಗಳ ಆರ್ತಧ್ವನಿ ಇತ್ಯಾದಿ ವಿಷಯಗಳ ಕುರಿತು ಶೋಧಿಸಲಾಗಿದೆ. ಈ ಕೃತಿ ಸಮಕಾಲೀನ ಮಾನವನ ವಿವಿಧ ಅನುಭವ ಸ್ತರಗಳ ಸ್ವರೂಪಗಳನ್ನು ಅಭಿವ್ಯಕ್ತಿಸುತ್ತದೆ. ಒಟ್ಟಿಗೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬ ಹಕ್ಕೊತ್ತಾಯದ ಸೂಕ್ಷ್ಮತೆಯನ್ನು ಕಥೆಗಳಲ್ಲಿ ಲೇಖಕಿ ಪ್ರತಿಪಾದಿಸಿರುವುದನ್ನು ಗುರುತಿಸಲಾಗಿದೆ.

Article Details

Section

Research Articles

Author Biography

ಸವಿತಾ ಗು ಕೊಟಬಾಗಿ

ಸಹಾಯಕ ಪ್ರಾಧ್ಯಾಪಕರು, ಶ್ರೀ ಶರಣ ನುಲಿಯ ಚಂದಯ್ಯ ಡಾ. ಬಿ.ಆರ್ ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ.

 

How to Cite

ಸವಿತಾ ಗು ಕೊಟಬಾಗಿ. (2026). ಆಧುನಿಕೋತ್ತರ ಚಿಂತನೆಗಳು: ಎದೆಯ ಹಣತೆ. ಅಕ್ಷರಸೂರ್ಯ (AKSHARASURYA), 14(01), 89 to 96. https://aksharasurya.com/index.php/latest/article/view/649

References

ಬಾನು ಮುಸ್ತಾಕ್, (2004), ಎದೆಯ ಹಣತೆ, ಬೆಂಗಳೂರು: ಸಿವಿಜಿ ಪಬ್ಲಿಕೇಷನ್.

ಶೇಖರ್ ಎಸ್. ವಿ., (2005), ಕನ್ನಡ ಕಥಾ ಸಾಹಿತ್ಯದ ಪ್ರವೃತ್ತಿಗಳು, ಮೈಸೂರು: ಪ್ರಜ್ಞಾ ಪ್ರಕಾಶನ.

ಡಾ. ಸವಿತಾ ಕೊಟಬಾಗಿ, (2010), ಕನ್ನಡ ಸಾಹಿತ್ಯ: ಮುಸ್ಲಿಂ ಸಂವೇದನೆ, ಹುಬ್ಬಳ್ಳಿ: ಆತ್ಮಶ್ರೀ ಪ್ರಕಾಶನ.

ನರಸಿಂಹಮೂರ್ತಿ ಕೆ.ವಿ., (2008), ಸಮಕಾಲೀನ ಕನ್ನಡ ಸಾಹಿತ್ಯ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.