ಗೀತಾ ನಾಗಭೂಷಣ ಅವರ ‘ಬದುಕು’ ಕಾದಂಬರಿಯಲ್ಲಿ ದೇವದಾಸಿಯರ ಪಾತ್ರ ಚಿತ್ರಣ

Main Article Content

ರೇಖಾ ಬಿ.

Abstract

ಕನ್ನಡ ಕಾದಂಬರಿ ಸಾಹಿತ್ಯವು ಸಮಾಜದ ವಾಸ್ತವಿಕ ಬದುಕನ್ನು ಪ್ರತಿಬಿಂಬಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಬದುಕು, ಅವಳ ಆಂತರಿಕ ಸಂವೇದನೆಗಳು, ಸಂಕಟಗಳು ಮತ್ತು ಅಸ್ತಿತ್ವದ ಹೋರಾಟಗಳು ಅನೇಕ ಕಾದಂಬರಿಗಳ ಪ್ರಮುಖ ವಿಷಯಗಳಾಗಿವೆ. ‘ಬದುಕು’ ಕಾದಂಬರಿಯು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯೊಳಗೆ ಮಹಿಳೆ ಅನುಭವಿಸುವ ನೋವು, ತ್ಯಾಗ, ಮೌನ ಮತ್ತು ಭಾವನಾತ್ಮಕ ಸಂಘರ್ಷಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಗೀತಾ ನಾಗಭೂಷಣ ಅವರ ‘ಬದುಕು’ ಕಾದಂಬರಿಯಲ್ಲಿ ದೇವದಾಸಿಯರ ಪಾತ್ರ ಚಿತ್ರಣವು ಮಹಿಳಾ ಜೀವನದ ನೋವು, ಶೋಷಣೆ ಮತ್ತು ಅಸಮಾನತೆಯನ್ನು ತೀವ್ರವಾಗಿ ಅನಾವರಣಗೊಳ್ಳುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜವು ರೂಪಿಸಿದ ದೇವದಾಸಿ ಪದ್ಧತಿ ಹೇಗೆ ಮಹಿಳೆಯರ ದೇಹ, ಮನಸ್ಸು ಮತ್ತು ಜೀವನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತದೆ ಎಂಬುದನ್ನು ಕಾದಂಬರಿ ಸ್ಪಷ್ಟವಾಗಿ ಚಿತ್ರಿಸುತ್ತದೆ. ದೇವದಾಸಿಯರನ್ನು ಕೇವಲ ಧಾರ್ಮಿಕ ಸಂಪ್ರದಾಯದ ಭಾಗವೆಂದು ನೋಡದೆ, ಮಾನವೀಯತೆಯಿಂದ ವಂಚಿತಗೊಂಡ ಬದುಕುಗಳಾಗಿ ಲೇಖಕಿ ನಿರೂಪಿಸುತ್ತಾರೆ. ಪಿತೃಸತ್ತಾತ್ಮಕ ವ್ಯವಸ್ಥೆ, ಜಾತಿ ಮತ್ತು ಆರ್ಥಿಕ ಅಸಮಾನತೆಗಳು ದೇವದಾಸಿಯರ ಶೋಷಣೆಗೆ ಹೇಗೆ ಕಾರಣವಾಗುತ್ತವೆ ಎಂಬುದು ಕಾದಂಬರಿಯ ಪ್ರಮುಖ ಆಶಯವಾಗಿದೆ. ಅವರ ಒಳನೋವು, ಮೌನ ಪ್ರತಿಭಟನೆ ಮತ್ತು ಆತ್ಮಗೌರವದ ಹುಡುಕಾಟದ ಮೂಲಕ ಬದುಕು ಕಾದಂಬರಿ ಸಮಾಜದ ದ್ವಂದ್ವ ನೀತಿಯನ್ನು ಪ್ರಶ್ನಿಸಿ ಮಾನವೀಯ ಮೌಲ್ಯಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

Article Details

Section

Research Articles

Author Biography

ರೇಖಾ ಬಿ.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಕೇಂಬ್ರಿಡ್ಜ್ ಕಾಲೇಜು, ಕೆ.ಆರ್. ಪುರಂ, ಬೆಂಗಳೂರು.

References

ಗೀತಾ ನಾಗಭೂಷಣ, (2003), ಬದುಕು, ಬೆಂಗಳೂರು: ಸಪ್ನ ಬುಕ್ ಹೌಸ್.

ಚೆನ್ನಣ್ಣ ವಾಲಿಕಾರ, (2001), ಕರ್ನಾಟಕದ ದೇವದಾಸಿ ಪದ್ಧತಿ: ಸಮಾಜ-ಧಾರ್ಮಿಕ-ಆರ್ಥಿಕ-ಶೈಕ್ಷಣಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆಗಳ ಅಧ್ಯಯನ, ಮೈಸೂರು: ಗೀತಾ ಬುಕ್ ಹೌಸ್.

ಜೋಗನ್ ಶಂಕರ್, (1993), ದೇವದಾಸಿ ಸಂಪ್ರದಾಯ, ಅಥಣಿ: ವಿಮೋಚನಾ ಪಬ್ಲಿಕೇಷನ್ಸ್.