ರಾಮನಗರ ಜಿಲ್ಲೆಯ ಕಥೆಗಾರರ ಕಥೆಗಳಲ್ಲಿ ಪ್ರಾದೇಶಿಕತೆಯ ಸ್ಪರ್ಶ
Main Article Content
Abstract
ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಜನಮನ್ನಣೆಯನ್ನು ಪಡೆದ ಸಾಹಿತ್ಯ ಪ್ರಕಾರವೆಂದರೆ ಗದ್ಯಸಾಹಿತ್ಯ. ಸರಳವಾದ ಭಾಷೆ, ಸಹಜವಾದ ನಿರೂಪಣಾ ಶೈಲಿ ಹಾಗೂ ಬದುಕಿನ ನೈಜ ಅನುಭವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಸಾಮರ್ಥ್ಯದಿಂದಾಗಿ ಗದ್ಯಸಾಹಿತ್ಯ ಓದುಗರನ್ನು ಹೆಚ್ಚು ಆಕರ್ಷಿಸಿದೆ. ವಿಶೇಷವಾಗಿ ಕಥೆ, ಕಾದಂಬರಿ, ಪ್ರಬಂಧ, ಆತ್ಮಕಥೆ, ಮೊದಲಾದ ಗದ್ಯ ಪ್ರಕಾರಗಳು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಈ ರೀತಿಯಾಗಿ ಓದುಗರನ್ನು ಆಕರ್ಷಿಸಿದ ಗದ್ಯ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಸಣ್ಣ ಕಥೆಯೂ ಒಂದಾಗಿದೆ. ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ಮತ್ತು ಪ್ರೇರಣೆಯಿಂದ ಕನ್ನಡದಲ್ಲಿ ರೂಪುಗೊಂಡ ಸಣ್ಣ ಕಥೆ ತನ್ನ ಮೂಲ ದೇಶೀಯತೆಯನ್ನು ಉಳಿಸಿಕೊಂಡು, ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜೀವನಾನುಭವಗಳಿಗೆ ಸ್ಪಂದಿಸುತ್ತಾ ಬೆಳವಣಿಗೆಯನ್ನು ಕಂಡಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಾಳೇಗೌಡ ನಾಗವಾರ, (2011), ಕಥಾ ಸಂಪುಟ, ಬೆಂಗಳೂರು: ಸಪ್ನ ಬುಕ್ ಹೌಸ್.
ಸುಧಾಕರ, (2011), ಕಣ್ಣಿಕಿತ್ತ ಹಸು ಮತ್ತು ಇತರ ಕಥೆಗಳು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಮೊಗಳ್ಳಿ ಗಣೇಶ್, (2008), ಮೊಗಳ್ಳಿ ಕಥಾ ಸಂಪುಟ, ಬೆಂಗಳೂರು: ಸಪ್ನ ಬುಕ್ ಹೌಸ್.
ನಾಗಭೂಷಣ ಎಸ್., (2015), ರೇಷ್ಮೆ ನಾಡಿನ ಕಥೆಗಳು, ರಾಮನಗರ: ಸಾಹಿತ್ಯ ಸಂಗಮ ಟ್ರಸ್ಟ್.