ಭಾರತೀಯ ಧರ್ಮದಲ್ಲಿ ಮಹಿಳೆ ಮತ್ತು ಧರ್ಮ

Main Article Content

ಕೆ. ಶಾಲಿನಿ
ಮೋಹನ್ ಎಂ.

Abstract

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನಮಾನವು ಅನಾದಿ ಕಾಲದಿಂದಲೂ ಬದಲಾವಣೆಗಳಿಗೆ ಒಳಪಡುತ್ತಲೇ ಬಂದಿದೆ. ನಾಗರಿಕತೆಯ ಆರಂಭದ ಮಾತೃಪ್ರಧಾನ ವ್ಯವಸ್ಥೆಯಲ್ಲಿ ಪೂಜ್ಯಭಾವನೆ ಹೊಂದಿದ್ದ ಸ್ತ್ರೀ, ಕಾಲಕ್ರಮೇಣ ಪುರುಷ ಪ್ರಧಾನವಾದ ಧಾರ್ಮಿಕ ಚೌಕಟ್ಟಿನಲ್ಲಿ ಶೋಷಣೆಗೆ ಒಳಗಾದ ಐತಿಹಾಸಿಕ ಹಿನ್ನೆಲೆಯನ್ನು ಇಲ್ಲಿ ಗುರುತಿಸಲಾಗಿದೆ. ವೈದಿಕ, ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಮಹಿಳೆಯರ ಸ್ವಾತಂತ್ರ್ಯವನ್ನು ನಿಯಂತ್ರಿಸಿದ ಬಗೆ ಹಾಗೂ ಮನುಸ್ಮೃತಿಯಂತಹ ಗ್ರಂಥಗಳು ವಿಧಿಸಿದ ನಿರ್ಬಂಧಗಳನ್ನು ವಿಶ್ಲೇಷಿಸಲಾಗಿದೆ. ಸ್ಥಾಪಿತ ಧರ್ಮಗಳ ಈ ಕಟ್ಟುಪಾಡುಗಳನ್ನು ಧಿಕ್ಕರಿಸಿ, ವಚನ ಚಳವಳಿ ಹಾಗೂ ಭಕ್ತಿ ಪಂಥದ ಮೂಲಕ ಅಕ್ಕಮಹಾದೇವಿ ಮತ್ತು ಮೀರಾಬಾಯಿಯಂತಹ ಸಾಧಕಿಯರು ಕಂಡುಕೊಂಡ ಆಧ್ಯಾತ್ಮಿಕ ಬಿಡುಗಡೆ ಮತ್ತು ಸಮಾನತೆಯ ಮಾರ್ಗಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ.

Article Details

Section

Research Articles

Author Biographies

ಕೆ. ಶಾಲಿನಿ

ಪ್ರಾಧ್ಯಾಪಕಿ, ಆರ್.ಜೆ.ಎಸ್ ಪ್ರಥಮ ದರ್ಜೆ ಕಾಲೇಜು, ಕೋರಮಂಗಲ, ಬೆಂಗಳೂರು.

ಮೋಹನ್ ಎಂ.

ಸಹಾಯಕ ಪ್ರಾಧ್ಯಾಪಕರು, ಆರ್.ಜೆ.ಎಸ್ ಪ್ರಥಮ ದರ್ಜೆ ಕಾಲೇಜು, ಕೋರಮಂಗಲ, ಬೆಂಗಳೂರು.

How to Cite

ಕೆ. ಶಾಲಿನಿ, & ಮೋಹನ್ ಎಂ. (2026). ಭಾರತೀಯ ಧರ್ಮದಲ್ಲಿ ಮಹಿಳೆ ಮತ್ತು ಧರ್ಮ. ಅಕ್ಷರಸೂರ್ಯ (AKSHARASURYA), 13(02), 11 to 19. https://aksharasurya.com/index.php/latest/article/view/519

References

ಶಿವಾನಂದ ಎಸ್. ವಿರಕ್ತಮಠ, (2010), ಮಹಿಳೆ ಮತ್ತು ಧರ್ಮ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಜ್ಯೋತಿ ಶಶಿಕುಮಾರ, (2007), ಮಹಿಳಾ ಸಾಮಾಜಿಕತೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಸಂಪಾದಕರು, (2003), ಮಹಿಳಾ ಅಧ್ಯಯನ (ಸಂಪುಟ 5, ಸಂಚಿಕೆ 1-2), ಹಂಪಿ: ಮಹಿಳಾ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

ನಂದನ, (2004), ಬುದ್ಧ ಚರಿತೆ ಮತ್ತು ಧಮ್ಮಸಾರ, ಬೆಂಗಳೂರು: ಬುದ್ಧ ವಚನ ಟ್ರಸ್ಟ್.

ದೇವಿಪ್ರಸಾದ ಚಟ್ಟೋಪಾಧ್ಯಾಯ, (2011), ಲೋಕಾಯತ, ಬೆಂಗಳೂರು: ನವಕರ್ನಾಟಕ ಪ್ರಕಾಶನ.

ಹಿರೇಮಠ ಎಸ್.ಎಸ್., (2003), ಪಾಶುಪತ ದರ್ಶನ, ಗದಗ: ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಮಠ.

ತಾಪಿ ಧರ್ಮರಾವ್, (2012), ದೇವಾಲಯಗಳು ಮತ್ತು ಲೈಂಗಿಕ ಶಿಲ್ಪ, ಬಳ್ಳಾರಿ: ಲೋಹಿಯಾ ಪ್ರಕಾಶನ.