ಸುಧಾಮೂರ್ತಿಯವರ ಕಾಂಬರಿಗಳಲ್ಲಿ ವಿವಾಹ ಮತ್ತು ಮಹಿಳೆ

Main Article Content

ಟಿ. ಸುಗುಣ

Abstract

ಕನ್ನಡದ ಪ್ರಮುಖ ಲೇಖಕಿ ಸುಧಾಮೂರ್ತಿಯವರ ಕಾದಂಬರಿಗಳಲ್ಲಿ ಮಹಿಳೆ ಮತ್ತು ವಿವಾಹ ಸಂಸ್ಥೆಯನ್ನು ಚಿತ್ರಿಸಿರುವ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. 'ಮಹಾಶ್ವೇತೆ', 'ಅವ್ಯಕ್ತ', 'ಡಾಲರ್ ಸೊಸೆ' ಮುಂತಾದ ಕೃತಿಗಳಲ್ಲಿ ಕಂಡುಬರುವ ಸ್ತ್ರೀ ಪಾತ್ರಗಳು ಸಾಂಪ್ರದಾಯಿಕ ಚೌಕಟ್ಟು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ಎದುರಿಸುತ್ತವೆ. ವರದಕ್ಷಿಣೆ ಸಮಸ್ಯೆ, ಗಂಡು ಮಗುವಿನ ಮೇಲಿನ ವ್ಯಾಮೋಹ, ಮತ್ತು ವಿವಾಹದ ನಂತರ ಮಹಿಳೆ ಅನುಭವಿಸುವ ಕೌಟುಂಬಿಕ ಒತ್ತಡಗಳನ್ನು ಲೇಖಕಿ ವಾಸ್ತವಿಕವಾಗಿ ಚಿತ್ರಿಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದರೂ, ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣಿನ ಸ್ಥಾನಮಾನ ಮತ್ತು ಅವಳ ಮೇಲಿನ ಶೋಷಣೆ ಇನ್ನೂ ಬದಲಾಗಬೇಕಿದೆ. ಆಧುನಿಕ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಜೀವನಶೈಲಿಯು ದಾಂಪತ್ಯ ಸಂಬಂಧಗಳ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಸುಧಾಮೂರ್ತಿಯವರ ಪಾತ್ರಗಳ ಮೂಲಕ ಲೇಖನದಲ್ಲಿ ಗುರುತಿಸಲಾಗಿದೆ.

Article Details

Section

Research Articles

Author Biography

ಟಿ. ಸುಗುಣ

ಸಹಾಯಕ ಶಿಕ್ಷಕಿ, ಎಲ್. ಎಚ್. ಇಂಟರ್‌ನ್ಯಾಷನಲ್ ಸ್ಕೂಲ್, ಕೋಲಾರ ಜಿಲ್ಲೆ.

References

ಅತಿರಿಕ್ತ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಅವ್ಯಕ್ತ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಋಣ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಡಾಲರ್ ಸೊಸೆ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ತುಮುಲ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಮಹಾಶ್ವೇತೆ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಪರಿಧಿ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಯಶಸ್ವಿ, ಸುಧಾಮೂರ್ತಿ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಮಹಿಳಾ ಸಾಹಿತ್ಯ ಚರಿತ್ರೆ, ಶ್ರೀಮತಿ ಎಚ್.ಎಸ್. ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ ೨೦೦೬

ಮಹಿಳಾ ಅಧ್ಯಯನ, ನೇಮಿಚಂದ್ರ, ಅಂಕಿತ ಪುಸ್ತಕ, ಬೆಂಗಳೂರು ೨೦೦೩