ಹಂದ್ರಾಳರ ಕಥೆಗಳಲ್ಲಿ ಗ್ರಾಮ ಸಂಸ್ಕೃತಿ
Main Article Content
Abstract
ಕನ್ನಡದ ಪ್ರಮುಖ ಕಥೆಗಾರರಾದ ಕೇಶವರೆಡ್ಡಿ ಹಂದ್ರಾಳರ ಸಾಹಿತ್ಯದಲ್ಲಿ ಗ್ರಾಮೀಣ ಸಂಸ್ಕೃತಿಯ ಅನನ್ಯತೆ ಮತ್ತು ಸಂಕೀರ್ಣತೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಹಂದ್ರಾಳರು ಬಂಡಾಯ-ದಲಿತ ಸಂವೇದನೆಯ ಹಿನ್ನೆಲೆಯಲ್ಲಿ ಗ್ರಾಮೀಣ ಬದುಕಿನ ವಾಸ್ತವ, ಮೌಖಿಕ ಪರಂಪರೆ, ವಿವಾಹ ಪದ್ಧತಿಗಳು ಹಾಗೂ ಆಚರಣೆಗಳನ್ನು ತಮ್ಮ ಕಥೆಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ್ಯ ನಂತರದ ಭಾರತದ ಗ್ರಾಮೀಣ ಸ್ಥಿತ್ಯಂತರಗಳು, ರಾಜಕೀಯ ದಬ್ಬಾಳಿಕೆ ಹಾಗೂ ಜಾಗತೀಕರಣದ ಅಡಿಯಲ್ಲಿ ನಶಿಸುತ್ತಿರುವ ಮಾನವೀಯ ಸಂಬಂಧಗಳನ್ನು ಇವರ ಕಥೆಗಳು ಪ್ರತಿರೋಧದ ನೆಲೆಯಲ್ಲಿ ಚಿತ್ರಿಸುತ್ತವೆ. ಮಾಸ್ತಿ, ಕುವೆಂಪು ಮತ್ತು ಕಾರಂತರ ಪರಂಪರೆಯನ್ನು ಮುಂದುವರಿಸುವ ಹಂದ್ರಾಳರು, ಹಳ್ಳಿಯ ಬದುಕು ಮತ್ತು ನಗರ ಸಂಸ್ಕೃತಿಗಳ ನಡುವಿನ ಕೊಂಡಿಯನ್ನು ಗುರುತಿಸುತ್ತಾ, ಶೋಷಿತರ ಧ್ವನಿಯಾಗಿ ಹೇಗೆ ಹೊರಹೊಮ್ಮಿದ್ದಾರೆ ಎಂಬುದರ ಕುರಿತು ಇಲ್ಲಿ ಚರ್ಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಸುರೇಶ ಪಾಟೀಲ, ಒಂದು ಹಿಡಿಮಣ್ಣು, ಪು.ಸಂ. 08
ಕೇಶವರೆಡ್ಡಿ ಹಂದ್ರಾಳ, ಬಾರಕ್ಕ ಬೆಳದಿಂಗಳೆ, ಪು.ಸಂ. 14
ಕೇಶವರೆಡ್ಡಿ ಹಂದ್ರಾಳ, ಹಂದ್ರಾಳ, ಪು.ಸಂ. 12
ಕೇಶವರೆಡ್ಡಿ ಹಂದ್ರಾಳ, ಹಂದ್ರಾಳ, ಪು.ಸಂ. 15