ದಲಿತ ಸಾಹಿತ್ಯದ ದೃಷ್ಟಿಯಲ್ಲಿ ಬಡತನ ಮತ್ತು ಹಸಿವು: ಒಂದು ವೈಚಾರಿಕ ಅಧ್ಯಯನ

Main Article Content

ಭಾಗ್ಯಲಕ್ಷ್ಮಿ ಆರ್.ಸಿ.

Abstract

ಸಾಮಾಜಿಕ ವ್ಯವಸ್ಥೆಯೊಳಗೆ ಬಡತನ ಮತ್ತು ಹಸಿವು ಎಂಬ ಪರಿಕಲ್ಪನೆಯನ್ನು ಕೆಲವಾರು ವೈಚಾರಿಕ ವಿಮರ್ಶಕರು, ಲೇಖಕರು ಹಾಗೂ ತಜ್ಞರ ಹಿನ್ನೆಲೆಯೊಂದಿಗೆ ಚರ್ಚಿಸಲಾಗಿದೆ. ಸಮಾಜದ ಸಮುದಾಯಗಳ ಒಳ ಘರ್ಷಣೆಗೆ ಸಂಬಂಧಿಸಿದಂತೆ ತಾರತಮ್ಯ, ಅಸಮಾನತೆ ಹಾಗೂ ಆರ್ಥಿಕ ವ್ಯವಸ್ಥೆಯೊಂದಿಗೆ ಬಡತನ ಮತ್ತು ಹಸಿವಿನ ತೀವ್ರತೆಯನ್ನು ಈ ಲೇಖನದಲ್ಲಿ ಚರ್ಚಿಸಿದ್ದೇನೆ. ಸಮಾಜದ ಸಮುದಾಯಗಳ ನಡುವಿನ ಘರ್ಷಣೆ, ತಾರತಮ್ಯ, ಅಸಮಾನತೆ ಮತ್ತು ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಬಡತನ ಮತ್ತು ಹಸಿವನ್ನು ವಿಶ್ಲೇಷಿಸಲಾಗಿದೆ. ಸಮಾಜವು ಅಭದ್ರತೆಯಿಂದ ಕೂಡಿದಾಗ, ಯಜಮಾನರು ತಮ್ಮ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ.

Article Details

Section

Research Articles

Author Biography

ಭಾಗ್ಯಲಕ್ಷ್ಮಿ ಆರ್.ಸಿ.

ಸಹ ಪ್ರಾಧ್ಯಾಪಕರು, ವಿಜ್ಞಾನ ಮತ್ತು ಮಾನವಿಕ ವಿಭಾಗ, ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಆರ್‌.ಆರ್. ನಗರ, ಬೆಂಗಳೂರು.

How to Cite

ಭಾಗ್ಯಲಕ್ಷ್ಮಿ ಆರ್.ಸಿ. (2026). ದಲಿತ ಸಾಹಿತ್ಯದ ದೃಷ್ಟಿಯಲ್ಲಿ ಬಡತನ ಮತ್ತು ಹಸಿವು: ಒಂದು ವೈಚಾರಿಕ ಅಧ್ಯಯನ. ಅಕ್ಷರಸೂರ್ಯ (AKSHARASURYA), 13(06), 123 to 128. https://aksharasurya.com/index.php/latest/article/view/634

References

ಅರವಿಂದ ಮಾಲಗತ್ತಿ, (1997), ದಲಿತ ಸಾಹಿತ್ಯ ಪ್ರವೇಶಿಕೆ, ಮುದ್ದೇಬಿಹಾಳ: ಶೈಲಾ ಪ್ರಕಾಶನ.

ಅರವಿಂದ ಮಾಲಗತ್ತಿ, (1999), ದಲಿತಯುಗ ಮತ್ತು ಕನ್ನಡ ಸಾಹಿತ್ಯ, ಮೈಸೂರು: ಚೇತನ ಬುಕ್ ಹೌಸ್.

ಕೀರ್ತಿನಾಥ ಕುರ್ತುಕೋಟಿ, (2012), ಯುಗಧರ್ಮ ಮತ್ತು ಸಾಹಿತ್ಯ ದರ್ಶನ, ಧಾರವಾಡ: ಕುರ್ತುಕೋಟಿ ಮೆಮೋರಿಯಲ್ ಟ್ರಸ್ಟ್.

ದೇವನೂರ ಮಹಾದೇವ, (2002), ಎದೆಗೆ ಬಿದ್ದ ಅಕ್ಷರ, ಬೆಂಗಳೂರು: ಅಭಿನವ ಪ್ರಕಾಶನ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ, (2009), ವಿಮರ್ಶೆಯ ವಿಮರ್ಶೆ, ಮೈಸೂರು: ಪುಸ್ತಕ ಪ್ರಕಾಶನ.

ಮೊಗಳ್ಳಿ ಗಣೇಶ್, (2003), ಜಾತಿ ಮೀಮಾಂಸೆ, ಬೆಂಗಳೂರು: ಅಭಿನವ ಪ್ರಕಾಶನ.

ರವಿಕುಮಾರ್ (ಸಂ), (2015), ಆಯ್ದ ವಿಮರ್ಶೆ: ಕೆಲವು ವಿಮರ್ಶಾ ಲೇಖನಗಳು, ಬೆಂಗಳೂರು: ಅಭಿನವ ಪ್ರಕಾಶನ.