ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆಯ ನೆಲೆಗಳು

Main Article Content

ಸಾಗರ ಎಸ್. ಪಾಟೀಲ

Abstract

ಕನ್ನಡ ಸಾಹಿತ್ಯವು ತನ್ನ ಬಹುಶತಮಾನಗಳ ಇತಿಹಾಸದಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿವರ್ತನೆಗಳಿಗೆ ಸ್ಪಂದಿಸಿದೆ. ಈ ಪರಿವರ್ತನೆಗಳಲ್ಲಿ ಸ್ತ್ರೀಪರ ಚಿಂತನೆಗಳು ಮತ್ತು ಮಹಿಳಾ ಅನುಭವಗಳ ಪ್ರತಿಬಿಂಬನೆ ಅತ್ಯಂತ ಮಹತ್ವವನ್ನು ಪಡೆದಿವೆ. ವಿಶೇಷವಾಗಿ, ಇಪ್ಪತ್ತನೇ ಶತಮಾನದ ಕೊನೆಯ ಭಾಗದಿಂದ ಆರಂಭವಾದ ಆಧುನಿಕೋತ್ತರ (ಪೋಸ್ಟ್‌ ಮಾಡರ್ನ್) ಸ್ತ್ರೀವಾದಿ ಸಂವೇದನೆಗಳು ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮಗಳನ್ನು ತಂದಿವೆ. ಈ ಸಂವೇದನೆಗಳು ಕೇವಲ ಮಹಿಳೆಯರ ಶೋಷಣೆ ಮತ್ತು ಅನ್ಯಾಯಗಳ ವಿರುದ್ಧವಾದ ಧ್ವನಿಯಾಗಿರದೆ, ಮಹಿಳೆಯರ ವೈಯಕ್ತಿಕ, ಸಾಮಾಜಿಕ, ದೈಹಿಕ, ಲೈಂಗಿಕ ಮತ್ತು ಆರ್ಥಿಕ ಅನುಭವಗಳ ಸೂಕ್ಷ್ಮ ಚಿತ್ರಣವನ್ನು ನೀಡುತ್ತಿವೆ. ಇವು ಪಾಶ್ಚಾತ್ಯ ಸಿದ್ಧಾಂತಗಳ ಪ್ರಭಾವವನ್ನು ಸ್ಥಳೀಯ ಪರಂಪರೆಗಳೊಂದಿಗೆ ಸಂಯೋಜಿಸಿ, ಕನ್ನಡದ ಸಾಂಸ್ಕೃತಿಕ ನೆಲೆಯಲ್ಲಿ ವಿಶಿಷ್ಟವಾದ ಸ್ತ್ರೀಪರ ಧ್ವನಿಯನ್ನು ರೂಪಿಸುತ್ತಿವೆ.

Article Details

Section

Research Articles

Author Biography

ಸಾಗರ ಎಸ್. ಪಾಟೀಲ

ಉಪನ್ಯಾಸಕರು, ಕನ್ನಡ ವಿಭಾಗ, ಎಸ್.ಎಸ್.ಎನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಹುಕ್ಕೇರಿ.

How to Cite

ಸಾಗರ ಎಸ್. ಪಾಟೀಲ. (2026). ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆಯ ನೆಲೆಗಳು. ಅಕ್ಷರಸೂರ್ಯ (AKSHARASURYA), 14(01), 63 to 69. https://aksharasurya.com/index.php/latest/article/view/645

References

ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ (ಸಂ), (1994), ಸ್ತ್ರೀವಾದ (ಸ್ತ್ರೀಪರ ಚಿಂತನೆಗಳು), ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್.

ವಿಜಯಾ ದಬ್ಬೆ, (1989), ಮಹಿಳೆ ಸಾಹಿತ್ಯ ಸಮಾಜ, ಮೈಸೂರು: ಸಂವಹನ ಪ್ರಕಾಶನ.

ಗಾಯತ್ರಿ ನಾವಡ, (1999), ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಧರಣೀದೇವಿ ಮಾಲಗತ್ತಿ, (2004), ಸ್ತ್ರೀವಾದ ಮತ್ತು ಭಾರತೀಯತೆ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.