‘ಊರುಕೇರಿ’ ಆತ್ಮಕತೆಗಳ ಒಳನೋಟ

Main Article Content

ಮಹೇಶ್ ಯು.ಸಿ.

Abstract

ಡಾ. ಸಿದ್ದಲಿಂಗಯ್ಯನವರ ‘ಊರುಕೇರಿ’ (ಭಾಗ 1 ಮತ್ತು 2) ಕೃತಿಯು ಕನ್ನಡ ದಲಿತ ಆತ್ಮಕಥನಗಳ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ದಲಿತ ಮತ್ತು ಬಂಡಾಯ ಸಾಹಿತ್ಯದ ಉತ್ತುಂಗದ ಕಾಲದಲ್ಲಿ ರಚಿತವಾದರೂ, ಕಾವ್ಯದ ರೊಚ್ಚಿನ ಭಾಷೆಯ ಬದಲಿಗೆ ವ್ಯಂಗ್ಯ, ಹಾಸ್ಯ ಹಾಗೂ ನಿರ್ಲಿಪ್ತ ಶೈಲಿಯಲ್ಲಿ ನೋವು-ಅಪಮಾನಗಳನ್ನು ಇದರಲ್ಲಿ ಅಭಿವ್ಯಕ್ತಿಸಲಾಗಿದೆ. ಇದು ಕೇವಲ ವೈಯಕ್ತಿಕ ಯಶೋಗಾಥೆಯಾಗದೆ, ಇಡೀ ದಲಿತ ಸಮುದಾಯದ ಬಡತನ, ಹಸಿವು, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಸಂಘರ್ಷಗಳ ಸಾಂಸ್ಕೃತಿಕ ಮತ್ತು ಚಾರಿತ್ರಿಕ ದಾಖಲೆಯಾಗಿದೆ. ಮಾಗಡಿಯಿಂದ ಬೆಂಗಳೂರಿನ ಕೊಳಚೆಪ್ರದೇಶದವರೆಗಿನ ಬದುಕು, ಕುಡಿಯುವ ನೀರಿನ ಸಮಸ್ಯೆ, ಜಾತೀಯತೆಯ ಕ್ರೌರ್ಯ ಹಾಗೂ ನಂತರದ ದಿನಗಳಲ್ಲಿ ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್‌ವಾದದ ಪ್ರಭಾವದಿಂದ ಮೂಡಿದ ವೈಚಾರಿಕ ಎಚ್ಚರ, ಬೂಸಾ ಚಳವಳಿಯಂತಹ ಐತಿಹಾಸಿಕ ಘಟನಾವಳಿಗಳನ್ನು ಇದು ಕಟ್ಟಿಕೊಡುತ್ತದೆ. ತೀವ್ರ ಶೋಷಣೆಯ ನಡುವೆಯೂ ಬದುಕನ್ನು ಪ್ರೀತಿಸುತ್ತಾ ಸಮಾಜವನ್ನು ಎದುರಿಸಿದ ದಲಿತರ ಅಸ್ಮಿತೆ ಮತ್ತು ಹೋರಾಟದ ದಿಕ್ಸೂಚಿಯಾಗಿ ಈ ಕೃತಿಯ ಮಹತ್ವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಮಹೇಶ್ ಯು.ಸಿ.

ಸಹ ಪ್ರಾಧ್ಯಾಪಕರು, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಡೂರು.

How to Cite

ಮಹೇಶ್ ಯು.ಸಿ. (2026). ‘ಊರುಕೇರಿ’ ಆತ್ಮಕತೆಗಳ ಒಳನೋಟ. ಅಕ್ಷರಸೂರ್ಯ (AKSHARASURYA), 18(03), 93 to 101. https://aksharasurya.com/index.php/latest/article/view/2475

References

ಸಿದ್ದಲಿಂಗಯ್ಯ, (1997), ಊರುಕೇರಿ ಭಾಗ-1, ಬೆಂಗಳೂರು: ಅಭಿನವ.

ಸಿದ್ದಲಿಂಗಯ್ಯ, (2006), ಊರುಕೇರಿ ಭಾಗ-2, ಬೆಂಗಳೂರು: ಅಭಿನವ.

ನರಹಳ್ಳಿ ಬಾಲಸುಬ್ರಹ್ಮಣ್ಯ, (2002), ಸಾಹಿತ್ಯ ಸಂಸ್ಕೃತಿ, ಬೆಂಗಳೂರು: ಅಂಕಿತ ಪುಸ್ತಕ.

ಮೊಗಳ್ಳಿ ಗಣೇಶ್, (2012), ದಲಿತ ಕಥನ, ಬೆಂಗಳೂರು: ಅಭಿನವ.

ರಂಗರಾಜ್ ವನದುರ್ಗ, (1998), ಬಂಡಾಯ ಸಾಹಿತ್ಯ ಸಂವೇದನೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.