ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ

Main Article Content

ನಾಗರಾಜ ದಂಡೋತಿ

Abstract

ಕನ್ನಡ ಸಾಹಿತ್ಯದ ದೀರ್ಘ ಇತಿಹಾಸದಲ್ಲಿ ಮಹಿಳಾ ಬರವಣಿಗೆಯು ನಡೆದುಬಂದ ಹಾದಿ ಮತ್ತು ಆಧುನಿಕೋತ್ತರ ಕಾಲಘಟ್ಟದಲ್ಲಿ ಅದು ಕಂಡುಕೊಂಡ ಸ್ತ್ರೀವಾದಿ ಸಂವೇದನೆಯ ವಿಶಿಷ್ಟ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ. ಅತ್ತಿಮಬ್ಬೆ, ಅಕ್ಕಮಹಾದೇವಿಯರ ಐತಿಹಾಸಿಕ ಹಿನ್ನೆಲೆಯಿಂದ ಪ್ರಸ್ತುತ ಸ್ತ್ರೀವಾದಿ ನೆಲೆಗಳವರೆಗಿನ ಪಯಣವನ್ನು ಗುರುತಿಸುತ್ತಾ, ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧ, ಪುರಾಣಗಳ ಮರುಕಟ್ಟುವಿಕೆ ಮತ್ತು ಅಸ್ಮಿತೆಯ ಹುಡುಕಾಟವನ್ನು ವಿಶ್ಲೇಷಿಸಲಾಗಿದೆ. ಸ್ತ್ರೀವಾದವು ಕೇವಲ ಆಕ್ರೋಶಕ್ಕೆ ಸೀಮಿತವಾಗದೆ, ದೈಹಿಕ ಮತ್ತು ಮಾನಸಿಕ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಒಳಗೊಂಡಿದೆ. ವೈದೇಹಿ, ಸಾರಾ ಅಬೂಬಕ್ಕರ್ ಮುಂತಾದವರ ಬರಹಗಳನ್ನು ಉಲ್ಲೇಖಿಸುತ್ತಾ, ಜಾತಿ, ವರ್ಗ ಮತ್ತು ಧಾರ್ಮಿಕ ನೆಲೆಗಳಲ್ಲಿ ಮಹಿಳೆಯರ ಅನುಭವಗಳು ಹೇಗೆ ಭಿನ್ನವಾಗುತ್ತವೆ ಎಂಬುದನ್ನು ಪರಿಶೀಲಿಸಲಾಗಿದೆ. ಸ್ತ್ರೀ ಸಂವೇದನೆಯು ಏಕಶಿಲಾ ರೂಪದ್ದಲ್ಲ, ಬದಲಿಗೆ ಅದು ಸಾಂಸ್ಕೃತಿಕ ಬಹುತ್ವದ ನೆಲೆಗಳನ್ನು ಹೊಂದಿದೆ ಎನ್ನುವುದನ್ನು ಈ ಅಧ್ಯಯನವು ಸ್ಪಷ್ಟಪಡಿಸುತ್ತದೆ.

Article Details

Section

Research Articles

Author Biography

ನಾಗರಾಜ ದಂಡೋತಿ

ಸಹಾಯಕ ಪ್ರಾಧ್ಯಾಪಕ, ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳ.

How to Cite

ನಾಗರಾಜ ದಂಡೋತಿ. (2026). ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ. ಅಕ್ಷರಸೂರ್ಯ (AKSHARASURYA), 13(06), 129 to 136. https://aksharasurya.com/index.php/latest/article/view/635

References

ಸೌಮ್ಯ ಎಚ್. ಎಲ್, (2023), ಇಪ್ಪತ್ತೊಂದನೆ ಶತಮಾನದಲ್ಲಿ ಸ್ತ್ರೀ ಸಂವೇದನೆ (ಸಂಪುಟ 9, ಸಂಚಿಕೆ 2), ಬೆಂಗಳೂರು: ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕನ್ನಡ ರಿಸರ್ಚ್.

ಆಶಾದೇವಿ ಎಂ. ಎಸ್., (2011), ಸಾಹಿತ್ಯ ಮತ್ತು ಸ್ತ್ರೀ ಸಂವೇದನೆ ಸ್ವರೂಪ, ಗದಗ: ಲಡಾಯಿ ಪ್ರಕಾಶನ.