ಅಸಮಾನತೆಯ ಕತ್ತಲಲ್ಲಿ ಕ್ರಾಂತಿಯ ಬೆಳಕು: ರೋಸಾ ಬದುಕಿನ ಕನ್ನಡ ರೂಪದ ಪ್ರಸ್ತುತತೆ

Main Article Content

ಗೌರಾಬಾಯಿ

Abstract

ಭಾಷಾಂತರವು ಕನ್ನಡ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಾ ಬಂದಿದೆ. ಭಾಷಾಂತರವು ಕೇವಲ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಪಠ್ಯಗಳನ್ನು ಮಾತ್ರ ಕೊಂಡೊಯ್ಯುವುದಿಲ್ಲ. ಬದಲಾಗಿ, ಒಂದು ಕೃತಿಯ ಭಾವ ಜಗತ್ತನ್ನು ಮತ್ತೊಂದು ಭಾಷೆಗೆ ದಾಟಿಸುತ್ತದೆ. ಈ ಹಿನ್ನೆಲೆಯಲ್ಲಿ, ಎಮ್.ಆರ್. ಕಮಲಾರವರ “ನನ್ನ ಕಥೆ ರೋಸಾ ಪಾರ್ಕ್ಸ್”‌ ಕೃತಿಯ ಅನುವಾದದ ಪ್ರಸ್ತುತತೆಯನ್ನು ಸ್ತ್ರೀ ಪ್ರತಿನಿಧೀಕರಣದ ದೃಷ್ಟಿಕೋನದಲ್ಲಿ ಗಮನಿಸುವುದು ಈ ಲೇಖನದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ಆಫ್ರಿಕನ್‌ ಅಮೇರಿಕನ್ನರ ಮಹಿಳಾ ಸಂವೇದನೆಯನ್ನು ಪರಿಚಯ ಮಾಡಿಕೊಳ್ಳುವ ಉದ್ದೇಶವನ್ನೂ ಕೂಡ ಈ ಲೇಖನ ಹೊಂದಿದೆ.

Article Details

Section

Research Articles

Author Biography

ಗೌರಾಬಾಯಿ

ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಗೌರಾಬಾಯಿ. (2026). ಅಸಮಾನತೆಯ ಕತ್ತಲಲ್ಲಿ ಕ್ರಾಂತಿಯ ಬೆಳಕು: ರೋಸಾ ಬದುಕಿನ ಕನ್ನಡ ರೂಪದ ಪ್ರಸ್ತುತತೆ. ಅಕ್ಷರಸೂರ್ಯ (AKSHARASURYA), 18(04), 52 to 60. https://aksharasurya.com/index.php/latest/article/view/2485

References

ಕಮಲಾ ಎಮ್.ಆರ್., (2005), ಕಪ್ಪು ಹಕ್ಕಿಯ ಬೆಳಕಿನ ಹಾಡು-3 ನನ್ನ ಕಥೆ ರೋಸಾ ಪಾರ್ಕ್ಸ್, ಬೆಂಗಳೂರು: ಕಥನ ಪ್ರಕಾಶನ.

ನಟರಾಜ್ ಹುಳಿಯಾರ್, (2017), ಆಫ್ರಿಕನ್ ಸಾಹಿತ್ಯ ವಾಚಿಕೆ, ಬೆಂಗಳೂರು: ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ.

ರೆಹಮತ್ ತರಿಕೆರೆ, (1996), ವಸಾಹತು ಪ್ರಜ್ಞೆ ಮತ್ತು ವಿಮೋಚನೆ, ಬೆಂಗಳೂರು: ಲಂಕೇಶ್ ಪ್ರಕಾಶನ.