ಶಾಸನಗಳಲ್ಲಿ ದಾಖಲೆಗೊಂಡಂತೆ ಮೈಸೂರು ಸಂಸ್ಥಾನದ ಬೆಳವಣಿಗೆ

Main Article Content

ರಾಜೇಶ್ ಜೆ.

Abstract

ಮೈಸೂರು ಸಂಸ್ಥಾನವು ಒಂದು ಪುಟ್ಟ ಪಾಳೆಪಟ್ಟಿನಿಂದ ಬಲಿಷ್ಠ ಸಾಮ್ರಾಜ್ಯವಾಗಿ ಬೆಳೆದು ಬಂದ ಐತಿಹಾಸಿಕ ಪಥವನ್ನು ಈ ಬರಹವು ಶಾಸನೋಕ್ತ ಆಧಾರಗಳೊಂದಿಗೆ ವಿಶ್ಲೇಷಿಸುತ್ತದೆ. ವಿಜಯನಗರದ ಪತನಾನಂತರ ಯದುವಂಶದ ಅರಸರು ಸ್ವತಂತ್ರಗೊಂಡು ರಾಜ್ಯ ವಿಸ್ತರಿಸಿದ ಕ್ರಮ, ರಾಜ ಒಡೆಯರ್ ಮತ್ತು ಕಂಠೀರವ ನರಸರಾಜ ಒಡೆಯರ್ ಕಾಲದ ಧಾರ್ಮಿಕ ದತ್ತಿಗಳು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರ ಕಾಲದ ಯುದ್ಧತಂತ್ರಗಳನ್ನು ಇಲ್ಲಿ ಚರ್ಚಿಸಲಾಗಿದೆ. ವಿಶೇಷವಾಗಿ ಪಾಂಡವಪುರದ ‘ಫ್ರೆಂಚ್ ರಾಕ್ಸ್’ ಇತಿಹಾಸ, ಫ್ರೆಂಚ್ ಸೈನ್ಯದ ಒಡನಾಟ ಮತ್ತು ಮೈಸೂರು ಅರಸರ ಸಾಮಾಜಿಕ ಕಾಳಜಿಗಳನ್ನು ಶಾಸನಗಳ ಬೆಳಕಿನಲ್ಲಿ ದಾಖಲಿಸಲಾಗಿದೆ. ಮೈಸೂರು ಸಂಸ್ಥಾನದ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಸನಗಳು ಕೇವಲ ದಾಖಲೆಗಳಲ್ಲದೆ, ಸಾಂಸ್ಕೃತಿಕ ವಿಕಸನದ ಜೀವಂತ ಸಾಕ್ಷಿಗಳಾಗಿರುವುದನ್ನು ಲೇಖನವು ನಿರೂಪಿಸುತ್ತದೆ.

Article Details

Section

Research Articles

Author Biography

ರಾಜೇಶ್ ಜೆ.

ಪ್ರಾಂಶುಪಾಲರು, ವಿಶ್ವೇಶ್ವರಪುರ ಕಲೆ ಮತ್ತು ವಾಣಿಜ್ಯ ಪದವಿ ಕಾಲೇಜು, ಕೆ.ಆರ್ ರಸ್ತೆ, ಬೆಂಗಳೂರು.

References

ಗೋಪಾಲ್ ಬಿ.ಆರ್. (ಸಂ), (1977), ಎಪಿಗ್ರಾಫಿಯಾ ಕರ್ನಾಟಕ (ಸಂಪುಟ 6), ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ. (ಶಾಸನ ಸಂ. 214)

ಗೋಪಾಲ್ ಬಿ.ಆರ್. (ಸಂ), (1977), ಎಪಿಗ್ರಾಫಿಯಾ ಕರ್ನಾಟಕ (ಸಂಪುಟ 6), ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ. (ಶಾಸನ ಸಂ. 169)

ಪಾಲಾಕ್ಷ, (2೦೦೦), ಸಮಗ್ರ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ, ತಿಪಟೂರು: ಶಶಿ ಪ್ರಕಾಶನ, ಪು.ಸಂ. 49

ಮಂಜುನಾಥ್ ಎಂ.ಜಿ., ಕ್ಷೇತ್ರಕಾರ್ಯದ ಮಾಹಿತಿ (ಅಪ್ರಕಟಿತ).

ಗೋಪಾಲ್ ಬಿ.ಆರ್. (ಸಂ), (1977), ಎಪಿಗ್ರಾಫಿಯಾ ಕರ್ನಾಟಕ (ಸಂಪುಟ 6), ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ. (ಶಾಸನ ಸಂ. 171-197)

ಬದರಿನಾಥ್, (2೦೦8), ಲೋಕಪಾವನ ಸ್ಮರಣ ಸಂಚಿಕೆ (ಸಂ. ಎಂ. ಕೃಷ್ಣೇಗೌಡ). ಮಂಡ್ಯ, ಪು.ಸಂ. 361

ಅದೇ, ಪು.ಸಂ. 361

ಅದೇ, ಪು.ಸಂ. 361

ಪಾಲಾಕ್ಷ, (2೦೦೦), ಸಮಗ್ರ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ, ತಿಪಟೂರು: ಶಶಿ ಪ್ರಕಾಶನ, ಪು.ಸಂ. 44