ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ

Main Article Content

ದೀಪಾ. ಮ. ಅಂಗಡಿ

Abstract

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಪುರಾತನ ಕಾಲದಿಂದ ಮಹಿಳೆಯನ್ನು ಸಮಾಜವು ಚಾರಿತ್ರಿಕ ದಾಖಲೆಗಳಿಂದ ದೂರವಿಟ್ಟು ಮೌನಗೊಳಿಸಿದ್ದರೆ, ಆಧುನಿಕ ಕಾಲದಲ್ಲಿ ಆಕೆ ತನ್ನ ಸ್ವರವನ್ನು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ಎತ್ತಿಕೊಂಡಿದ್ದಾಳೆ. ತನ್ನ ಬದುಕಿನ ನೋವು, ಸಂಕಟ, ಅನ್ಯಾಯ, ಶೋಷಣೆ ಮತ್ತು ಪ್ರತಿರೋಧವನ್ನು ಕಾವ್ಯದ ಮೂಲಕ ವ್ಯಕ್ತಪಡಿಸುತ್ತಾಳೆ. ಮಹಿಳಾ ಕಾವ್ಯವು ಕೇವಲ ಪುರುಷ ವಿರೋಧಿ ಧೋರಣೆಯಲ್ಲ, ಬದಲಿಗೆ ತನ್ನ ಅಸ್ತಿತ್ವವನ್ನು ದೃಢಪಡಿಸುವ, ಬದುಕನ್ನು ತನ್ನ ದೃಷ್ಟಿಕೋನದಿಂದ ನೋಡುವ ಸಾಹಿತ್ಯದ ಹಾದಿಯಾಗಿದೆ. ಆಧುನಿಕ ಮಹಿಳಾ ಕವಿಗಳು ತಮ್ಮ ಕಾವ್ಯದಲ್ಲಿ ಮಹಿಳೆಯರ ಶೋಷಣೆ, ಲೈಂಗಿಕ ದೌರ್ಜನ್ಯ, ಭಯ, ಸಾಮಾಜಿಕ ಅನ್ಯಾಯ, ಪುರುಷರ ದಬ್ಬಾಳಿಕೆ ಮುಂತಾದವುಗಳ ಬಗ್ಗೆ ಕಳವಳವನ್ನು ಬಿಂಬಿಸುತ್ತಾರೆ. ಈ ಸಾಹಿತ್ಯ ಮಹಿಳೆಯ ಆತ್ಮವಿಶ್ವಾಸಕ್ಕೆ, ಸಾಮಾಜಿಕ ಹೋರಾಟಕ್ಕೆ ಮತ್ತು ಸಾಹಿತ್ಯದ ಪ್ರಾಧಾನ್ಯತೆಗೂ ದಾರಿ ತೋರಿಸುತ್ತದೆ.

Article Details

Section

Research Articles

Author Biography

ದೀಪಾ. ಮ. ಅಂಗಡಿ

ಎಂ. ಎ. ವಿದ್ಯಾರ್ಥಿನಿ, ಸರಕಾರಿ ಪ್ರಥಮದರ್ಜೆ ಮಹಿಳಾ ಪದವಿ ಮಹಾವಿದ್ಯಾಲಯ, ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ, ಬೈಲಹೊಂಗಲ.

 

References

ನೇಮಿಚಂದ್ರ, (2006), ಬದುಕು ಬದಲಿಸಬಹುದು, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್.

ಪಠ್ಯಪುಸ್ತಕ ರಚನಾ ಸಮಿತಿ, (2016), ಸಾಹಿತ್ಯ ಸಂಪದ (ದ್ವಿತೀಯ ಪಿಯುಸಿ ಕನ್ನಡ ಪಠ್ಯಪುಸ್ತಕ), ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ (ಕರ್ನಾಟಕ ಸರ್ಕಾರ).

ರಾಧಾದೇವಿ ಹೆಚ್. ಜಿ., (1994), ಅದೃಷ್ಟದ ಅಂಚಿನಲ್ಲಿ, ಬೆಂಗಳೂರು: ಕೀರ್ತಿ ಪ್ರಕಾಶನ.

ರಾಧಾದೇವಿ ಹೆಚ್. ಜಿ., (1981), ಗೆಲುವಿನ ಹಾದಿ, ಬೆಂಗಳೂರು: ಓಂ ಶಕ್ತಿ ಪ್ರಕಾಶನ.