ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ ಡಾ. ಮಲ್ಲಿಕಾರ್ಜುನ ಲಠ್ಠೆ

Main Article Content

ಶಿವರಾಜ ಶಾಮರಾವ

Abstract

ಸಮಾಜದಲ್ಲಿ ಘಟಿಸಿದ ಸತ್ಕಾರಗಳ 'ದಾಖಲೆ' ಸಮಾಜವನ್ನುದ್ಧರಿಸಿದ ಪುಣ್ಯಪುರುಷರ ಚರಿತ್ರೆಗಳು ಮುಂದಿನ ಪೀಳಿಗೆಗೆ ದಾರಿ ದೀಪವೂ ಹೌದು; ತೋರು ಬೆರಳೂ ಹೌದು. ಕಾರಣ ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಟ್ಟಿ ಬೆಳೆಸಿದ, ಸಮಾಜಕ್ಕಾಗಿ ದುಡಿದ ಮಹಾತ್ಮರ ಚರಿತ್ರೆಗಳನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವೆನಿಸುತ್ತದೆ. ಅದರಂತೆ ಕಲ್ಯಾಣ ಕರ್ನಾಟಕದ ಜನಪದ ಸಾಹಿತ್ಯವನ್ನು ಹಳ್ಳಿಹಳ್ಳಿಗೆ ಹೋಗಿ ಸಂಗ್ರಹ ಮಾಡಿ ಪ್ರಕಟಿಸುವ ಮೂಲಕ ನಮ್ಮ ನಾಡಿನ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿದವರಲ್ಲಿ ಡಾ. ಎಮ್.ಎಸ್.ಲಠ್ಠೆ ಒಬ್ಬರು. ಸರಳ, ಸಜ್ಜನಿಕೆ, ಕರ್ತವ್ಯ ನಿಷ್ಠತೆಗೆ ಇನ್ನೊಂದು ಹೆಸರೇ ಡಾ. ಎಂ. ಎಸ್. ಲಠ್ಠೆ. ಅವರು ವಿದ್ಯಾರ್ಥಿಪ್ರೇಮಿ ಶಿಕ್ಷಕರಾಗಿ, ನೂರಾರು ಜನ ಸ್ನೇಹಿತರನ್ನು ಸಂಪಾದಿಸಿಕೊಂಡು ಸ್ನೇಹಜೀವಿಯಾಗಿ ಬದುಕಿದವರು. ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿ ಅಪಾರವಾದ ಕೆಲಸ ಮಾಡಿದವರು. ಅವರು ಬರೆದ, ಸಂಪಾದಿಸಿದ ಒಟ್ಟು ಕೃತಿಗಳ ಸಂಖ್ಯೆ ಒಂದು ನೂರು ದಾಟುತ್ತದೆ. ಕಲ್ಯಾಣ ಕರ್ನಾಟಕ ಜನಪದ ಸಾಹಿತ್ಯದ ಭಗೀರಥ ಡಾ. ಮಲ್ಲಿಕಾರ್ಜುನ ಲಠ್ಠೆ ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದೇ ಹೇಳಬಹುದು. ಅವರ ಪರಿಚಯ ಕುರಿತ ಲೇಖನ ಇದಾಗಿದೆ.

Article Details

Section

Essay

Author Biography

ಶಿವರಾಜ ಶಾಮರಾವ

ಮು. ಕೊರಡಂಪಳ್ಳಿ ತಾ. ಚಿಂಚೋಳಿ ಜಿ. ಕಲಬುರಗಿ.

References

ಲಠ್ಠೆ ಎಂ. ಎಸ್‌. (ಸಂ) (2008). ಜನಪದ ಸಾಹಿತ್ಯ. ರವೀಂದ್ರ ಪ್ರಕಾಶನ. ಗುಲ್ಬರ್ಗಾ.

ವೀರಣ್ಣಾ ದಂಡೆ (2014), ಎಂ. ಎಸ್. ಲಡ್ಡೆ. ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಗದಗ.

ಲಠ್ಠೆ ಎಂ. ಎಸ್. (2017). ಶರಣ ಸಂಸ್ಕೃತಿ, ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ, ಶ್ರೀ ಮುರುಘಾ ಮಠ, ಧಾರವಾಡ.

ಶಾಂತಪ್ಪ ಬೂದಿಹಾಳ (2016). ಡಾ. ಮಲ್ಲಿಕಾರ್ಜುನ ಲಡ್ಡೆ ಕನ್ನಡ ಸಾಹಿತ್ಯ ಸಂಘ. ಸುರಪೂರ.

ಸಂತುಷ್ಟಿ (1993), ಡಾ. ಎಂ. ಎಸ್. ಲಕ್ಕೆ ಅಭಿನಂದನಾ ಗ್ರಂಥ, ಎಂ. ಎಸ್. ಲಡ್ಡೆ ಅಭಿನಂದನಾ ಸಮೀತಿ, ಕಲಬುರಗಿ.