ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಭಾರತೀಯ ಭಾಷೆ

Main Article Content

ಎನ್. ಬಿ. ಝರೆ

Abstract

ಭಾರತೀಯ ಜ್ಞಾನಪರಂಪರೆ ಗಣಿತ, ಖಗೋಳವಿಜ್ಞಾನ, ವೈದ್ಯಕೀಯ, ವಾಸ್ತುಶಿಲ್ಪ, ಲಲಿತಕಲೆಗಳು, ಯೋಗ ಹಾಗೂ ದರ್ಶನಶಾಸ್ತ್ರದಂತಹ ಅನೇಕ ಕ್ಷೇತ್ರಗಳಲ್ಲಿ ವಿಶ್ವಮಾನ್ಯವಾದ ಕೊಡುಗೆಗಳನ್ನು ನೀಡಿದೆ. ಈ ಜ್ಞಾನಪರಂಪರೆಯ ಆಧಾರದ ಮೇಲೆ ರೂಪುಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ–2020 ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದೆ. ಈ ನೀತಿಯು ಅಧ್ಯಾಪಕರ ಸಬಲೀಕರಣ, ಸಮಾನ ಮತ್ತು ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನದ ಸಮರ್ಥ ಬಳಕೆ, ಸಂಶೋಧನಾ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುತ್ತದೆ. ವಿಶೇಷವಾಗಿ ಮಾತೃಭಾಷೆ/ಮನೆಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿಸುವ ಮೂಲಕ ಕಲಿಕೆ ಪರಿಣಾಮಕಾರಿಯಾಗಬೇಕು ಎಂಬ ಆಶಯವನ್ನು ಇದು ಪ್ರತಿಪಾದಿಸುತ್ತದೆ. ಜಾಗತೀಕರಣದ ಪರಿಣಾಮವಾಗಿ ಸಣ್ಣ ಭಾಷೆಗಳು ಅಳಿವಿನ ಅಂಚಿಗೆ ತಲುಪುತ್ತಿರುವ ಈ ಸಂದರ್ಭದಲ್ಲಿ, ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಹೊಣೆಗಾರಿಕೆಯನ್ನು ಶಿಕ್ಷಣ ವ್ಯವಸ್ಥೆ ಹೊತ್ತುಕೊಳ್ಳಬೇಕಾದ ಅಗತ್ಯವನ್ನು ಈ ಲೇಖನ ವಿಶ್ಲೇಷಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ–2020ರ ಭಾಷಾ ನೀತಿ, ಅದರ ಸವಾಲುಗಳು ಹಾಗೂ ಸಾಧ್ಯತೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಮೂಲಕ ಭಾರತೀಯ ಭಾಷೆಗಳ ಉಳಿವು ಮತ್ತು ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರವನ್ನು ಈ ಲೇಖನ ಪ್ರಸ್ತುತಪಡಿಸುತ್ತದೆ.

Article Details

Section

Research Articles

Author Biography

ಎನ್. ಬಿ. ಝರೆ

ಸಂಶೋಧನಾರ್ಥಿ, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ.

How to Cite

ಎನ್. ಬಿ. ಝರೆ. (2026). ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಭಾರತೀಯ ಭಾಷೆ. ಅಕ್ಷರಸೂರ್ಯ (AKSHARASURYA), 12(02), 234 to 241. https://aksharasurya.com/index.php/latest/article/view/365

References

ರಾಷ್ಟ್ರೀಯ ಶಿಕ್ಷಣ ನೀತಿ-2020, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ

ಎಸ್. ಕೇಶವ ಮೂರ್ತಿ, ಶಿಕ್ಷಣ ಸಿದ್ಧಾಂತ, ವಿದ್ಯಾನಿಧಿ ಪ್ರಕಾಶನ, ಗದಗ- 1999

ರಾಷ್ಟ್ರೀಯ ಶಿಕ್ಷಣ ನೀತಿ-2020, ಡಾ. ನಾಗರಾಜ ಆರ್. ಮತ್ತು ಡಾ. ಪ್ರವೀಣ್ ಚಂದ್ರ ಎನ್, ಸಂಪದಾ ಪ್ರಕಾಶನ, ಬೆಂಗಳೂರು-2021