ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀವಾದಿ ಸಂವೇದನೆ
Main Article Content
Abstract
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀವಾದಿ ಸಂವೇದನೆಯು ಕಾಲ ಕಾಲಕ್ಕೆ ಸಮಾಜದ ಚಲನೆ, ಮೌಲ್ಯಗಳ ಬದಲಾವಣೆ ಹಾಗೂ ಮಾನವ ಸಂವೇದನೆಗಳ ಪ್ರತಿಬಿಂಬವಾಗಿ ಬಂದಿದೆ. ನವ್ಯ, ನವೋದಯ, ದಲಿತ ಬಂಡಾಯ, ಪ್ರಗತಿಶೀಲ ಈ ಸಾಹಿತ್ಯ ಪ್ರಕಾರಗಳ ಮೂಲಕ ಆಧುನಿಕ ಚಳುವಳಿಗಳ ನಂತರ ಕನ್ನಡ ಸಾಹಿತ್ಯವು ಪ್ರವೇಶಿಸಿದ ಹೊಸ ಹಂತವೇ ಆಧುನಿಕೋತ್ತರ ಸಾಹಿತ್ಯ. ಈ ಹಂತದಲ್ಲಿ ಕಂಡು ಬರುವ ಪ್ರಮುಖ ಲಕ್ಷಣಗಳಲ್ಲಿ ಒಂದೇ ಸ್ತ್ರೀವಾದಿ ಸಂವೇದನೆ. ಆಧುನಿಕತೆಯುಕ್ತವಾದ ಪ್ರಗತಿ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಕೇಂದ್ರವಾಗಿಟ್ಟುಕೊಂಡಿದ್ದಾರೆ. ಆಧುನಿಕೋತ್ತರತೆ ಆ ಮೌಲ್ಯಗಳ ಮೇಲೆಯೇ ಪ್ರಶ್ನೆಗಳನ್ನು ಎತ್ತುತ್ತದೆ. ಸತ್ಯ ಒಂದೇ ಅಲ್ಲ ಅನೇಕ ಸತ್ಯಗಳಿವೆ ಎಂಬ ಭಾವನೆ, ಕೇಂದ್ರವಿಲ್ಲದ ಬದುಕು, ಚೂರಾದ ಅನುಭವಗಳು ಇವು ಆಧುನಿಕೋತ್ತರ ಚಿಂತನೆಯ ಲಕ್ಷಣಗಳು. ಸ್ತ್ರೀವಾದಿ ಸಂವೇದನೆ ಎಂದರೆ ಸಂಪತ್ತು, ಉಪಭೋಗ, ಸೌಕರ್ಯ, ಬ್ರಾಂಡ್, ಅಧಿಕಾರ ಮತ್ತು ವೈಯಕ್ತಿಕ ಲಾಭಗಳನ್ನು ಜೀವನದ ಕೇಂದ್ರವಾಗಿಸಿಕೊಂಡ ಮನೋಭಾವ. ಮಾನವ ಸಂಬಂಧಗಳಿಗಿಂತ ಮೌಲ್ಯಗಳಿಗಿಂತ ವಸ್ತುಗಳಿಗೆ ಮಾರುಕಟ್ಟೆಗೆ ಹೆಚ್ಚಿನ ಮಹತ್ವ ನೀಡುವುದು ಇದರ ಮೂಲ ಲಕ್ಷಣ.
ಆಧುನಿಕೋತ್ತರ ಕನ್ನಡ ಸಾಹಿತ್ಯದಲ್ಲಿ ನಗರೀಕರಣ, ಜಾಗತೀಕರಣ, ಖಾಸಗೀಕರಣದ ಪರಿಣಾಮವಾಗಿ ಸ್ತ್ರೀವಾದಿ ಸಂವೇದನೆ ಸ್ಪಷ್ಟವಾಗಿ ಕಾಣಿಸುತ್ತದೆ. ಕಥೆ, ಕಾದಂಬರಿ, ಕವನ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ನಗರ ಮಧ್ಯಮ ವರ್ಗದ ಅಸ್ಥಿರ ಜೀವನ, ಉದ್ಯೋಗ, ಹಣ, ಹುದ್ದೆಗಳಿಗಾಗಿ ನಡೆಯುವ ಸ್ಪರ್ಧೆ, ಮಾನವ ಸಂಬಂಧಗಳ ವ್ಯಾಪಾರೀಕರಣ, ಕುಟುಂಬಗಳ ಬಾಂಧವ್ಯಗಳಲ್ಲಿ ಮಾರ್ಪಡುವ ಸ್ಥಿತಿ ಇವೆಲ್ಲವೂ ಸಾಹಿತ್ಯದ ವಿಷಯವಾಗಿವೆ. ಸಾಹಿತ್ಯ ಪ್ರಕಾರಗಳಲ್ಲಿ ವಿಶ್ಲೇಷಿಸುವ ಪಾತ್ರಗಳು ಮತ್ತು ಮನೋವೈಜ್ಞಾನಿಕ ಸಂಘರ್ಷ, ಆಧುನಿಕೋತ್ತರ ಕೃತಿಗಳ ಪಾತ್ರಗಳು ಆದರ್ಶವಾದಿಗಳಲ್ಲ, ಅವು ಗೊಂದಲಭರಿತ ಸ್ವಾರ್ಥಪರ ಅಸ್ಥಿರ ವ್ಯಕ್ತಿತ್ವಗಳಾಗಿರುತ್ತವೆ. ಸ್ತ್ರೀವಾದಿ ಸಂಸ್ಕೃತಿಯಲ್ಲಿ ಸಿಲುಕಿದ ವ್ಯಕ್ತಿ ಅನುಭವಿಸುವ ಒಂಟಿತನ, ಅರ್ಥಶೂನ್ಯತೆ ಸಾಹಿತ್ಯದಲ್ಲಿ ಸೂಕ್ಷ್ಮವಾಗಿ ಚಿತ್ರಿಸುತ್ತಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶಿವಾನಂದ ಕೆಳಗಿನಮನಿ, (2000), ಗೋಪಾಲಕೃಷ್ಣ ಅಡಿಗರ ನವ್ಯ ಕಾವ್ಯ: ಒಂದು ಅಧ್ಯಯನ, ಧಾರವಾಡ: ಸೌಜನ್ಯ ಪ್ರಕಾಶನ.
ಚಂದ್ರಕಾಂತ ವಿ. ಚೌವ್ಹಾಣ್, (2004), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬಂಡಾಯ, ಬೆಂಗಳೂರು: ದಾಮಿನಿ ಮುದ್ರಣಾಲಯ.
ಕೊಕ್ಕನವರ ವೈ. ವೈ., (2024), ಶಾಸ್ತ್ರಸಾರ ಸೌರಭ, ರಬಕವಿ: ಸೃಜನ ಸಾಹಿತ್ಯ ಪ್ರಕಾಶನ.
ಕೊಕ್ಕನವರ ವೈ. ವೈ., (2025), ಹೊಸಗನ್ನಡ ಸಾಹಿತ್ಯ ಪ್ರವೇಶಿಕೆ, ರಬಕವಿ: ಸೃಜನ ಸಾಹಿತ್ಯ ಪ್ರಕಾಶನ.
ಕೊಕ್ಕನವರ ವೈ. ವೈ., (2021), ಸಂಶೋಧನಾ ಸಿರಿಗನ್ನಡಿ, ರಬಕವಿ: ಸೃಜನ ಸಾಹಿತ್ಯ ಪ್ರಕಾಶನ.
ಶ್ರೀಮತಿ ಎಚ್. ಎಸ್., (1995), ಆಧುನಿಕ ಭಾರತದಲ್ಲಿ ಮಹಿಳೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಶ್ರೀಮತಿ ಎಚ್. ಎಸ್. (ಸಂ), (2006), ಮಹಿಳಾ ಸಾಹಿತ್ಯ ಚರಿತ್ರೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಗಾಯತ್ರಿ ಎನ್., (2003), ಮಹಿಳೆ: ಬಿಡುಗಡೆಯ ಹಾದಿಯಲ್ಲಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ತಾರಿಣಿ ಶುಭದಾಯಿನಿ ಆರ್., (2018), ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.