ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ

Main Article Content

ಎಂ. ಚಿದಾನಂದಮೂರ್ತಿ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿರಾಜಮಾರ್ಗವು ಪ್ರಮುಖ ಘಟ್ಟವಾಗಿದ್ದು, ಅದಕ್ಕೂ ಹಿಂದಿನ ಸಾಹಿತ್ಯದ ಸ್ವರೂಪವನ್ನು ಶಾಸನಗಳು ಮತ್ತು ಭಾಷಿಕ ದಾಖಲೆಗಳ ಮೂಲಕ ವಿಶ್ಲೇಷಿಸಲಾಗಿದೆ. ತಮಿಳು ಮತ್ತು ಪ್ರಾಕೃತ ಭಾಷೆಗಳ ಪ್ರಾಚೀನತೆಯೊಂದಿಗೆ ಕನ್ನಡವನ್ನು ತುಲನೆ ಮಾಡಿ , ಹಲ್ಮಿಡಿ ಶಾಸನ, ತಾಳಗುಂದ ಶಾಸನ, ಶ್ರವಣಬೆಳಗೊಳದ ಶಾಸನಗಳ ಭಾಷಿಕ ಬೆಳವಣಿಗೆಯನ್ನು ಚರ್ಚಿಸಲಾಗಿದೆ. ಗದ್ಯ, ಪದ್ಯ, ಚತ್ತಾಣ, ಬೆದಂಡೆ ಹಾಗೂ ಪಗರಣದಂತಹ ಪ್ರಾಚೀನ ಸಾಹಿತ್ಯ ಪ್ರಕಾರಗಳು ಕವಿರಾಜಮಾರ್ಗಕಾರನಿಗಿಂತ ಮೊದಲೇ ಹೇಗೆ ಅಸ್ತಿತ್ವದಲ್ಲಿದ್ದವು ಎಂಬುದನ್ನು ಶಾಸನಗಳ ಬಿಡಿ ಪದ್ಯಗಳ ಮೂಲಕ ಸಮರ್ಥಿಸಲಾಗಿದೆ. ಕವಿರಾಜಮಾರ್ಗಕಾರ ಉಲ್ಲೇಖಿಸಿರುವ ವಿಮಳೋದಯ, ದುರ್ವಿನೀತ, ಶ್ರೀವಿಜಯ ಮುಂತಾದ ಕವಿಗಳ ಪೂರ್ವಾಪರಗಳ ಶೋಧನೆ ಇಲ್ಲಿದೆ.

Article Details

Section

Trodden Path

How to Cite

ಎಂ. ಚಿದಾನಂದಮೂರ್ತಿ. (2023). ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ. ಅಕ್ಷರಸೂರ್ಯ (AKSHARASURYA), 2(13), 01 to 39. https://aksharasurya.com/index.php/latest/article/view/288

References

ಚಿದಾನಂದಮೂರ್ತಿ ಎಂ. (1993), ಹೊಸತು ಹೊಸತು. ಸಪ್ನ ಬುಕ್ ಹೌಸ್, ಬೆಂಗಳೂರು.