ತಾಯಿ ಎಂಬ ಹೆಣ್ಣು

Main Article Content

ರಾಜು ಎನ್.

Abstract

ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಮೌಲ್ಯ ಎಂದರೆ ಅದು 'ತಾಯಿ' ಎನ್ನುವ ಪದ ಮಾತ್ರ. ಈ ಕಥಾ ಭಾಗವು ಹೆಣ್ಣಿನ ಬಗೆಗೆ ನಾನಾ ವಿಚಾರಗಳನ್ನು ತಿಳಿಸಿಕೊಟ್ಟರು ಸಹ ಪ್ರಮುಖವಾಗಿ ಕಂಡದ್ದು ತಾಯಿಯ ವಾತ್ಸಲ್ಯ ಮತ್ತು ಪ್ರೀತಿಯ ಗುಣಗಳು. ಹೆಣ್ಣು ಜನಿಸಿದಾಗಿನಿಂದ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅದರಲ್ಲಿ ಪ್ರಮುಖವಾದುದು ತಾಯಿಯ ಪಾತ್ರ. ಜಗತ್ತಿನ ಯಾವುದೇ ಸೃಷ್ಟಿ ಹೆಣ್ಣಿನಿಂದಲೇ ಆಗಬೇಕು ಎಂಬುದು ಮನವರಿಕೆಯಾಗುತ್ತದೆ. ತನ್ನ ಮಕ್ಕಳನ್ನು ತಾಯಿಯಾದವಳು ಸಂಕಷ್ಟದ ಸಮಯದಲ್ಲಿ ಪಾರು ಮಾಡುವಳು ಅದಕ್ಕಾಗಿ ತಾನು ಯಾವ ತ್ಯಾಗಕ್ಕೂ ಸಿದ್ಧರಿವಳು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಕಥಾ ಭಾಗದಲ್ಲಿ ದೌರ್ಜನ್ಯ, ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆಯ ಕರಾಳ ಮುಖಗಳು ಕಂಡು ಬಂದರೂ ಸಹ ಇದರ ನಡುವೆ ಮಮತೆಯ, ಪ್ರೀತಿಯ ಗುಣಗಳನ್ನು ಜಗತ್ತಿಗೆ ಸಾರಿದ ತಾಯೆಂಬ ಹೆಣ್ಣಿನ ಪಾತ್ರವು ಮುಖ್ಯವಾಗಿ ಕಾಣಬರುತ್ತದೆ. ಗಂಡನಾದವನು ತನ್ನನ್ನು ದೂರ ತಳ್ಳಿದಾಗಲು ತನ್ನ ಮಕ್ಕಳಿಗಾಗಿ ತಾನು ಆದರ್ಶ ತಾಯಿಯಾಗಿ ನಿಲ್ಲಲು ಪ್ರಯತ್ನಿಸುವ ಪ್ರಸಂಗ ಕಣ್ಯಟ್ಟುತ್ತದೆ. ಸಮಾಜದಲ್ಲಿ ಗಂಡಿನ ಪರವಾಗಿ ಎಲ್ಲಾ ವಿಚಾರಗಳನ್ನು ಬರೆದುಕೊಂಡಿರುವಾಗ ತನ್ನ ಮತ್ತು ತನ್ನ ಮಕ್ಕಳ ಪರವಾಗಿ ನಿಲ್ಲುವ ಶಕ್ತಿ ತಾಯಿ ಮಾತ್ರ ಎಂಬುದನ್ನು ತಿಳಿಸಿಕೊಡುತ್ತದೆ. ಕಥೆ ಸಣ್ಣದಾದರೂ ಸಹ ಇಡೀ ಜಗತ್ತನ್ನು ಸೃಷ್ಟಿಸಿ, ನಿರ್ಮಿಸಿ ಅದನ್ನು ಪೋಷಿಸುತ್ತಿರುವ ತಾಯಿಯ ತ್ಯಾಗ, ಪ್ರೀತಿ, ವಾತ್ಸಲ್ಯ, ಮಮತೆಯ ಬಗೆಗೆ ಒಂದು ಹೊಸ ಸಂದೇಶವನ್ನು ಈ ಕಥಾ ಭಾಗ ನಿರೂಪಿಸುತ್ತದೆ.

Article Details

Section

Book Review

Author Biography

ರಾಜು ಎನ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಮತ್ತಿಕೆರೆ, ಬೆಂಗಳೂರು.

How to Cite

ರಾಜು ಎನ್. (2023). ತಾಯಿ ಎಂಬ ಹೆಣ್ಣು. ಅಕ್ಷರಸೂರ್ಯ (AKSHARASURYA), 2(13), 127 to 132. https://aksharasurya.com/index.php/latest/article/view/300

References

ಬಾನು ಮುಷ್ಕಾಕ್ (2012). ಒಮ್ಮೆ ಹೆಣ್ಣಾಗು ಪ್ರಭುವೇ-ಬಡವರ ಮಗಳು ಹೆಣ್ಣಲ್ಲ. ಅಭಿರುಚಿ ಪ್ರಕಾಶನ. ಮೈಸೂರು.

ನೇಮಿಚಂದ್ರ (2001). ಮಹಿಳಾ ಅಧ್ಯಯನ, ಅಂಕಿತ ಪ್ರಕಾಶನ, ಬೆಂಗಳೂರು.

ವಸುಧೇಂದ್ರ (2006). ನಮ್ಮಮ್ಮ ಅಂದ್ರೆ ನಂಗಿಷ್ಟ. ಛಂದ ಪುಸ್ತಕ. ಬೆಂಗಳೂರು.

ಶೇಷಗಿರಿರಾವ್ ಎಲ್. ಎಸ್. (2013), ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪ್ರಕಾಶನ. ಬೆಂಗಳೂರು.

ನಾಯಕ ಜಿ. ಎಚ್. (2018). ಕನ್ನಡ ಸಣ್ಣ ಕಥೆಗಳು. ನ್ಯಾಷನಲ್ ಬುಕ್ ಟ್ರಸ್ಟ್. ನವ ದೆಹಲಿ.