ಸಾಮಾಜಿಕ ವಾಸ್ತವತೆಗಳಲ್ಲಿ ಮಹಿಳಾ ವಿಮೋಚನೆಯ ಸವಾಲುಗಳು
Main Article Content
Abstract
ಮಹಿಳಾ ವಿಮೋಚನೆಯು ಮಹಿಳೆಯ ಅಸ್ಮಿತೆ, ಸಮಾನ ಹಕ್ಕು, ಆತ್ಮಗೌರವ ಮತ್ತು ಮಾನವೀಯ ಬದುಕಿಗಾಗಿ ನಡೆಯುವ ಸಮಗ್ರ ನೈತಿಕ ಹೋರಾಟವಾಗಿದೆ. ಇದು ಕೇವಲ ಪ್ರತಿಭಟನೆಯಲ್ಲ. ಮಹಿಳೆಯ ಬದುಕಿನ ಅಳಿವು–ಉಳಿವಿನ ಪ್ರಶ್ನೆಯನ್ನು ಸ್ಪರ್ಶಿಸುವ ಚಳುವಳಿಯಾಗಿದೆ. ಸ್ತ್ರೀವಾದಿ ಚಿಂತನೆಗಳು ಲಿಂಗ ಅಸಮಾನತೆ ನಿಯಮವಲ್ಲ, ಸಮಾಜ ನಿರ್ಮಿತ ಎಂಬುದನ್ನು ಸ್ಪಷ್ಟಪಡಿಸಿ, ಅಧಿಕಾರದ ಅಸಮಾನ ನೆಲೆಯನ್ನು ಪ್ರಶ್ನಿಸುವ ದಿಕ್ಕನ್ನು ಮಹಿಳಾ ಚಳುವಳಿಗೆ ನೀಡಿವೆ.
90ರ ದಶಕದ ಕಾಲಘಟ್ಟದಲ್ಲಿ ಖಾಸಗೀಕರಣ, ಜಾಗತೀಕರಣ, ಧಾರ್ಮಿಕ ಮೂಲಭೂತವಾದ, ಮಾಧ್ಯಮಗಳ ವ್ಯಾಪಾರೀಕರಣ, ಸಂಘಟನೆಗಳ ಒಳಬಿರುಕುಗಳು ಮಹಿಳಾ ವಿಮೋಚನಾ ಹೋರಾಟಕ್ಕೆ ಹೊಸ ಸವಾಲುಗಳಾಗಿವೆ. ಕಾನೂನುಗಳಿದ್ದರೂ ಜಾಗೃತಿಯ ಕೊರತೆಯಿಂದ ಮಹಿಳೆಯರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಶಿಕ್ಷಣದ ಕೊರತೆ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ವೇತನ ತಾರತಮ್ಯ, ದೇವದಾಸಿ ಪದ್ಧತಿ ಮುಂತಾದ ಅನಿಷ್ಟಗಳು ಮಹಿಳೆಯ ಬದುಕನ್ನು ಸಂಕೀರ್ಣಗೊಳಿಸುತ್ತಿವೆ. ಇವುಗಳ ನಡುವೆಯೂ ಕನ್ನಡ ಮಹಿಳಾ ಸಾಹಿತ್ಯ ಹೊಸ ಪರಿಭಾಷೆಯೊಂದಿಗೆ ರೂಪುಗೊಳ್ಳುತ್ತಿರುವುದು ಆಧುನಿಕೋತ್ತರ ಚಿಂತನೆಯ ಫಲವಾಗಿದೆ. ಮಹಿಳಾ ವಿಮೋಚನೆಯು ಹೊರಲೋಕದ ವಿರುದ್ಧದ ಹೋರಾಟ ಮಾತ್ರವಲ್ಲ ಇದು ಮಹಿಳೆಯ ಅಂತಃಸತ್ವವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯೂ ಆಗಿದೆ. ಆತ್ಮವಿಶ್ವಾಸ, ಜಾಗೃತಿ, ಶಿಕ್ಷಣ, ಸಂವಾದ ಮತ್ತು ಮಾನವೀಯತೆ ಮಹಿಳಾ ಸಬಲೀಕರಣದ ಮೂಲ ಅಂಶಗಳಾಗಿವೆ. ಆಧುನಿಕೋತ್ತರ ಕಾಲಘಟ್ಟದ ತೊಂಬತ್ತರ ದಶಕದಲ್ಲಿ ಜಾತಿ, ಧರ್ಮ, ವರ್ಗಗಳ ಮಿತಿಗಳನ್ನು ಮೀರಿ ಮಹಿಳೆಯರು ಒಗ್ಗೂಡಿ ವಿಚಾರವಂತಿಕೆಯಿಂದ ಚಳುವಳಿಯನ್ನು ಕಟ್ಟಬೇಕಾಗಿದೆ. ಕುಟುಂಬ ವ್ಯವಸ್ಥೆಯನ್ನು ನಿರಾಕರಿಸುವುದಕ್ಕಿಂತ ಪರಸ್ಪರ ಗೌರವ ಮತ್ತು ಸಮಾನತೆಯನ್ನು ಬೆಳೆಸುವುದು ಮುಖ್ಯ. ಎಲ್ಲಾ ಮಹಿಳಾ ಸಂಘಟನೆಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಗ್ರತೆ ಸಾಧಿಸಿದಾಗ ಮಾತ್ರ ಮಹಿಳಾ ಚಳುವಳಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳಲ್ಲಿ ಬಲವಾಗಿ ಬೆಳೆಯಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಗಾಯತ್ರಿ ನಾವಡ, (2000), ಭಾರತೀಯ ಸ್ತ್ರೀವಾದ: ಒಂದು ಸಂಕಥನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಗಾಯತ್ರಿ ನಾವಡ, (2012), ಮಹಿಳಾ ಮೀಸಲಾತಿ ಮತ್ತು ಲಿಂಗರಾಜಕಾರಣ, ಗದಗ: ಲಡಾಯಿ ಪ್ರಕಾಶನ.
ಗಾಯತ್ರಿ ನಾವಡ, (1998), ಮಹಿಳಾ ಚಳುವಳಿಯ ಮಜಲುಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಜ್ಯೋತಿ ಶಶಿಕುಮಾರ್, (2006), ಮಹಿಳಾ ಸಾಮಾಜಿಕತೆ, ಹಂಪಿ: ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ.
ಪ್ರೀತಿ ಶುಭಚಂದ್ರ, (2002), ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ವಿಜಯಶ್ರೀ ಸಬರದ (ಪ್ರ.ಸಂ), (2013), ಆಧುನಿಕ ಮಹಿಳಾ ಸಾಹಿತ್ಯ ಚರಿತ್ರೆ – ಕಾವ್ಯ, ವಿಜಯಾಪುರ: ಪ್ರಸಾರಾಂಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ.
ಹೊನ್ನುಸಿದ್ಧಾರ್ಥ ಸಿ.ಬಿ. (ಸಂ), (2014), ಆಧುನಿಕ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.