ಮಹಾಸತಿ ಆಚರಣೆ ಮತ್ತು ಜನಪದ ನಂಬಿಕೆಗಳು
Main Article Content
Abstract
ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹಾಸತಿ ಆಚರಣೆಯು ಒಂದು ಸಂಕೀರ್ಣ ಸಾಮಾಜಿಕ ಪದ್ಧತಿಯಾಗಿದೆ. ಶಾಸನಗಳಿಗಿಂತ ಹೆಚ್ಚಾಗಿ ಜನಪದ ಗೀತೆಗಳು ಈ ಆಚರಣೆಯ ಕುರಿತು ಜನಸಾಮಾನ್ಯರಲ್ಲಿದ್ದ ಆತಂಕ ಮತ್ತು ಭಕ್ತಿಭಾವದ ದ್ವಂದ್ವ ನಿಲುವುಗಳನ್ನು ಸ್ಪಷ್ಟವಾಗಿ ಅನಾವರಣಗೊಳಿಸುತ್ತವೆ. ಯುದ್ಧದಲ್ಲಿ ಪತಿಯ ಮರಣದ ನಂತರ ಪತ್ನಿಯು ಸಹಗಮನ ಅಥವಾ ಅನುಗಮನದ ಮೂಲಕ ಪ್ರಾಣತ್ಯಾಗ ಮಾಡುವ ಕ್ರಿಯೆಯು, ಕಾಲಾಂತರದಲ್ಲಿ ಅವಳನ್ನು ಕೇವಲ ಮೃತ ಪತ್ನಿಯಾಗಿರದೆ, ಫಲವಂತಿಕೆ ಮತ್ತು ರಕ್ಷಣೆ ನೀಡುವ ಶಕ್ತಿದೇವತೆಯಾಗಿ ಪರಿವರ್ತಿಸಿದೆ. ಕರ್ನಾಟಕದಲ್ಲಿ ಈ ಪದ್ಧತಿಯು ಕೇವಲ ಮೇಲ್ವರ್ಗಕ್ಕೆ ಸೀಮಿತವಾಗಿರದೆ, ಶೂದ್ರ ಸಮುದಾಯಗಳಲ್ಲಿಯೂ ವ್ಯಾಪಕವಾಗಿತ್ತೆಂಬ ಐತಿಹಾಸಿಕ ಸತ್ಯವನ್ನು ಇಲ್ಲಿ ಗುರುತಿಸಲಾಗಿದೆ. ಪಿತೃಪ್ರಧಾನ ವ್ಯವಸ್ಥೆಯ ಒತ್ತಡದ ನಡುವೆಯೂ, ತ್ಯಾಗದ ಮೂಲಕ ದೈವೀಕರಣಗೊಂಡ ಮಹಿಳೆಯ ಆರಾಧನಾ ಪರಂಪರೆ ಮತ್ತು ಜನಪದ ನಂಬಿಕೆಗಳ ವಿಶಿಷ್ಟತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಅಣ್ಣಿಗೇರಿ ಎ.ಎಂ. ಮತ್ತು ಮೇವುಂಡಿ ಮಲ್ಲಾರಿ (ಸಂ), (1961), ಶಾಸನ ಸಾಹಿತ್ಯ ಸಂಚಯ, ಧಾರವಾಡ: ಕನ್ನಡ ಸಂಶೋಧನಾ ಸಂಸ್ಥೆ.
ಕಲಬುರ್ಗಿ ಎಂ.ಎಂ., (1980), ಸಮಾಧಿ, ಬಲಿದಾನ – ವೀರ ಮರಣ ಸ್ಮಾರಕಗಳು, ಬೆಂಗಳೂರು: ಐಬಿಎಚ್ ಪ್ರಕಾಶನ.
ಚೆನ್ನಕ್ಕ ಸಿ. ಎಲಿಗಾರ, (1990), ಶಾಸನಗಳಲ್ಲಿ ಕರ್ನಾಟಕ ಸ್ತ್ರೀ ಸಮಾಜ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾನಿಲಯ.
ಚಿದಾನಂದಮೂರ್ತಿ ಎಂ., (1984), ವೀರಗಲ್ಲು ಮತ್ತು ಮಾಸ್ತಿಗಲ್ಲು, ಬೆಂಗಳೂರು: ಐಬಿಎಚ್ ಪ್ರಕಾಶನ.
ಚಿದಾನಂದಮೂರ್ತಿ ಎಂ., (2008), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಸಪ್ನ ಬುಕ್ ಹೌಸ್.
ಶೇಠೆ ಬಿ.ಎಸ್., (1991), ಕರ್ನಾಟಕದಲ್ಲಿ ಸತಿ ಪದ್ಧತಿ, ಬೆಳಗಾವಿ: ವೀರಶೈವ ಅಧ್ಯಯನ ಅಕಾಡೆಮಿ.
ಬಸವರಾಜ ಕಲ್ಗುಡಿ, (2013), ಮೈಯೇ ಸೂರು ಮನವೇ ಮಾತು, ಬೆಂಗಳೂರು: ಅಭಿನವ ಪ್ರಕಾಶನ.
ಜೋಶಿ ಶಂ.ಬಾ., (1939), ಕರ್ನಾಟಕ ಸಂಸ್ಕೃತಿ ಪೂರ್ವ ಪೀಠಿಕೆ, ಧಾರವಾಡ: ಸಮಾಜ ಪುಸ್ತಕಾಲಯ.