ʼಶೂದ್ರ ತಪಸ್ವಿʼಯ ಸಂಬೋಧನೆಗಳು
Main Article Content
Abstract
ವಿಶ್ವ ಸಾಹಿತ್ಯ ಜಗತ್ತು ಕಂಡ ಅಪರೂಪದ ಪ್ರತಿಭೆ ಕುವೆಂಪು. ಕವಿ, ಲೇಖಕ, ವಿಮರ್ಶಕ, ಮಹಾಕವಿ, ನಾಟಕಕಾರ, ಕಾದಂಬರಿಕಾರ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಅಸದೃಶ ಕೊಡುಗೆ ನೀಡಿರುವ ಅವರ ಸುಪ್ರಸಿದ್ಧ ನಾಟಕಗಳಲ್ಲಿ ʼಶೂದ್ರತಪಸ್ವಿʼಯೂ ಒಂದು. ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಂಡಿರುವ ಈ ನಾಟಕ, ಮನುನಿರ್ಮಿತ ವರ್ಣವ್ಯವಸ್ಥೆಯ ಅಮಾನವೀಯತೆಯನ್ನು ಪ್ರಶ್ನಿಸುವ ಮತ್ತು ಅದಕ್ಕೊಂದು ಸೌಹಾರ್ದ ಪರಿಹಾರ ನೀಡುವ ಮೂಲಕ ತಿದ್ದುವ ಒಂದು ಪ್ರಯತ್ನವೂ ಆಗಿದೆ. ರಾಮಾಯಣದ ಉಪಕತೆಗಳಲ್ಲಿ ಒಂದಾದ ʼಶಂಬೂಕನ ವಧೆʼಯಲ್ಲಿ ಶೂದ್ರನಾದ ಶಂಬೂಕ ತಪಸ್ಸು ಮಾಡುತ್ತಿರುವುದನ್ನು ತಿಳಿದ ಶ್ರೀರಾಮ ‘ಲೋಕಕಲ್ಯಾಣ’ಕ್ಕಾಗಿ ಅವನನ್ನು ಕೊಲ್ಲುತ್ತಾನೆ, ದೇವತೆಗಳಿಂದ ಹರಸಲ್ಪಡುತ್ತಾನೆ. ಪ್ರಸ್ತುತ ʼಶೂದ್ರತಪಸ್ವಿʼ ನಾಟಕದಲ್ಲಿ ಈ ಘಟನೆಯನ್ನು ವಿಶ್ವಮಾನವ ದೃಷ್ಟಿಯಿಂದ ವಿವೇಚಿಸಲಾಗಿದ್ದು, ಶ್ರೀರಾಮ ಶಂಬೂಕನನ್ನು ಕೊಲ್ಲದೆ ಅವನ ವಿರುದ್ಧ ದೂರು ತಂದ ಬ್ರಾಹ್ಮಣನಲ್ಲಿ ಮನುಷ್ಯತ್ವವನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಇಲ್ಲಿ ತಪೋನಿರತನಾದ ಶಂಬೂಕನ ಸುತ್ತ ಸುತ್ತುವ ಪಾತ್ರಗಳು ಪರಸ್ಪರ ತಮ್ಮನ್ನು ಸಂಬೋಧಿಸಿಕೊಳ್ಳುವ ರೀತಿಯನ್ನು, ಅವುಗಳ ಸ್ವಾರಸ್ಯವನ್ನು ಹಾಗೂ ವೈಶಿಷ್ಟ್ಯವನ್ನು ಅನ್ವೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಕುವೆಂಪು, (2004), ಕುವೆಂಪು ಸಮಗ್ರ ಗದ್ಯ ಸಂಪುಟ-2, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಬಸವರಾಜ ಡೋಣೂರ, (2010), ಒಳಗಣ ಹೊರಗಣ, ಧಾರವಾಡ: ನೀಲಪರ್ವತ ಪ್ರಕಾಶನ.