ಪರಿಸರ ಸಾಹಿತ್ಯ ಮತ್ತು ಹಸಿರು ಚಿಂತನೆ: ಪೂರ್ಣಚಂದ್ರ ತೇಜಸ್ವಿಯವರ ಪರಿಸರ ಜಾಗೃತಿ ಚಿಂತನೆ
Main Article Content
Abstract
ಕನ್ನಡದ ಶ್ರೇಷ್ಠ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಬದುಕನ್ನೇ ಪರಿಸರದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡವರು. ಕೇವಲ ಭಾವನಾತ್ಮಕವಾಗಿರದೆ, ವೈಜ್ಞಾನಿಕ ದೃಷ್ಟಿಕೋನದಿಂದ ಪ್ರಕೃತಿಯನ್ನು ಗ್ರಹಿಸಿದ ಅವರ ವಿಶಿಷ್ಟ ನಿಲುವುಗಳನ್ನು ಇಲ್ಲಿ ಚರ್ಚಿಸಲಾಗಿದೆ. ಸಹ್ಯಾದ್ರಿ ಪರ್ವತ ಶ್ರೇಣಿಗಳ ಮಹತ್ವ, ಮರಗಳ ನಾಶದಿಂದಾಗುವ ಸೂಕ್ಷ್ಮ ಜೀವಿಗಳ ಸಂಕಷ್ಟ ಹಾಗೂ ಅವೈಜ್ಞಾನಿಕ ಅಭಿವೃದ್ಧಿ ಮಾದರಿಗಳ ಕುರಿತು ತೇಜಸ್ವಿ ಎತ್ತಿದ ಧ್ವನಿ ಇಂದಿಗೂ ಪ್ರಸ್ತುತ. ಮೈಸೂರಿನಿಂದ ಮೂಡಿಗೆರೆಗೆ ಸ್ಥಳಾಂತರಗೊಂಡು ಕೃಷಿ ಮತ್ತು ಛಾಯಾಗ್ರಹಣದ ಮೂಲಕ ಪ್ರಕೃತಿಯೊಂದಿಗೆ ಒಂದಾದ ಅವರ ಜೀವನಶೈಲಿ, ಟ್ರೆಕ್ಕಿಂಗ್ ಮತ್ತು ಮೀನುಗಾರಿಕೆಯ ಹಿಂದಿನ ನೈತಿಕತೆಯನ್ನು ಪ್ರಶ್ನಿಸುವ ಪರಿ ಇಲ್ಲಿ ವ್ಯಕ್ತವಾಗಿದೆ. ಮಾನವನ ಅಸ್ತಿತ್ವಕ್ಕೆ ಪ್ರಕೃತಿಯ ಅನಿವಾರ್ಯತೆಯನ್ನು ಸಾರುವ ಅವರ ‘ಹಸಿರು ಚಿಂತನೆ’ ಮತ್ತು ಕೃತಿಗಳು ಯುವ ಪೀಳಿಗೆಗೆ ಪರಿಸರ ಜಾಗೃತಿಯ ದಾರಿದೀಪವಾಗಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1993), ಪರಿಸರದ ಕಥೆ, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (2003), ಹಕ್ಕಿ ಪುಕ್ಕ, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1996), ಹೆಜ್ಜೆ ಮೂಡಿದ ಹಾದಿ, ಮೈಸೂರು: ಪುಸ್ತಕ ಪ್ರಕಾಶನ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1999), ವಿಸ್ಮಯ ವಿಶ್ವ-2, ಮೈಸೂರು: ಪುಸ್ತಕ ಪ್ರಕಾಶನ.