ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯಗಳಲ್ಲಿ ನಾಡು–ನುಡಿಯ ಚಿಂತನೆ

Main Article Content

ಡಾ. ಬಿ. ಆರ್. ರಘುನಂದನ್

Abstract

ಆಧುನಿಕ ಕನ್ನಡ ಕಾವ್ಯಪರಂಪರೆಯಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರು ನವೋದಯದ ಸಾಂಸ್ಕೃತಿಕ ಪ್ರಜ್ಞೆಯನ್ನು ಮುಂದುವರಿಸುತ್ತಲೇ ಸಮಕಾಲೀನ ಬದುಕಿನ ವೈರುಧ್ಯಗಳಿಗೆ ಸ್ಪಂದಿಸಿದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ನಾಡು ಮತ್ತು ನುಡಿ ಕೇವಲ ಭೌಗೋಳಿಕ ಗಡಿ ಹಾಗೂ ಸಂವಹನದ ಭಾಷೆಯಾಗಿ ಕಾಣಿಸಿಕೊಳ್ಳದೆ, ಕನ್ನಡಿಗರ ಚಾರಿತ್ರಿಕ ಸ್ಮೃತಿ, ಸಾಂಸ್ಕೃತಿಕ ಅಸ್ಮಿತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಆತ್ಮಪ್ರತ್ಯಯಗಳ ಸಂಕೇತಗಳಾಗಿ ರೂಪುಗೊಳ್ಳುತ್ತವೆ. ಕನ್ನಡ ನಾಡಿನ ನಿಸರ್ಗ, ನದಿ–ಪರ್ವತಗಳು, ಕಲೆ–ಸಾಹಿತ್ಯ, ಶಿಲ್ಪ–ಸಂಗೀತ, ಗುಡಿ–ಗೋಪುರಗಳ ಮೂಲಕ ನಾಡಿನ ಸಾಂಸ್ಕೃತಿಕ ಭೂಗೋಳವನ್ನು ಕಟ್ಟಿಕೊಡುವ ಜಿ.ಎಸ್.ಎಸ್., ಮತ್ತೊಂದೆಡೆ ಕನ್ನಡಿಗರೊಳಗಿನ ಅನೈಕ್ಯ, ಭಾಷೆಯ ಕುರಿತ ನಿರ್ಲಕ್ಷ್ಯ, ಸ್ವಾಭಿಮಾನದ ಕೊರತೆ ಹಾಗೂ ಪರಭಾಷೆಗಳೆಡೆಗಿನ ಅತಿಯಾದ ಉದಾರತೆಯನ್ನು ವಿಡಂಬನಾತ್ಮಕವಾಗಿ ಪ್ರಶ್ನಿಸುತ್ತಾರೆ.
‘ಶುಭೋದಯ’, ‘ಕನ್ನಡ ರಾಜ್ಯೋದಯ’, ‘ಕನ್ನಡ ಕುಲಬಾಂಧವರ ಸ್ವಾಗತ ಗೀತೆ’, ‘ತೇರನೆಳೆವರು ನಾವು’ ಮೊದಲಾದ ಕವಿತೆಗಳಲ್ಲಿ ಪ್ರಕಟವಾಗಿರುವ ನಾಡು–ನುಡಿಯ ಚಿಂತನೆಗಳನ್ನು ಕೇಂದ್ರವಾಗಿಟ್ಟುಕೊಂಡು ಜಿ.ಎಸ್.ಎಸ್. ಅವರ ಕನ್ನಡಪ್ರಜ್ಞೆಯನ್ನು ವಿಶ್ಲೇಷಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ರಾಜಕೀಯವಾಗಿ ಕರ್ನಾಟಕ ರಾಜ್ಯ ಉದಯವಾದರೂ ಕನ್ನಡಿಗನ ಅಂತರಂಗದಲ್ಲಿ ಕನ್ನಡತನದ ಅರಿವು ಮತ್ತು ಸಾಮೂಹಿಕ ಹೊಣೆಗಾರಿಕೆ ಮೂಡದಿದ್ದರೆ ರಾಜ್ಯೋದಯ ಪೂರ್ಣಗೊಳ್ಳುವುದಿಲ್ಲ ಎಂಬ ಅವರ ನಿಲುವು ವಿಶಿಷ್ಟವಾದುದು. ಈ ಹಿನ್ನೆಲೆಯಲ್ಲಿ ಜಿ.ಎಸ್.ಎಸ್. ಅವರ ನಾಡು–ನುಡಿಯ ಚಿಂತನೆಯು ಭಾವನಾತ್ಮಕ ಕನ್ನಡಾಭಿಮಾನಕ್ಕೆ ಸೀಮಿತವಾಗದೆ, ವಿಮರ್ಶಾತ್ಮಕವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆಯಾಗಿ ರೂಪುಗೊಂಡಿರುವುದನ್ನು ಈ ಲೇಖನ ಪರಿಶೀಲಿಸುತ್ತದೆ.

Article Details

Section

Research Articles

Author Biography

ಡಾ. ಬಿ. ಆರ್. ರಘುನಂದನ್

ಪ್ರಾಧ್ಯಾಪಕರು, ಕನ್ನಡ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಬಿ. ಆರ್. ರಘುನಂದನ್. (2026). ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯಗಳಲ್ಲಿ ನಾಡು–ನುಡಿಯ ಚಿಂತನೆ. ಅಕ್ಷರಸೂರ್ಯ (AKSHARASURYA), 18(04), 23 to 36. https://aksharasurya.com/index.php/latest/article/view/2482

References

ಶಿವರುದ್ರಪ್ಪ ಜಿ.ಎಸ್., (2007), ಜಿ. ಎಸ್. ಶಿವರುದ್ರಪ್ಪನವರ ಸಮಗ್ರ ಕಾವ್ಯ, ಬೆಂಗಳೂರು: ಕಾಮಧೇನು ಪ್ರಕಾಶನ.

ಪ್ರಸಾರಾಂಗ (ಸಂ.), (2006), ಆಧುನಿಕ ಕನ್ನಡ ಕಾವ್ಯ ಸಂಪುಟ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಹೊನ್ನುಸಿದ್ದಾರ್ಥ ಸಿ. ಬಿ. ಮತ್ತು ಮುನಿಯಪ್ಪ, (2014), ಆಧುನಿಕ ಕನ್ನಡ ಸಾಹಿತ್ಯ: ನಾಡು–ನುಡಿ ಚಿಂತನೆಗಳು, ಬೆಂಗಳೂರು: ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ.

ಸಂಪಾದಕ ಮಂಡಳಿ, (2024), ಅರುಹು ಕುರುಹು (ಸಾಹಿತ್ಯ ಸಂಸ್ಕೃತಿಯ ಶೋಧದಲ್ಲಿ - ಸಂಪುಟ 15, ಸಂಚಿಕೆ 74-75), ಬೆಂಗಳೂರು: ಅರುಹು ಕುರುಹು ದ್ವಿಭಾಷಾ ಪತ್ರಿಕೆ.

ಅಭಿನಂದನಾ ಸಮಿತಿ (ಸಂ.), (2001), ಹಣತೆ (ಜಿ. ಎಸ್. ಶಿವರುದ್ರಪ್ಪನವರ ಅಭಿನಂದನಾ ಗ್ರಂಥ), ಬಳ್ಳಾರಿ: ಲೋಹಿಯಾ ಪ್ರಕಾಶನ.