ಕೆ.ಎಸ್. ನಿಸಾರ್ ಅಹಮದ್ ಅವರ ಕಾವ್ಯದಲ್ಲಿ ಪರಕೀಯ ಪ್ರಜ್ಞೆ
Main Article Content
Abstract
ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದ ಕಾವ್ಯ, ಸಣ್ಣಕಥೆ, ಕಾದಂಬರಿ, ಪ್ರಬಂಧ, ವಿಮರ್ಶೆ, ಮಕ್ಕಳ ಸಾಹಿತ್ಯ, ಅನುವಾದ ಮುಂತಾದ ಪ್ರಕಾರಗಳ ಮೂಲಕ ಕನ್ನಡ ಸಾಹಿತ್ಯ ಭರದಿಂದ ಹೊರಹೊಮ್ಮಲು ಆರಂಭವಾಯಿತು. ಈ ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಕಾವ್ಯ ಪ್ರಕಾರವು ಸಹೃದಯರನ್ನು ತನ್ನತ್ತ ಸೆಳೆಯಿತು. ನಾಡು-ನುಡಿ, ದೇಶಪ್ರೇಮ, ಸ್ವಾತಂತ್ರ್ಯ, ಸಮಾನತೆ, ನಿಸರ್ಗವರ್ಣನೆ, ಪ್ರೀತಿ-ಪ್ರೇಮ, ವಾಸ್ತವತೆ, ಸೌಹಾರ್ದತೆ ಹೀಗೆ ಅನೇಕ ಧೋರಣೆಯಿಂದ ತನ್ನ ಛಾಪನ್ನು ಮೂಡಿಸಿತು. ಸಮಕಾಲೀನ ಸಂವೇದನೆಗಳೊಂದಿಗೆ ಲೇಖಕರು ತನ್ನ ಪ್ರಖರವಾದ ಬರವಣಿಗೆಯ ಶಕ್ತಿಯೊಂದಿಗೆ ಸ್ಪಂದಿಸುವ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶಿಖರಕ್ಕೇರಿಸಿದರು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕವಿಗಳ ಸೇವೆ ಅವಿಸ್ಮರಣೀಯ. ಅಂತಹ ಕನ್ನಡಾಂಬೆಯ ಮಕ್ಕಳಾದ ಕನ್ನಡದ ಕಣ್ವ ಬಿ.ಎಂ. ಶ್ರೀ, ವರಕವಿ ಬೇಂದ್ರೆ, ನವ್ಯಕವಿ ಗೋಪಾಲಕೃಷ್ಣ ಅಡಿಗ, ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಪ್ರಮುಖರಲ್ಲಿ ಕೆ.ಎಸ್. ನಿಸಾರ್ ಅಹಮದ್ ಅವರು ಸಹ ಒಬ್ಬರಾಗಿದ್ದಾರೆ. ಇವರ ಕಾವ್ಯಗಳಲ್ಲಿ ಪ್ರಕೃತಿ ವರ್ಣನೆ, ಭಾವಗೀತೆಯ ಸ್ವರೂಪ, ಸಾಮಾಜಿಕ ಮತ್ತು ರಾಜಕೀಯ ವಿಡಂಬನೆ, ಕೋಮುವಾದ, ಸೌಹಾರ್ದ, ಸಾಂಸ್ಕೃತಿಕ ಸಂಕಷ್ಟಗಳು, ಪರಕೀಯಪ್ರಜ್ಞೆ ಹೀಗೆ ವಿಭಿನ್ನ ಬಗೆಯ ಚಿಂತನೆಗಳನ್ನು ಇವರ ಕಾವ್ಯಗಳಲ್ಲಿ ಕಾಣಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಿಸಾರ್ ಅಹಮದ್ ಕೆ.ಎಸ್., (2006), ಸಮಗ್ರ ಕವಿತೆಗಳು, ಬೆಂಗಳೂರು: ಸಪ್ನ ಬುಕ್ ಹೌಸ್.
ನಿರ್ದೇಶಕರು, (1985), ರತ್ನಸಂಪುಟ (ಕನ್ನಡ ಭಾವಗೀತೆಗಳ ಸಂಕಲನ), ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಗಿರಡ್ಡಿ ಗೋವಿಂದರಾಜ, (2010), ಕಾವ್ಯವನ್ನು ಕುರಿತು, ಬೆಂಗಳೂರು: ವಸಂತ ಪ್ರಕಾಶನ.
ಶಿವರುದ್ರಪ್ಪ ಜಿ.ಎಸ್., (1979), ಸಾಹಿತ್ಯ ವಾರ್ಷಿಕ - 1979, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.
ರಾಮಚಂದ್ರ ಗಣಾಪುರ, (2014), ಕೆ.ಎಸ್. ನಿಸಾರ್ ಅಹಮದ್, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಶಿವರುದ್ರಪ್ಪ ಜಿ.ಎಸ್., (1976), ಸಾಹಿತ್ಯ ವಾರ್ಷಿಕ - 1974, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.
ಅರವಿಂದ ಮಲಗತ್ತಿ, (2018), ಹೊಸಗನ್ನಡ ಕಾವ್ಯ ಮಾರ್ಗ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.