ಕನ್ನಡ ಸಾಹಿತ್ಯದಲ್ಲಿ ರೈತ
Main Article Content
Abstract
ಭಾರತ ಕೃಷಿ ಕೇಂದ್ರಿತವಾದ ದೇಶ. ಕೃಷಿ ಅವಲಂಬಿತ ಜೀವನ ಕಲೆಯಾಗಿ, ಕಾದಂಬರಿಯಾಗಿ, ಕವನವಾಗಿ, ಲಾವಣಿಯಾಗಿ, ಇನ್ನೂ ಅನೇಕ ಸಾಹಿತ್ಯ ರೂಪಗಳನ್ನು ಪಡೆದುಕೊಂಡು ಬಂದಿದೆ. ರೈತ ಎಲ್ಲರ ಬದುಕಿನ ಭಾಗ. ಸಾಹಿತ್ಯದ ನಿರಂತರ ಸೆಲೆ ಇವನು. ರೈತನ ಅಸ್ತಿತ್ವವಿರದೇ ಭೂಮಿಗೆ ಅಸ್ತಿತ್ವವಿಲ್ಲ. ರೈತನಿಗೆ ಮಿಡಿಯದ, ಸ್ಪಂದಿಸದೇ ಹೋದರೆ ಸಾಹಿತ್ಯಕ್ಕೂ ಬೆಲೆ ನೆಲೆ ಇಲ್ಲ. ಭಾರತೀಯ ಸಾಹಿತ್ಯ, ಕನ್ನಡ ಸಾಹಿತ್ಯ ನಿರಂತರವಾಗಿ ನೇಗಿಲಯೋಗಿಯನ್ನು ಚಿತ್ರಿಸುತ್ತ ಬಂದಿದೆ. ಸಾಹಿತ್ಯದಲ್ಲಿ ರೈತನ ಭಾವ, ಕಷ್ಟ, ನೋವು, ಸಮಸ್ಯೆ ಪರಿಹಾರಗಳನ್ನು ಕಾಣುತ್ತೇವೆ. ಕುವೆಂಪು ಅವರು 'ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ' ಎನ್ನುವ ಮೂಲಕ ರೈತ ಧರ್ಮ ಸಾರುತ್ತಿದ್ದಾರೆ. 'ಉಳುವಾ ಯೋಗಿಯ ನೋಡಲ್ಲಿ' ಎಂದು ರಾಷ್ಟ್ರಕವಿ ಕುವೆಂಪು ತೋರಿಸಿದ ರೈತರನ್ನು ಅನೇಕ ಕವಿಗಳು ತಮ್ಮದೇ ಆದ ಅನುಭವದೊಂದಿಗೆ ರೈತರ ಬದುಕಿನ ಸತ್ಯದ ದರ್ಶನವನ್ನು ಮೂಡಿಸಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಡಾ. ಬಸವರಾಜ ಸಾದರ (ಸಂ), ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು (2022), ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
ಡಾ. ಎಚ್. ಎಸ್. ರಾಘವೆಂದ್ರರಾವ್, ಪ್ರಗತಿಶೀಲತೆ (1999), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಡಾ. ಪುರುಷೋತ್ತಮ ಬಿಳಿಮಲೆ, ದಲಿತ-ಬಂಡಾಯ ಸಾಹಿತ್ಯ (1999), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.