ಕನ್ನಡ ಪ್ರವಾಸ ಸಾಹಿತ್ಯದಲ್ಲಿನ ಕಾವ್ಯ ಮತ್ತು ಕಥೆಯ ಸ್ವರೂಪ
Main Article Content
Abstract
ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾದ ಪ್ರವಾಸ ಸಾಹಿತ್ಯವು ಕಾವ್ಯ ಮತ್ತು ಕಥೆಗಳ ಮೂಲಕ ವಿಶಿಷ್ಟವಾದ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ. ಪ್ರವಾಸವು ಕೇವಲ ಸ್ಥಳ ವೀಕ್ಷಣೆಯಾಗಿರದೆ, ಅದು ಆಂತರಿಕ ಹಾಗೂ ಬಾಹ್ಯ ಜಗತ್ತಿನ ಅನ್ವೇಷಣೆಯಾಗಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕುವೆಂಪು, ಬೇಂದ್ರೆ, ಜಿ.ಎಸ್.ಎಸ್ ಅವರ ಕಾವ್ಯಗಳಲ್ಲಿ ಪ್ರಕೃತಿ ಮತ್ತು ಭಾವನೆಗಳ ಸಮ್ಮಿಲನವಿದ್ದರೆ, ವಿ. ಸೀತಾರಾಮಯ್ಯ, ತೇಜಸ್ವಿ ಅವರಂತಹ ಲೇಖಕರ ಗದ್ಯ ಬರಹಗಳಲ್ಲಿ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ವಿವರಗಳು ಕಥಾರೂಪದಲ್ಲಿ ಅನಾವರಣಗೊಂಡಿವೆ. ತೀರ್ಥಕ್ಷೇತ್ರಗಳ ದರ್ಶನ, ಪರಿಸರ ಪ್ರೇಮ ಮತ್ತು ಜನಜೀವನದ ವೈವಿಧ್ಯವನ್ನು ಪರಿಚಯಿಸುವಲ್ಲಿ ಈ ಸಾಹಿತ್ಯ ಪ್ರಕಾರವು ಮಹತ್ವದ ಪಾತ್ರ ವಹಿಸುತ್ತದೆ. ಓದುಗರಿಗೆ ಮಾಹಿತಿ ಮತ್ತು ಸೌಂದರ್ಯಾನುಭವವನ್ನು ಏಕಕಾಲದಲ್ಲಿ ನೀಡುವ ಪ್ರವಾಸ ಸಾಹಿತ್ಯದ ಸ್ವರೂಪ ಮತ್ತು ವೈಶಿಷ್ಟ್ಯಗಳನ್ನು ಇಲ್ಲಿ ಗುರುತಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಲತಾ ಗುತ್ತಿ, ಪ್ರವಾಸ ಸಾಹಿತ್ಯ: ವಿಶ್ವ ಸಂಸ್ಕೃತಿಗಳು, ಬೆಂಗಳೂರು: ಸಚಿನ್ ಪಬ್ಲಿಷರ್ಸ್.
ದೇ.ಜ.ಗೌ., (2007), ಕುವೆಂಪು ದರ್ಶನ (ಸಂಪುಟ-2), ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಶಾಂತರಾಜಯ್ಯ ವೈ.ಜಿ., (1967), ಶ್ರವಣಬೆಳ್ಗೊಳ ಕ್ಷೇತ್ರ ಚರಿತ್ರೆ ಅಥವಾ ಶ್ರೀ ಬಾಹುಬಲಿ ವಿಜಯ, ಬೆಂಗಳೂರು: ಸುದರ್ಶನ್ ಪ್ರೆಸ್.
ಸೀತಾರಾಮಯ್ಯ ವಿ., ಪಂಪಾಯಾತ್ರೆ, ಬೆಂಗಳೂರು: ಜಿ. ಕಲ್ಲಯ್ಯ ಅಂಡ್ ಸನ್ಸ್.
ಜಯದೇವಪ್ಪ ಜೈನಕೇರಿ, (2006), ಪ್ರವಾಸ ಸಂಪದ, ಶಿವಮೊಗ್ಗ: ಶಾಂತಲಾ ಪ್ರಕಾಶನ.
ಅನಂತರಾಮು ಕೆ., (1982), ಸಕ್ಕರೆಯ ಸೀಮೆ ಮಂಡ್ಯಜಿಲ್ಲೆಯ ಪ್ರವಾಸ ಕಥನ, ಮೈಸೂರು: ಅನಂತ ಪ್ರಕಾಶನ.
ಆಗುಂಬೆ ಎಸ್. ನಟರಾಜ್, (2002), ಯಾತ್ರಾವಳಿ, ಬೆಂಗಳೂರು: ಹಂಸ ಪ್ರಕಾಶನ.
ಲಕ್ಷ್ಮಣ ಮೂರ್ತಿ ಕೆ.ವಿ., (2022), ಶ್ರೀಮಾತಾ ವೈಷ್ಣೋದೇವಿ ...ತಾಯಿಯ ಕರೆ, ಬೆಂಗಳೂರು: ಸ್ನೇಹ ಬುಕ್ ಹೌಸ್.
ವೆಂಕಟೇಶ್ ಎಸ್., (2004), ಮಾನಸ ಸರೋವರ (ಪ್ರವಾಸ ಕಥನ), ಬೆಂಗಳೂರು: ಪಾಂಚಜನ್ಯ ಪಬ್ಲಿಕೇಷನ್ಸ್.
ರಘೋತ್ತಮ ತೀರ್ಥ, (2010), ಕರ್ನಾಟಕ ತೀರ್ಥಕ್ಷೇತ್ರ ದರ್ಶನ, ಮೈಸೂರು: ಶ್ರೀಮತಿ ಭಾರತೀಬಾಯಿ ಪ್ರಕಾಶನ.
ಕುಲಕರ್ಣಿ ಎಸ್.ಎಲ್., (2001), ಭಾರತ ದರ್ಶನ, ಬಿಜಾಪುರ: ಲೀಲಾ ಪಬ್ಲಿಕೇಷನ್ಸ್.
ಮಾವಿನಕೆರೆ ರಂಗನಾಥನ್ (ಸಂ), (2010), ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ (ಸಂಪುಟ-1).
ಜೀವಿ ಕುಲಕರ್ಣಿ, (2010), ಬೇಂದ್ರೆ ಸಮಗ್ರ ಕಾವ್ಯ ದರ್ಶನ, ಹುಬ್ಬಳ್ಳಿ: ಪುರೋಗಾಮಿ ಸಾಹಿತ್ಯ ಪ್ರಕಾಶನ.
ಕರ್ಮವೀರ ವಾರಪತ್ರಿಕೆ, (25 ಜನವರಿ 2026), ಸಂಪುಟ: 83, ಸಂಚಿಕೆ: 18, ಹುಬ್ಬಳ್ಳಿ: ಲೋಕಶಿಕ್ಷಣ ಟ್ರಸ್ಟ್.