ಚಾರುವಸಂತ: ಕಾವ್ಯದಿಂದ ರಂಗಭೂಮಿಯತ್ತ ಒಂದು ಸಾಂಸ್ಕೃತಿಕ ಪಯಣ

Main Article Content

ಪಾರ್ವತಿ ಎಂ.

Abstract

ರಂಗಭೂಮಿಯು ಕೇವಲ ಮನೋರಂಜನೆಯ ಮಾಧ್ಯಮವಾಗಿರದೆ, ಮಾನವನ ಬದುಕು, ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಸಮಾಜಕ್ಕೆ ಪ್ರತಿಬಿಂಬಿಸುವ ಜೀವಂತ ನಿಲುವುಗನ್ನಡಿಯಾಗಿದೆ. ಸಾಹಿತ್ಯ, ಅಭಿನಯ, ಸಂಗೀತ, ನೃತ್ಯ ಹಾಗೂ ತಾಂತ್ರಿಕ ಕಲೆಗಳ ಸಮ್ಮಿಲನದಿಂದ ಮೂಡಿಬರುವ ರಂಗಪ್ರಯೋಗಗಳು ಜನಮನದಲ್ಲಿ ಆಳವಾದ ಪ್ರಭಾವವನ್ನು ಬೀರುತ್ತವೆ. ಲಿಖಿತ ಸಾಹಿತ್ಯ ಕೃತಿಯೊಂದು ರಂಗಪಠ್ಯವಾಗಿ ಬದಲಾಗಿ, ನಿರ್ದೇಶಕ ಹಾಗೂ ಕಲಾವಿದರ ಶ್ರಮದಿಂದ ವೇದಿಕೆಯ ಮೇಲೆ ಜೀವ ತಳೆಯುವುದು ಒಂದು ಅದ್ಭುತ ಕಲಾತ್ಮಕ ಪಯಣ. ಈ ಹಿನ್ನೆಲೆಯಲ್ಲಿ, ನಾಡೋಜ ಡಾ. ಹಂಪಾ ನಾಗರಾಜಯ್ಯನವರು ರಚಿಸಿದ ‘ಚಾರುವಸಂತ’ ಎಂಬ ದೇಸಿ ಮಹಾಕಾವ್ಯವನ್ನು ಡಾ. ನಾ. ದಾಮೋದರ ಶೆಟ್ಟಿಯವರ ರಂಗರೂಪಾಂತರದಲ್ಲಿ ಮತ್ತು ಡಾ. ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ರಂಗದ ಮೇಲೆ ತಂದಿರುವುದರ ಸಾಂಸ್ಕೃತಿಕ ಮೌಲ್ಯಗಳ ಮಹತ್ವವನ್ನು ಈ ಲೇಖನ ಸಂಶೋಧನಾ ದೃಷ್ಟಿಯಿಂದ ಅಧ್ಯಯನಕ್ಕೆ ಒಳಪಡಿಸಿದೆ.

Article Details

Section

Research Articles

Author Biography

ಪಾರ್ವತಿ ಎಂ.

ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಪಾರ್ವತಿ ಎಂ. (2026). ಚಾರುವಸಂತ: ಕಾವ್ಯದಿಂದ ರಂಗಭೂಮಿಯತ್ತ ಒಂದು ಸಾಂಸ್ಕೃತಿಕ ಪಯಣ. ಅಕ್ಷರಸೂರ್ಯ (AKSHARASURYA), 18(04), 66 to 75. https://aksharasurya.com/index.php/latest/article/view/2487

References

ಹಂಪಾ ನಾಗರಾಜಯ್ಯ, (2021), ಚಾರುವಸಂತ ಕಾವ್ಯ, ಬೆಂಗಳೂರು: ಸ್ವಪ್ನ ಬುಕ್ ಹೌಸ್.

ದಾಮೋದರ ಶೆಟ್ಟಿ ನಾ., (2024), ಚಾರು ವಸಂತ ನಾಟಕ, ಬೆಂಗಳೂರು: ಬಹುರೂಪಿ ಪ್ರಕಾಶನ.

ಅಕ್ಷರ ಕೆ.ವಿ., (1994), ರಂಗಪ್ರಪಂಚ, ದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್.

ರಂಗನಾಥ್ ಎಚ್. ಕೆ., (1978), ಕರ್ನಾಟಕ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ ಪ್ರಕಾಶನ.

ಅಕ್ಷರ ಕೆ.ವಿ., (1994), ರಂಗಪ್ರಯೋಗ, ಹೆಗ್ಗೋಡು: ಅಕ್ಷರ ಪ್ರಕಾಶನ.