ಕನ್ನಡ ಸಾಹಿತ್ಯ: ಕೃಷಿ

Main Article Content

ಅಶ್ವಿನಿ ಶಂ ಬೆಳ್ಳುಂಡಗಿ

Abstract

ಸಂಸ್ಕೃತಿ ಮತ್ತು ನಾಗರಿಕತೆಯ ಮೂಲ ಸೆಲೆಯಾದ ಕೃಷಿಯು ಕನ್ನಡ ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಜನಪದ ಸಾಹಿತ್ಯದಲ್ಲಿ ರೈತರ ಬದುಕು, ಕೃಷಿ ಚಟುವಟಿಕೆಗಳು ಮತ್ತು ಹಾಡುಗಳು ಹಾಸುಹೊಕ್ಕಾಗಿವೆ. ೧೨ನೇ ಶತಮಾನದ ವಚನ ಸಾಹಿತ್ಯದಲ್ಲಿ ಬಸವಣ್ಣ, ಅಲ್ಲಮಪ್ರಭು ಮುಂತಾದ ಶರಣರು ಕೃಷಿಯ ಪರಿಕರಗಳು ಹಾಗೂ ಪ್ರಕ್ರಿಯೆಗಳನ್ನು ಆಧ್ಯಾತ್ಮಿಕ ತತ್ವಗಳಿಗೆ ರೂಪಕಗಳಾಗಿ ಬಳಸಿದ್ದಾರೆ. ದಾಸ ಸಾಹಿತ್ಯದಲ್ಲಿ ಕನಕದಾಸರ 'ರಾಮಧಾನ್ಯ ಚರಿತೆ' ರಾಗಿಯ ಮಹತ್ವವನ್ನು ಸಾರಿದರೆ, ತತ್ವಪದಕಾರರು ಕೃಷಿ ಸಂವೇದನೆಯನ್ನು ತತ್ವಬೋಧನೆಗೆ ಬಳಸಿಕೊಂಡಿದ್ದಾರೆ. ಆಧುನಿಕ ಸಾಹಿತ್ಯದಲ್ಲಿ ಕುವೆಂಪು, ಬೇಂದ್ರೆ ಮುಂತಾದ ಕವಿಗಳು ರೈತನನ್ನು 'ನೇಗಿಲ ಯೋಗಿ' ಎಂದು ಬಣ್ಣಿಸಿದ್ದಾರೆ. ಸಾಹಿತ್ಯ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬ ಆಶಯ ಲೇಖನದಲ್ಲಿದೆ.Keywords: ಕೃಷಿ ಸಂಸ್ಕೃತಿ, ಜನಪದ ಸಾಹಿತ್ಯ, ವಚನ ಚಳುವಳಿ, ನೇಗಿಲ ಯೋಗಿ, ಕೃಷಿ ಶಾಸ್ತ್ರ.

Article Details

Section

Research Articles

Author Biography

ಅಶ್ವಿನಿ ಶಂ ಬೆಳ್ಳುಂಡಗಿ

ಕನ್ನಡ ಉಪನ್ಯಾಸಕರು, ಕೃಷಿ ಮಹಾವಿದ್ಯಾಲಯ, ವಿಜಯಪುರ.

References

ಸುವರ್ಣ ಸಾಹಿತ್ಯ ವಿಮರ್ಶೆ ಸಂ ಎಚ್.ದುಂಡಪ್ಪ, ಬಿ.ಎನ್.ಸುಮಿತ್ರಾಬಾಯಿ

ಸುವರ್ಣ ವಿಚಾರ ಸಾಹಿತ್ಯ ಸಂ ಡಾ.ಬಸವರಾಜ ಕಲ್ಗುಡಿ

ಹಣತೆಗೆ ಹನಿ ಎಣ್ಣೆ ಡಾ. ತಾಳ್ತಜೆ ವಸಂತಕುಮಾರ

ಕನ್ನಡ ಸಾಹಿತ್ಯ ಚರಿತ್ರೆ ರಂ ಶ್ರೀ ಮುಗಳಿ

ವಚನ ಕಮ್ಮಟ ಸಂ ಮರುಳಸಿದ್ದಪ್ಪ