ಜನಪದ ಪರಂಪರೆ ಮತ್ತು ಆಧುನಿಕ ಪ್ರಭಾವಗಳು

Main Article Content

ರವಿಕುಮಾರ್ ಕೆ.ಎಂ.

Abstract

ಸಾಹಿತ್ಯ ಪ್ರಕಾರಗಳಲ್ಲಿಯೇ ಅತ್ಯಂತ ಪ್ರಾಚೀನ ಸಾಹಿತ್ಯ ಪ್ರಕಾರವೆಂದರೆ ಜನಪದ. ಇದರ ಮೂಲ ಜನರು. ಇವರು ರಚಿಸಿದ ಸಾಹಿತ್ಯವೇ ಜನಪದ ಸಾಹಿತ್ಯ. ಈ ಸಾಹಿತ್ಯ ಪರಂಪರೆ ಮನುಷ್ಯನಷ್ಟೇ ಪ್ರಾಚೀನವಾದದ್ದು. ಜನಪದ ಪರಂಪರೆ ಪ್ರತಿಹಂತದಲ್ಲಿಯೂ ಮನುಷ್ಯನೊಂದಿಗೆ ಬೆಳೆದು ಬಂದಿರುವಂತಹದ್ದು. ಜನಪದರ ಬದುಕು ಒಂದು ಕಲೆ. ಜನಪದರು ಜೀವನದ ಉತ್ಸಾಹ ಪಡೆಯಲು ದೈವಾರಾಧನೆಯ ಹಿನ್ನೆಲೆಯಲ್ಲಿ ಜನಪದ ಹಾಡು, ಲಾವಣಿ, ಒಗಟು, ಕುಣಿತಗಳನ್ನು ಮೈಗೂಡಿಸಿಕೊಂಡು ಈ ಪರಂಪರೆಯನ್ನು ಅಂದಿನಿಂದ ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಜನಪದರ ಬದುಕು ಒಂದು ವಿಶೇಷ. ತಮ್ಮ ನಿತ್ಯದ ದುಡಿಮೆಯ ಆಯಾಸ, ಬದುಕಿನ ಏಕತಾನತೆ, ಆಸರಿಕೆ, ಬೇಸರಿಕೆಗಳಿಂದ ಹೊರಬರಲು ಪ್ರಾಚೀನ ಜನರು ಕಂಡುಕೊಂಡ ವಿಧಾನವಿದು. ಈ ಪರಂಪರೆಯನ್ನು ಯಾರು ಬೆಳೆಸಿದರು, ಯಾವಾಗ ಬೆಳೆದು ಬಂತು ಎಂದು ಹೇಳುವುದು ಕಷ್ಟ. ಸಾಮಾನ್ಯವಾಗಿ ಹೇಳುವುದಾದರೆ ಸಾಮಾನ್ಯ ಜನರು, ಅದರಲ್ಲೂ ಅನಕ್ಷರಸ್ಥ ಜನರು ಅದನ್ನು ಬೆಳೆಸಿ-ಉಳಿಸಿಕೊಂಡು ಬಂದದ್ದು ಒಂದು ವಿಶೇಷ. ಜನಪದ ಪರಂಪರೆ ತುಂಬಾ ವಿಶಾಲವಾಗಿದ್ದು ಗ್ರಾಮೀಣ ಜನರ ಬದುಕಿನೊಂದಿಗೆ ಬೆಸೆದುಕೊಂಡು ಬಂದಿದೆ. ಮನುಷ್ಯ ಜೀವನದ ಸಾಂಸ್ಕೃತಿಕ ಆಚರಣೆಗಳಾದ ಹಬ್ಬ, ಜಾತ್ರೆ, ಮದುವೆ, ಉತ್ಸವ ಮೊದಲಾದ ಸಂದರ್ಭಗಳು ಈ ಪರಂಪರೆ ಹುಟ್ಟಿಗೆ ಕಾರಣವಾಗಿದೆ. ಹಾಗೆಯೇ ಆಧುನಿಕ ಪ್ರಭಾವವು ಜನಪದ ಪರಂಪರೆಯ ಮೇಲೆ ಹೇಗೆ ಆಗಿದೆ ಎಂಬುದನ್ನು ಪ್ರಸ್ತುತ ಲೇಖನ ತಿಳಿಸುತ್ತದೆ.

Article Details

Section

Research Articles

Author Biography

ರವಿಕುಮಾರ್ ಕೆ.ಎಂ.

ಕನ್ನಡ ಭಾಷಾ ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ, ಎಸ್. ಮಾದಾಪುರ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

 

References

ಜವರೇಗೌಡ ದೇ., (1976), ಜಾನಪದ ಅಧ್ಯಯನ, ಮೈಸೂರು: ಡಿ.ವಿ.ಕೆ. ಮೂರ್ತಿ.

ಪರಮಶಿವಯ್ಯ ಜಿ.ಶಂ., (1979), ಜನಪದ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ರಾಮಚಂದ್ರಗೌಡ ಹಿ.ಶಿ., (2006), ಕನ್ನಡ ಜನಪದ ಸಾಹಿತ್ಯ ಪ್ರಕಾರಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಹಲಸಂಗಿ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ, (1931), ಗರತಿಯ ಹಾಡು, ಧಾರವಾಡ: ಸಮಾಜ ಪುಸ್ತಕಾಲಯ.

ಚಿಕ್ಕೆರೆ ಶಿವಶಂಕರ್, (2005), ಜಾನಪದ ಪ್ರವೇಶ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.