ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳು
Main Article Content
Abstract
ಈ ಸಂಶೋಧನಾ ಲೇಖನವು ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳನ್ನು ಪ್ರಾಚೀನದಿಂದ ಅರ್ವಾಚೀನದ ಕನ್ನಡ ಸಾಹಿತ್ಯದ ಪ್ರಮುಖ ಆಶಯಗಳು ಮತ್ತು ತಾತ್ವಿಕತೆಯೊಂದಿಗೆ ಸಮೀಕರಿಸಿ ಅವಲೋಕಿಸಲಾಗಿದೆ. ಇಂದಿನ ಕಾಲದ ಸಂಘರ್ಷಗಳು ವಚನ ಚಳುವಳಿಯ ಕಾಲದಲ್ಲೂ ಇದ್ದವು. ಸಮ ಸಮಾಜದ ಆಶಯಗಳನ್ನು, ಸರ್ಕಾರದ ಕಾರ್ಯ ವೈಖರಿಯನ್ನು ವಿರೋಧಿಸಿದವರನ್ನು ಎಡಪಂಥೀಯ ಹಣೆಪಟ್ಟಿ ಅಂಟಿಸುವುದು, ಅಧಿಕಾರ, ಪ್ರಭುತ್ವದ ಪರವಾಗಿದ್ದರೆ ಬಲಪಂಥೀಯರೆಂದು ಗುರುತಿಸುವುದು ಇಂದಿನ ಸಮಸ್ಯೆಯಾಗಿದೆ. ಇದರಿಂದ ಬಿಡುಗಡೆ ಕಾಣುವುದು ಸಾಹಿತ್ಯಕ್ಕಿರುವ ಸವಾಲಾಗಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಮೊದಲಾದ ಸಾಹಿತ್ಯ ಪರಂಪರೆಗಳು ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಋಣಿಯಾಗಿರುವಂತೆ ಆಧುನಿಕೋತ್ತರ ಕಾಲಘಟ್ಟದ ಸಾಹಿತ್ಯವೂ ಪೂರ್ವ ಸೂರಿಗಳ ಆದರ್ಶಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಹೊಸ ಯುಗದ ನವ ಸಾಹಿತ್ಯವು ಜನಪರವಾಗುವಿಕೆಯಲ್ಲಿ ಸೋಲುತ್ತಿರುವುದಕ್ಕೆ ಕಾರ್ಯ-ಕಾರಣ ಸಂಬಂಧ ಶೋಧಿಸುವುದು ಈ ಲೇಖನದ ಉದ್ದೇಶದಲ್ಲಿ ಒಂದಾಗಿದೆ. ಇಂದು ಸಾಹಿತ್ಯವನ್ನು ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ಒಂದೆಡೆಯಾದರೆ ಶೋಷಿತ ಸಮುದಾಯದವರ ನೋವು ಯಾತನೆಗಳನ್ನು ಅಭಿವ್ಯಕ್ತಿಸುವ ಕೃತಿಗಳನ್ನು, ದೈವಗಳ ಹೆಸರಿನಲ್ಲಿ ಬಲಿಯಾದವರಿಗಿಂತ ದೈವಗಳ ವೈಭವೀಕರಣದತ್ತ ಒಲವು ತೋರಿಸುವ ಕೃತಿಗಳು ಮುನ್ನೆಲೆಗೆ ಬರುತ್ತಿರುವುದು ಆಧುನಿಕೋತ್ತರ ಕಾಲದಲ್ಲಿ ಸಮಸ್ಯೆಯ ರೂಪದಲ್ಲಿ ಉಳಿದಿವೆ. ಪುರಾಣದ ಅಧ್ಯಾತ್ಮವು ಆಧುನಿಕತೆಯ ಧರ್ಮವಾಗಿ, ಆಧುನಿಕೋತ್ತರ ಕಾಲದಲ್ಲಿ ಧರ್ಮದ ಕೂಸು ಜಾತಿಯ ರೂಪದಲ್ಲಿ ಎಲ್ಲೆಡೆಯೂ ನರ್ತಿಸುತ್ತಿರುವುದು ಈ ಯುಗದ ಸಾಹಿತಿಗಳ ಮುಂದಿನ ಸವಾಲಾಗಿದೆ. ಇದು ಸಾಹಿತ್ಯದಲ್ಲಿ ನಿರೂಪಿತವಾಗಿದ್ದರೂ ಅಂತಹ ಹೊತ್ತಿಗೆಗಳು ಒಂದು ವರ್ಗಕ್ಕೆ ಸಂಬಂಧಿಸಿದ್ದು ಎಂದು ಉದಾಸೀನತೆ ತೋರುತ್ತಿರುವುದು ಒಂದು ಸಮಸ್ಯೆಯಾಗಿದೆ ಎಂಬ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಎಲ್ಲಾ ಕಾಲದಲ್ಲಿಯೂ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಸ್ವರೂಪದಲ್ಲಿ ಮಾತ್ರ ಬದಲಾಗಿರುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಮುಗಳಿ ರಂ. ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಗೀತಾ ಬುಕ್ ಹೌಸ್.
ಚಿದಾನಂದ ಮೂರ್ತಿ ಎಂ., (1966), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಸಪ್ನ ಬುಕ್ ಹೌಸ್.
ಶ್ರೀನಿವಾಸಮೂರ್ತಿ ಎಂ. ಆರ್., (2013), ವಚನ ಧರ್ಮಸಾರ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಶಿವರಾಮಯ್ಯ (ಸಂ), (2018), ಪಂಪ ಭಾರತ (ಸಂಪುಟ 1 ಮತ್ತು 2), ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ವಿವಿಧ ಲೇಖಕರು, (1975), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ (10 ಸಂಪುಟಗಳು), ಬೆಂಗಳೂರು: ಸಪ್ನ ಬುಕ್ ಹೌಸ್.
ಕೀರ್ತಿನಾಥ ಕುರ್ತುಕೋಟಿ, (2015), ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಧಾರವಾಡ: ಕುರ್ತುಕೋಟಿ ಮೆಮೋರಿಯಲ್ ಟ್ರಸ್ಟ್.
ರಾಜಪ್ಪ ದಳವಾಯಿ (ಸಂ), (2018), ಕನ್ನಡ ಸಾಹಿತ್ಯ ಕೋಶ, ಕೋಡಿಹಳ್ಳಿ (ತುಮಕೂರು): ರಾಜಪ್ಪ ದಳವಾಯಿ ತರಬೇತಿ ಕೇಂದ್ರ.
ಬರಗೂರು ರಾಮಚಂದ್ರಪ್ಪ (ಸಂ), (2015), ಕನ್ನಡ ಸಾಹಿತ್ಯ ಸಂಗಾತಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ತಿಪ್ಪೇರುದ್ರಸ್ವಾಮಿ ಎಚ್., (1978), ಕರ್ಣಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ವೀರಣ್ಣ ಸಿ., (2011), ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆ (ಸಂಪುಟ 1 ಮತ್ತು 2), ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್.
ರಂಗನಾಥ ಶರ್ಮಾ ಎನ್. (ಗದ್ಯಾನುವಾದ), (1972), ರಾಘವಾಂಕನ ಹರಿಶ್ಚಂದ್ರ ಚರಿತೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಚನ್ನಪ್ಪ ಉತ್ತಂಗಿ (ಸಂ), (2022), ಸರ್ವಜ್ಞನ ವಚನಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.