ಸಮಾಜದ ಸಂವೇದನೆಯ ಧ್ವನಿಯಾಗಿ ಪೋಸ್ಟ್ ಬಾಕ್ಸ್ ನಂ-9 ನಾಟಕ

Main Article Content

ಸತೀಶ ಆರ್.

Abstract

ನಮ್ಮ ನಡುವಿರುವ ಸೂಕ್ಷ್ಮ ಸಂವೇದನಾಶೀಲ ಬರಹಗಾರರಲ್ಲಿ ‘ಲಕ್ಷ್ಮಿಪತಿ ಕೋಲಾರ’ ಅವರೂ ಸಹ ಒಬ್ಬರಾಗಿದ್ದಾರೆ. ಅವರು ಬರೆದ ಈ ಪೋಸ್ಟ್ ಬಾಕ್ಸ್ ನಂಬರ್-9 ನಾಟಕವು, ತಮ್ಮ ನೆಲದಲ್ಲಿದ್ದು ಅನ್ಯರಂತೆ ಪರಕೀಯ ಪ್ರಜ್ಞೆಯಿಂದ ಜೀವಿಸುತ್ತಿರುವ ಒಂದು ಜನಾಂಗದ ಚಿತ್ರಣವನ್ನು ಅನಾವರಣಗೊಳಿಸುತ್ತದೆ. ಜಗತ್ತಿನ ಪ್ರಮುಖ ಧರ್ಮಗಳ ಉಗಮಕ್ಕೆ ಕಾರಣವಾದ ಮಧ್ಯಪ್ರಾಚ್ಯವು ಶಾಂತಿ, ಸೌಹಾರ್ದತೆಯ ನೆಲೆಯಾಗಿರದೆ, ಸದಾ ಸಂಘರ್ಷದ ಜೀವಂತ ಗೂಡಾಗಿದೆ. ಈ ನಾಟಕದಲ್ಲಿ ಅತಿಯಾದ ಜನಾಂಗೀಯ ಧೋರಣೆಯಿಂದ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹಾಗೂ ಅಲ್ಲಿನ ಜನರ ನೋವುಗಳನ್ನು ಲೇಖಕರು ರೂಪಕಗಳನ್ನು ಬಳಸಿಕೊಂಡು ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ನಾಟಕದಲ್ಲಿ ಬರುವ ‘ಕೈಫಾ ಆಫೀಫೀ’ ಎಂಬ ಹೆಣ್ಣು ಮಗಳು ದೌರ್ಜನ್ಯಕ್ಕೊಳಗಾದ ಅವರ ಇಡೀ ಜನಾಂಗದ ಪ್ರತಿನಿಧಿಯಂತೆ ಇಲ್ಲಿ ನಮಗೆ ಕಾಣುತ್ತಾಳೆ.

Article Details

Section

Research Articles

Author Biography

ಸತೀಶ ಆರ್.

ಸಂಶೋಧನಾರ್ಥಿ, ಕನ್ನಡ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಸತೀಶ ಆರ್. (2026). ಸಮಾಜದ ಸಂವೇದನೆಯ ಧ್ವನಿಯಾಗಿ ಪೋಸ್ಟ್ ಬಾಕ್ಸ್ ನಂ-9 ನಾಟಕ. ಅಕ್ಷರಸೂರ್ಯ (AKSHARASURYA), 18(04), 101 to 107. https://aksharasurya.com/index.php/latest/article/view/2491

References

ಲಕ್ಷ್ಮೀಪತಿ ಕೋಲಾರ, (2016), ಪೋಸ್ಟ್ ಬಾಕ್ಸ್ ನಂ-9, ಮಾಲೂರು: ಶಾಹು ಪ್ರಕಾಶನ.

ರಹಮತ್ ತರೀಕೆರೆ, (2017), ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಅಭಿನವ ಪ್ರಕಾಶನ.

ಹಂಪಾ ನಾಗರಾಜಯ್ಯ, (2023), ದ್ರಾವಿಡ ಭಾಷಾ ವಿಜ್ಞಾನ, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.

ರಾಮಚಂದ್ರನ್ ಸಿ. ಎನ್., (2019), ಸಾಹಿತ್ಯ ವಿಮರ್ಶೆ, ಬೆಂಗಳೂರು: ಅಂಕಿತ ಪ್ರಕಾಶನ.

ರಾಮಚಂದ್ರನ್ ಸಿ. ಎನ್., (2016), ವಸಾಹತೋತ್ತರ ಚಿಂತನೆ, ಬೆಂಗಳೂರು: ಅಂಕಿತ ಪ್ರಕಾಶನ.