ಹೊಸತಲೆಮಾರಿನ ಕನ್ನಡ ಸಣ್ಣಕತೆಗಳು: ಕುಟುಂಬದ ಪರಿಕಲ್ಪನೆ
Main Article Content
Abstract
ಕನ್ನಡ ಸಾಹಿತ್ಯದ ಸಣ್ಣಕತೆಗಳು ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿವೆ. ಜಾಗತೀಕರಣ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ, ಭಾರತೀಯ ಪರಂಪರೆಯ ಅವಿಭಕ್ತ ಕುಟುಂಬ ವ್ಯವಸ್ಥೆಯು ಕುಸಿಯುತ್ತಿದ್ದು, ವಿಭಕ್ತ ಕುಟುಂಬಗಳೂ ಛಿದ್ರಗೊಂಡು ವ್ಯಕ್ತಿಗತ ಬದುಕಿನತ್ತ ಸಾಗುತ್ತಿವೆ. ಶಿಕ್ಷಣ, ಉದ್ಯೋಗ, ಆಸ್ತಿ ವ್ಯಾಮೋಹ ಹಾಗೂ ಮೂಢನಂಬಿಕೆಗಳು ರಕ್ತಸಂಬಂಧಗಳ ನಡುವಿನ ಭಾವನಾತ್ಮಕ ಬೆಸುಗೆಯನ್ನು ಹೇಗೆ ಸಡಿಲಗೊಳಿಸುತ್ತಿವೆ ಎಂಬುದನ್ನು ಅಮರೇಶ ನುಗಡೋಣಿ, ವಸುಧೇಂದ್ರ, ಟಿ.ಎಸ್. ಗೊರವರ ಮತ್ತು ಎಂ.ಎಸ್. ವೇದಾ ಅವರ ಕತೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೌಟುಂಬಿಕ ಸಾಮರಸ್ಯವು ಮರೆಯಾಗಿ, ಸ್ವಾರ್ಥ ಮತ್ತು ಆರ್ಥಿಕ ಲಾಭಕ್ಕಾಗಿ ಮಾನವೀಯ ಸಂಬಂಧಗಳು ಹೇಗೆ ನಶಿಸುತ್ತಿವೆ ಹಾಗೂ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೇಗೆ ಹೆಚ್ಚುತ್ತಿದೆ ಎನ್ನುವ ವರ್ತಮಾನದ ಕಟು ವಾಸ್ತವವನ್ನು ಸಣ್ಣಕತೆಗಳು ದಾಖಲಿಸಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.ಕನ್ನಡ ಸಾಹಿತ್ಯದ ಸಣ್ಣಕತೆಗಳು ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿವೆ. ಜಾಗತೀಕರಣ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ, ಭಾರತೀಯ ಪರಂಪರೆಯ ಅವಿಭಕ್ತ ಕುಟುಂಬ ವ್ಯವಸ್ಥೆಯು ಕುಸಿಯುತ್ತಿದ್ದು, ವಿಭಕ್ತ ಕುಟುಂಬಗಳೂ ಛಿದ್ರಗೊಂಡು ವ್ಯಕ್ತಿಗತ ಬದುಕಿನತ್ತ ಸಾಗುತ್ತಿವೆ. ಶಿಕ್ಷಣ, ಉದ್ಯೋಗ, ಆಸ್ತಿ ವ್ಯಾಮೋಹ ಹಾಗೂ ಮೂಢನಂಬಿಕೆಗಳು ರಕ್ತಸಂಬಂಧಗಳ ನಡುವಿನ ಭಾವನಾತ್ಮಕ ಬೆಸುಗೆಯನ್ನು ಹೇಗೆ ಸಡಿಲಗೊಳಿಸುತ್ತಿವೆ ಎಂಬುದನ್ನು ಅಮರೇಶ ನುಗಡೋಣಿ, ವಸುಧೇಂದ್ರ, ಟಿ.ಎಸ್. ಗೊರವರ ಮತ್ತು ಎಂ.ಎಸ್. ವೇದಾ ಅವರ ಕತೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೌಟುಂಬಿಕ ಸಾಮರಸ್ಯವು ಮರೆಯಾಗಿ, ಸ್ವಾರ್ಥ ಮತ್ತು ಆರ್ಥಿಕ ಲಾಭಕ್ಕಾಗಿ ಮಾನವೀಯ ಸಂಬಂಧಗಳು ಹೇಗೆ ನಶಿಸುತ್ತಿವೆ ಹಾಗೂ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೇಗೆ ಹೆಚ್ಚುತ್ತಿದೆ ಎನ್ನುವ ವರ್ತಮಾನದ ಕಟು ವಾಸ್ತವವನ್ನು ಸಣ್ಣಕತೆಗಳು ದಾಖಲಿಸಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ರಾಜೇಂದ್ರ ಚೆನ್ನಿ ಮತ್ತು ಸಿರಾಜ್ ಅಹಮದ್ ಎಸ್. (ಸಂ), (2೦೦4), ಜಾಗತೀಕರಣ: ಒಂದು ಸಮಗ್ರ ಮಂಥನ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಗೊರವರ ಟಿ.ಎಸ್., (2೦12), ಕುದರಿ ಮಾಸ್ತರ, ಚನ್ನಪಟ್ಟಣ: ಪಲ್ಲವ ಪ್ರಕಾಶನ.
ವಸುಧೇಂದ್ರ, (2೦1೦), ಚೇಳು, ಬೆಂಗಳೂರು: ಛಂದ ಪುಸ್ತಕ.
ವೇದಾ ಎಂ.ಎಸ್., (2೦1೦), ಎಂ.ಎಸ್.ವೇದಾರ ಸಣ್ಣಕತೆಗಳು ಈತನಕ, ಮೈಸೂರು: ಸಂವಹನ ಪಬ್ಲಿಕೇಷನ್ಸ್.