ಜನಪದ ಆರಾಧನೆ ಮತ್ತು ಆಧುನಿಕತೆ: ಭೂತಾರಾಧನೆಯನ್ನು ಅನುಲಕ್ಷಿಸಿ

Main Article Content

ಪ್ರಶಾಂತ್‌ ಎ.ಎಸ್.

Abstract

ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಅನನ್ಯತೆಯಾದ ಭೂತಾರಾಧನೆಯು ಕೇವಲ ಪೂಜಾ ವಿಧಾನವಾಗಿರದೆ, ಸಾಮಾಜಿಕ ನ್ಯಾಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಒಳಗೊಂಡ ಸಂಕೀರ್ಣ ಜನಪದ ವ್ಯವಸ್ಥೆಯಾಗಿದೆ. ಜಾಗತೀಕರಣ ಹಾಗೂ ಆಧುನಿಕತೆಯ ಪ್ರಭಾವದಿಂದಾಗಿ ಈ ನೆಲಮೂಲದ ಆಚರಣೆಯ ಸ್ವರೂಪದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳನ್ನು ಇಲ್ಲಿ ಚರ್ಚಿಸಲಾಗಿದೆ. ಯಕ್ಷಗಾನದ ಪ್ರಭಾವ, ವೈದಿಕ ಆಚರಣೆಗಳ ಸೇರ್ಪಡೆ, ವೇಷಭೂಷಣಗಳಲ್ಲಿನ ಮಾರ್ಪಾಡು ಮತ್ತು ತಾಂತ್ರಿಕತೆಯ ಅಬ್ಬರಗಳು ಮೂಲ ಆರಾಧನಾ ಪದ್ಧತಿಯನ್ನು ಹೇಗೆ ರೂಪಾಂತರಿಸುತ್ತಿವೆ ಎಂಬುದರ ಕುರಿತು ವಿಶ್ಲೇಷಿಸಲಾಗಿದೆ. ವಾಣಿಜ್ಯೀಕರಣ ಮತ್ತು ಪ್ರದರ್ಶನ ಕಲೆಯಾಗಿ ಬದಲಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಭೂತಾರಾಧನೆಯ ಮೂಲ ಆಶಯ, ಭಕ್ತಿ ಮತ್ತು ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ. ತುಳುನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಪರಂಪರೆಯು ಆಧುನಿಕ ಸವಾಲುಗಳನ್ನು ಎದುರಿಸುತ್ತಿರುವ ಬಗೆಯನ್ನು ಈ ಅಧ್ಯಯನವು ಎತ್ತಿ ತೋರಿಸುತ್ತದೆ.

Article Details

Section

Research Articles

Author Biography

ಪ್ರಶಾಂತ್‌ ಎ.ಎಸ್.

ಸಹಾಯಕ ಪ್ರಾಧ್ಯಾಪಕರು, ಭಾಷಾ ವಿಭಾಗ, ಕ್ರೈಸ್ಟ್‌ ವಿಶ್ವವಿದ್ಯಾಲಯ, ಬೆಂಗಳೂರು.

 

How to Cite

ಪ್ರಶಾಂತ್‌ ಎ.ಎಸ್. (2026). ಜನಪದ ಆರಾಧನೆ ಮತ್ತು ಆಧುನಿಕತೆ: ಭೂತಾರಾಧನೆಯನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 13(01), 10 to 18. https://aksharasurya.com/index.php/latest/article/view/489

References

ಚಂದ್ರಶೇಖರ ನಂಗಲಿ ವಿ., (2010), ಈಗಳೆ ಸಾಧ್ಯ, ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್‌ ಯೂನಿವರ್ಸಿಟಿ.

ಕೀರ್ತಿನಾಥ ಕುರ್ತಕೋಟಿ, (2006), ಉರಿಯ ನಾಲಿಗೆ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಬೋರಲಿಂಗಯ್ಯ ಹಿ.ಚಿ., (2015), ಕರ್ನಾಟಕ ಜನಪದ ಕಲೆಗಳ ಕೋಶ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ವಾಮನ ನಂದಾವರ, (2014), ಕರಾವಳಿ ಆಚರಣೆಗಳು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಲಕ್ಷ್ಮೀ ಜಿ. ಪ್ರಸಾದ್‌, (2021), ಕರಾವಳಿಯ ಸಾವಿರದೊಂದು ದೈವಗಳು, ಬೆಂಗಳೂರು: ಮಾತೃಶ್ರೀ ಪ್ರಕಾಶನ.

ಬೋರಲಿಂಗಯ್ಯ ಹಿ.ಚಿ., (2011), ಕಾಡು ಕಾಂಕ್ರಿಟ್‌ ಮತ್ತು ಜಾನಪದ, ಬೆಂಗಳೂರು: ಸ್ವಪ್ನ ಬುಕ್‌ ಹೌಸ್‌.

ಪುರುಷೋತ್ತಮ ಬಿಳಿಮಲೆ, (2008), ಜನ ಸಂಸ್ಕೃತಿ, ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್‌ ಯೂನಿವರ್ಸಿಟಿ.

ವೀರಪ್ಪ ಮೊಯಿಲಿ ಎಂ., (2008), ತೆಂಬರೆ, ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್‌ ಯೂನಿವರ್ಸಿಟಿ.

ಅಮೃತ ಸೋಮೇಶ್ವರ, (2007), ತುಳುವ ಜಾನಪದ: ಕೆಲವು ನೋಟಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಯದುಪತಿ ಗೌಡ, (2001), ತುಳುನಾಡ್‌ದ ನಲಿಕೆಲು, ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.