‘ಸಮಾಜವಾದ’ ಕುರಿತ ಅಂಬೇಡ್ಕರ್ ಅವರ ವಿಚಾರಗಳು: ಒಂದು ಅವಲೋಕನ

Main Article Content

ಗಂಗಾಧರ ಬಿ.ಎಂ.

Abstract

ಭಾರತೀಯ ಸಮಾಜದ ಶ್ರೇಣೀಕೃತ ವ್ಯವಸ್ಥೆಯನ್ನು ಬದಲಾಯಿಸಿ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಅನನ್ಯ. ಅಂಬೇಡ್ಕರ್ ಅವರ ಸಮಾಜವಾದಿ ಚಿಂತನೆಗಳು ಕೇವಲ ಆರ್ಥಿಕ ಅಸಮಾನತೆಯ ನಿವಾರಣೆಗೆ ಸೀಮಿತವಾಗದೆ, ಜಾತಿವಿನಾಶ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಒಳಗೊಂಡಿವೆ. ಮಾರ್ಕ್ಸ್‌ನ ರಕ್ತಸಿಕ್ತ ಕ್ರಾಂತಿ ಮತ್ತು ಗಾಂಧೀಜಿಯವರ ಸಾಂಪ್ರದಾಯಿಕ ಗ್ರಾಮ ಸ್ವರಾಜ್ಯದ ಕಲ್ಪನೆಗಳನ್ನು ಅವರು ತಾರ್ಕಿಕವಾಗಿ ವಿಮರ್ಶಿಸಿದ್ದಾರೆ. ಬದಲಿಗೆ, ಬುದ್ಧನ ಪ್ರಜಾಪ್ರಭುತ್ವವಾದಿ ಹಾಗೂ ಅಹಿಂಸಾತ್ಮಕ ಮಾರ್ಗವನ್ನೇ ನೈಜ ಸಮಾಜವಾದವೆಂದು ಪ್ರತಿಪಾದಿಸಿದ್ದಾರೆ. ಫ್ರೆಂಚ್ ಕ್ರಾಂತಿಯ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಂವಿಧಾನದ ಮೂಲಕ ಅನುಷ್ಠಾನಗೊಳಿಸಿದ ಅವರ ವಿಧಾನವು ಭಾರತಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಆರ್ಥಿಕ ಸುಧಾರಣೆಗಿಂತ ಮುನ್ನ ಸಾಮಾಜಿಕ ಸುಧಾರಣೆ ಅತ್ಯಗತ್ಯ ಎಂಬ ಅಂಬೇಡ್ಕರ್ ಅವರ ನಿಲುವೇ ಇಲ್ಲಿನ ಪ್ರಧಾನ ಆಶಯವಾಗಿದೆ.

Article Details

Section

Research Articles

Author Biography

ಗಂಗಾಧರ ಬಿ.ಎಂ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಸಂಸ್ಥೆ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯ.

References

ಜಾತಿ-ಅದರ ಸ್ವರೂಪ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು, ಕುವೆಂಪು ಭಾಷಾ ಭಾರತಿ, ಸಂ: ಎಚ್. ದಂಡಪ್ಪ, ಪುಟ: 57.

ಜಾತಿ-ಅದರ ಸ್ವರೂಪ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು, ಕುವೆಂಪು ಭಾಷಾ ಭಾರತಿ, ಸಂ: ಎಚ್. ದಂಡಪ್ಪ, ಪುಟ: 54.

ಜಾತಿ-ಅದರ ಸ್ವರೂಪ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು, ಕುವೆಂಪು ಭಾಷಾ ಭಾರತಿ, ಸಂ: ಎಚ್. ದಂಡಪ್ಪ, ಪುಟ: 53.

ಜಾತಿ-ಅದರ ಸ್ವರೂಪ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು, ಕುವೆಂಪು ಭಾಷಾ ಭಾರತಿ, ಸಂ: ಎಚ್. ದಂಡಪ್ಪ, ಪುಟ: 55.

ಜಾತಿ-ಅದರ ಸ್ವರೂಪ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು, ಕುವೆಂಪು ಭಾಷಾ ಭಾರತಿ, ಸಂ: ಎಚ್. ದಂಡಪ್ಪ, ಪುಟ: 54.

ಸಮಾಜವಾದ ವಾಚಿಕೆ, ಸಂ: ರಾಜರಾಮ ತೋಳ್ಪಾಡಿ ಮತ್ತು ನಯನ, ಕುವೆಂಪು ಭಾಷಾ ಭಾರತಿ, ಪುಟ: 220.

ಸಮಾಜವಾದ ವಾಚಿಕೆ, ಸಂ: ರಾಜರಾಮ ತೋಳ್ಪಾಡಿ ಮತ್ತು ನಯನ, ಕುವೆಂಪು ಭಾಷಾ ಭಾರತಿ, ಪುಟ: 197.