ಭಾಷೆಯ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ
Main Article Content
Abstract
ಪ್ರಸ್ತುತ ಲೇಖನವು ಆಧುನಿಕ ಸಾಮಾಜಿಕ ಮಾಧ್ಯಮಗಳು ಭಾವ, ಭಾಷೆ ಮತ್ತು ಸಂವಹನದ ಸ್ವರೂಪವನ್ನು ಹೇಗೆ ರೂಪಾಂತರಗೊಳಿಸುತ್ತಿವೆ ಎಂಬುದನ್ನು ವಿಶ್ಲೇಷಿಸುತ್ತದೆ. ಮಾನವನು ಸಮಾಜಜೀವಿಯಾಗಿರುವುದರಿಂದ ತನ್ನ ಭಾವನೆಗಳು, ಆಲೋಚನೆಗಳು ಮತ್ತು ಅನುಭವಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾನೆ. ಕಾಲಕ್ರಮೇಣ ಸಂವಹನದ ಮಾಧ್ಯಮಗಳು ಬದಲಾಗುತ್ತಾ ಬಂದಿದ್ದು, ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿ ಪರಿಣಮಿಸಿವೆ. ಸಾಮಾಜಿಕ ಮಾಧ್ಯಮಗಳು ಭಾಷೆಯ ಬಳಕೆಯಲ್ಲಿ ಸರಳೀಕರಣ, ಸಂಕ್ಷಿಪ್ತತೆ, ಹೊಸ ಪದಗಳ ಸೃಷ್ಟಿ, ಬಹುಭಾಷಾ ಮಿಶ್ರಣ ಮತ್ತು ಲಿಪಿಯ ಬದಲಾವಣೆಗಳಂತಹ ಪ್ರಮುಖ ಬದಲಾವಣೆಗಳನ್ನು ತಂದಿವೆ. ವಿಶೇಷವಾಗಿ ಕನ್ನಡ ಭಾಷೆಯ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳು ಭಾಷೆಯ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿದರೂ, ಭಾಷಾ ಶುದ್ಧತೆ, ಲಿಪಿಯ ಬಳಕೆ ಮತ್ತು ಪರಂಪರೆಯ ಸಂರಕ್ಷಣೆಗೆ ಸವಾಲುಗಳನ್ನು ಎಸೆದಿವೆ. ಈ ಅಧ್ಯಯನವು ಸಾಮಾಜಿಕ ಮಾಧ್ಯಮಗಳ ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವಗಳನ್ನು ಸಮತೋಲನದ ದೃಷ್ಟಿಕೋನದಿಂದ ವಿಶ್ಲೇಷಿಸಿ, ತಂತ್ರಜ್ಞಾನವನ್ನು ಭಾಷೆಯ ಅಭಿವೃದ್ಧಿಗೆ ಸಹಾಯಕ ಸಾಧನವಾಗಿ ಜವಾಬ್ದಾರಿಯಿಂದ ಬಳಸುವ ಅಗತ್ಯವಿದೆ ಎಂಬ ನಿರ್ಣಯಕ್ಕೆ ಬರುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.