ಭಾರತೀಯ ಸಂದರ್ಭದಲ್ಲಿ ಮಠದ ಪರಿಕಲ್ಪನೆ

Main Article Content

ನಿಶ್ಮಿತ ಇ. ಆರ್.

Abstract

ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಮಠಗಳು ಕೇವಲ ಆಧ್ಯಾತ್ಮಿಕ ಕೇಂದ್ರಗಳಾಗಿ ಉಳಿಯದೆ, ಸಮಾಜದ ಸರ್ವತೋಮುಖ ಬೆಳವಣಿಗೆಯ ಆಧಾರಸ್ತಂಭಗಳಾಗಿ ವಿಕಸನಗೊಂಡಿವೆ. ಮುನಿಗಳ ವಾಸಸ್ಥಾನವಾಗಿ ಆರಂಭವಾದ ಈ ಪರಂಪರೆಯು ಗುರುಕುಲ ಮಾದರಿಯಿಂದ ಆಧುನಿಕ ಶಿಕ್ಷಣ ಕೇಂದ್ರಗಳವರೆಗೆ ಬೆಳೆದು ಬಂದ ಹಾದಿ ಅನನ್ಯವಾದುದು. ಜ್ಞಾನದಾಸೋಹ ಮತ್ತು ಅನ್ನದಾಸೋಹದ ಮೂಲಕ ಅಜ್ಞಾನವನ್ನು ಹೋಗಲಾಡಿಸುವ ಮಠಗಳು, ಸಾಮಾಜಿಕ ನ್ಯಾಯ, ಕಲೆ ಮತ್ತು ಸಾಹಿತ್ಯದ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕರ್ನಾಟಕದ ವಿಶಿಷ್ಟ ಮಠಗಳಾದ ಸಾಲಿ ಮಠ, ಓದಿಸು ಮಠ ಮತ್ತು ವಿರಕ್ತ ಮಠಗಳು ಶಿಕ್ಷಣದ ವಿವಿಧ ಹಂತಗಳನ್ನು ಪ್ರತಿನಿಧಿಸುತ್ತಾ ವೃತ್ತಿ ಕೌಶಲ ಹಾಗೂ ವೈಚಾರಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸಿವೆ. ಕಾಲದ ಸವಾಲುಗಳಿಗೆ ತಕ್ಕಂತೆ ಬದಲಾಗುತ್ತಾ, ಇಂದಿಗೂ ಜನಮಾನಸದಲ್ಲಿ ಬೇರೂರಿರುವ ಮಠ ಪರಂಪರೆಯ ಐತಿಹಾಸಿಕ ಮಹತ್ವ ಹಾಗೂ ಸಾಮಾಜಿಕ ಕೊಡುಗೆಗಳನ್ನು ಈ ಪ್ರಬಂಧವು ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ನಿಶ್ಮಿತ ಇ. ಆರ್.

ಶಾರದ ನಿಲಯ, ಎಡನೀರು ಅಂಚೆ, ಎಡನೀರು, ಕಾಸರಗೋಡು.

References

ಕರ್ನಾಟಕದ ಮಠಗಳು ಮತ್ತು ಕನ್ನಡ ಸಾಹಿತ್ಯ (2007) – ಡಾ. ಕೆ ರವೀಂದ್ರನಾಥ