ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಶೋಷಣೆಯ ನೆಲೆಗಳು

Main Article Content

ಅಶ್ವಿನಿ ಆರ್. ಎಸ್.

Abstract

ಲಕ್ಷ್ಮೀಶನ ಜೈಮಿನಿ ಭಾರತ ಹಲವು ಕಥೆಗಳ ಒಂದು ಸಂಕಲನ. ವೈವಿಧ್ಯಮಯ ಉಪಕಥೆಗಳಿಂದ ವ್ಯಕ್ತಿ ಪ್ರಧಾನ ನೆಲೆಯಲ್ಲಿ ರಚಿತಗೊಂಡ ಸುಂದರ ಕಾವ್ಯ. ಸೀತೆ, ಬಬ್ರುವಾಹನ ಹಾಗೂ ಚಂದ್ರಹಾಸನ ಕಥೆಗಳು ಕರುಣಾ ರಸಗಳ ಸಂಗಮವಾಗಿವೆ. ಕಾವ್ಯದ ಪ್ರತಿ ಪಾತ್ರಗಳು ಮಾನವೀಯತೆಯ ನೆಲೆಯಲ್ಲಿ ಸಾಣೆಹಿಡಿದ ಸಮರ್ಥ ನಿರೂಪಣೆ ಎನಿಸಿದರೂ ಸೀತಾವನವಾಸ, ಬಬ್ರುವಾಹನನ ಕಾಳಗ ಹಾಗೂ ಚಂದ್ರಹಾಸನ ಬಾಲ್ಯದ ವಿವರಣೆಗಳು ಅಮಾನವೀಯತೆಯ ಸಂಕಟವನ್ನುಂಟುಮಾಡುತ್ತವೆ. ಕವಿ ತಾನು ಬದುಕಿದ್ದ ಸಾಮಾಜಿಕ ವಾತಾವರಣಕ್ಕೆ ಕಟ್ಟುಬಿದ್ದು ಈ ಪಾತ್ರಗಳನ್ನು ನಿರ್ವಹಿಸಿರುವುದು ದುರಂತವೇ ಸರಿ. ಎಲ್ಲಾ ಕಾಲದಲ್ಲೂ ಹೆಣ್ಣು ಶೋಷಣೆಗೆ ಒಳಪಡುವವಳು ಎಂಬುದನ್ನು ಸಾಬೀತುಮಾಡುವ ಸಾಮಾಜಿಕ ಶೋಷಣೆಯ ಪ್ರತೀಕದಂತೆ ಇಲ್ಲಿ ಸೀತೆ ಪಾತ್ರ ಚಿತ್ರಿಸಲ್ಪಟ್ಟಿದೆ. ವೈದಿಕಶಾಹಿ ವ್ಯವಸ್ಥೆ ಹಾಗೂ ಪ್ರಭುತ್ವ ಧೋರಣೆಗೆ ನಲುಗುವ ಪಾತ್ರಗಳಾಗಿ ಬಬ್ರುವಾಹನ ಹಾಗೂ ಚಂದ್ರಹಾಸರ ಪಾತ್ರಗಳು ಮೂಡಿಬಂದಿವೆ. ಹೀಗೆ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಈ ಮೂರು ಗತಿವಿಹೀನ ಪಾತ್ರಗಳ ಅಂತರಂಗಶೋಧನೆಯ ಕಿರು ಪ್ರಯತ್ನವೇ ಈ ಲೇಖನ.

Article Details

Section

Research Articles

Author Biography

ಅಶ್ವಿನಿ ಆರ್. ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು.

References

ಸಣ್ಣಯ್ಯ ಬಿ. ಎಸ್. ರಾಮೇಗೌಡ (ಸಂ) (1993). ಲಕ್ಷ್ಮೀಶನ ಜೈಮಿನಿ ಭಾರತ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಮರುಳಸಿದ್ದಪ್ಪ ಕೆ. (2013). ಷಟ್ಟದಿ ಸಾಹಿತ್ಯ. ಸಪ್ನ ಬುಕ್ ಹೌಸ್, ಬೆಂಗಳೂರು.

ರಾಜಪ್ಪ ದಳವಾಯಿ (2010). ಕನ್ನಡ ಸಾಹಿತ್ಯ ಕೋಶ. ದಳವಾಯಿ ಪ್ರಕಾಶನ. ಬೆಂಗಳೂರು.

ಮುಗಳಿ ರಂ. ಶ್ರೀ. (1996). ಕನ್ನಡ ಸಾಹಿತ್ಯ ಚರಿತ್ರೆ. ಸಮಾಜ ಪುಸ್ತಕಾಲಯ. ಧಾರವಾಡ.

ಸಿದ್ದಲಿಂಗಯ್ಯ ಜಿ. ಎಸ್. ಮತ್ತು ಕೃಷ್ಣಯ್ಯ ಎಚ್. ಎಂ. (ಸಂ) (2016), ಸಾಲುದೀಪಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.