ಶಿಶುನಾಳ ಶರೀಫರ ತತ್ವಪದಗಳ ಭಾಷಿಕ ಅನನ್ಯತೆ

Main Article Content

ರವಿಶಂಕರ ಜಿ.ಕೆ.

Abstract

ಉತ್ತರ ಕರ್ನಾಟಕದ ದೇಸಿ ಭಾಷೆಯ ಸೊಗಡನ್ನು ಬಳಸಿಕೊಂಡು ಶಿಶುನಾಳ ಶರೀಫರು ರಚಿಸಿದ ತತ್ವಪದಗಳು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಇಸ್ಲಾಂ ಮತ್ತು ವೀರಶೈವ ತತ್ವಗಳ ಸಮನ್ವಯತೆಯನ್ನು ಇವರ ಸಾಹಿತ್ಯದಲ್ಲಿ ಕಾಣಬಹುದು. ಹುಚ್ಚುನಾಯಿ, ಮಂಗ, ಗಿರಣಿ ಮುಂತಾದ ದೈನಂದಿನ ಬದುಕಿನ ರೂಪಕಗಳ ಮೂಲಕ ಗಹನವಾದ ಆಧ್ಯಾತ್ಮಿಕ ವಿಚಾರಗಳನ್ನು ಶರೀಫರು ಜನಸಾಮಾನ್ಯರಿಗೆ ತಿಳಿಸಿದ್ದಾರೆ. ಅವರ ಭಾಷಾ ಪ್ರಯೋಗ, ದೇಸಿ ಶಬ್ದ ಸಂಪತ್ತು ಮತ್ತು ಅನ್ಯೋಕ್ತಿ ವಿಧಾನಗಳು ಕ್ಲಿಷ್ಟವಾದ ವೇದಾಂತವನ್ನು ಸರಳವಾಗಿ ಬಿಡಿಸಿಡುತ್ತವೆ. ಮನುಷ್ಯನ ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವ ಬಗೆಯನ್ನು ವಿವರಿಸಲು ಪ್ರಾಣಿ ಪ್ರಪಂಚ ಮತ್ತು ಆಧುನಿಕ ಯಂತ್ರಗಳಾದ ಗಿರಣಿಯನ್ನು ಸಂಕೇತಗಳಾಗಿ ಬಳಸಿದ್ದಾರೆ.

Article Details

Section

Research Articles

Author Biography

ರವಿಶಂಕರ ಜಿ.ಕೆ.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಎಸ್.ಡಿ.ಎಮ್. ಕಾಲೇಜು, ಉಜಿರೆ.

How to Cite

ರವಿಶಂಕರ ಜಿ.ಕೆ. (2023). ಶಿಶುನಾಳ ಶರೀಫರ ತತ್ವಪದಗಳ ಭಾಷಿಕ ಅನನ್ಯತೆ. ಅಕ್ಷರಸೂರ್ಯ (AKSHARASURYA), 2(01), 06 to 10. https://aksharasurya.com/index.php/latest/article/view/31

References

ಶಿಶುನಾಳ ಶರೀಫ್ ಸಾಹೇಬರ ಗೀತೆಗಳು, ಸಂ.-ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕ್ಷಮಾ ಪ್ರಕಾಶನ, ಬೆಂಗಳೂರು, 1988

ಶಿಶುನಾಳ ಶರೀಫ್ ಮತ್ತು ಸಂತ ಕಬೀರ್- ಒಂದು ತೌಲನಿಕ ಅಧ್ಯಯನ, ಡಾ. ಆರ್.ಪಿ. ಹೆಗಡೆ, ಸಮಾಜ ಶಿಕ್ಷಣ ವಿಶ್ವಸ್ತ ಸಮಿತಿ, ಸಿದ್ಧಾಪುರ(ಉ.ಕ), 1995

ಧಾರವಾಡ ಜಿಲ್ಲೆಯ ತತ್ವಪದ ಸಾಹಿತ್ಯ, ಡಾ. ಮಹೇಶ ಫ. ಗಾಜಪ್ಪನವರ, ಜ್ಯೋತಿ ಪ್ರಕಾಶನ, ಮೈಸೂರು, 2010