ಕರಾವಳಿಯಲ್ಲಿ ಕನ್ನಡ ಮತ್ತು ಕೊಂಕಣಿ (ಸಾರಸ್ವತ) ಭಾಷಾ ಬಾಂಧವ್ಯ
Main Article Content
Abstract
ಕರ್ನಾಟಕ ರಾಜ್ಯದ ಪಶ್ಚಿಮ ಭಾಗದಲ್ಲಿರುವ ಕರಾವಳಿ ಪ್ರದೇಶವು ಕಾರವಾರದಿಂದ ಕಾಸರಗೋಡಿನವರೆಗೆ ವಿಸ್ತಾರಗೊಂಡಿದ್ದು, ಇತಿಹಾಸದಲ್ಲಿ ‘ಕೆನರಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪ್ರದೇಶವು ಭಾಷಿಕ, ಸಾಂಸ್ಕೃತಿಕ ವೈವಿಧ್ಯತೆಯ ವಿಶಿಷ್ಟ ಕೇಂದ್ರವಾಗಿದೆ. ಇಲ್ಲಿ ಕನ್ನಡ ರಾಜ್ಯಭಾಷೆಯಾಗಿ ಬಳಕೆಯಲ್ಲಿದ್ದರೂ, ತುಳು, ಕೊಂಕಣಿ, ಬ್ಯಾರಿ, ಮಲಯಾಳಂ, ಉರ್ದು, ಮರಾಠಿ ಹಾಗೂ ಕನ್ನಡದ ವಿವಿಧ ಉಪಭಾಷೆಗಳು ಸಮಾನವಾಗಿ ಜೀವಂತವಾಗಿವೆ. ಅವುಗಳಲ್ಲಿ ಕೊಂಕಣಿ ಭಾಷೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ಯಿಕ ವೈಭವವನ್ನು ಹೊಂದಿದೆ. ಸ್ವತಂತ್ರ ಲಿಪಿಯಿಲ್ಲದಿದ್ದರೂ, ಕೊಂಕಣಿ ಭಾಷೆ ಕರಾವಳಿಯಲ್ಲಿ ಕನ್ನಡ ಲಿಪಿಯ ಮೂಲಕ ಶ್ರೀಮಂತ ಸಾಹಿತ್ಯವನ್ನು ನಿರ್ಮಿಸಿಕೊಂಡಿದೆ. ಈ ಲೇಖನದಲ್ಲಿ ಕರ್ನಾಟಕ ಕರಾವಳಿಯ ಇತಿಹಾಸ, ಕೊಂಕಣಿ ಭಾಷೆಯ ಉದ್ಭವ–ವಿಕಾಸ, ಉಪಭಾಷೆಗಳು, ಶಾಸನಾಧಾರಗಳು, ವಿದ್ವಾಂಸರ ಅಭಿಪ್ರಾಯಗಳು ಹಾಗೂ ಕೊಂಕಣಿ–ಕನ್ನಡ ಭಾಷೆಗಳ ಪರಸ್ಪರ ಸಂಬಂಧವನ್ನು ವಿಶ್ಲೇಷಿಸಲಾಗಿದೆ. ಜೊತೆಗೆ ಕೊಂಕಣಿ ಭಾಷೆಯ ಸಂವಿಧಾನಾತ್ಮಕ ಮಾನ್ಯತೆ, ಸಾಹಿತ್ಯಿಕ ಬೆಳವಣಿಗೆ ಮತ್ತು ಭಾಷಾ–ಸಾಂಸ್ಕೃತಿಕ ಉಳಿವು–ಬೆಳವಣಿಗೆಗೆ ಕೈಗೊಂಡ ಸಂಸ್ಥಾತ್ಮಕ ಪ್ರಯತ್ನಗಳನ್ನು ಈ ಅಧ್ಯಯನವು ವಿವರಿಸುತ್ತದೆ. ಕರಾವಳಿಯಲ್ಲಿ ಕನ್ನಡ ಮತ್ತು ಕೊಂಕಣಿ ಭಾಷಿಕರ ನಡುವೆ ಬೆಳೆದ ಸಹಜ ಸಹಬಾಳ್ವೆ, ಸಾಂಸ್ಕೃತಿಕ ಸೌಹಾರ್ದತೆ ಮತ್ತು ಭಾಷಿಕ ಸಮನ್ವಯತೆಯನ್ನು ಈ ಲೇಖನದಲ್ಲಿ ಕಾಣಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಐಗಳ್ ಗಣಪತಿ ರಾವ್, (2021), ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ.
ಪ್ರಭು ಮುಕುಂದ ಎಂ. (ಸಂ), (2000), ಪೊಲಿ, ಮಂಗಳೂರು: ಜಿಲ್ಲಾಧಿಕಾರಿ (ದಕ್ಷಿಣ ಕನ್ನಡ ಜಿಲ್ಲೆ).
ಹಿರಿಯಡ್ಕ ಮುರಳೀಧರ ಉಪಾಧ್ಯಾಯ (ಸಂ), (1995), ಕೊಂಕಣಿ ಭಾಷೆ-ಸಾಹಿತ್ಯ, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ.
Prabhu Sashikanth K (Translated), (2022), Gowda Saraswat Konkani Brahmins- A History, Ernakulam: P.G. Kamath Foundation.
ವಿವೇಕ ರೈ ಬಿ.ಎ. (ಸಂ), (2016), ಮಂಗಳೂರು ದರ್ಶನ (ಸಂಪುಟ-1), ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ.
ಕೇಕುಣ್ಣಾಯ ಪದ್ಮನಾಭ ಕೆ., (2015), ಕರಾವಳಿಯ ಭಾಷಾನುಸಂಧಾನ, ಮಂಗಳಗಂಗೋತ್ರಿ: ಪ್ರಸಾರಂಗ, ಮಂಗಳೂರು ವಿಶ್ವವಿದ್ಯಾನಿಲಯ.
ದೇಸಾಯಿ ದಿನಕರ, (2007), ಸಮಗ್ರ ಕಾವ್ಯ, ಅಂಕೋಲ: ಕೆನರಾ ವೆಲ್ಫೇರ್ ಟ್ರಸ್ಟ್.
ಗೋವಿಂದ ಪೈ, ಕನ್ನಡ ಮೊರೆ (ಪ್ರಬಂಧ ಸಂಕಲನ), ಮೈಸೂರು: ಕಾವ್ಯಾಲಯ.