ನವೋದಯ ಕವಿಗಳಿಗೆ ಸ್ಪೂರ್ತಿಯಾದ ಗಾಂಧಿ

Main Article Content

ನವ್ಯಶ್ರೀ ಎಸ್.

Abstract

ಗಾಂಧಿ ಕೇವಲ ವ್ಯಕ್ತಿಯಾಗಿ ಮಾತ್ರವಲ್ಲ, ಸಮಷ್ಟಿ ನೆಲೆಯಲ್ಲಿ ಒಂದು ಪ್ರಜ್ಞೆಯಾಗಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲೂ ತನ್ನದೇ ಆದ ಪ್ರಭಾವಗಳನ್ನು ಬೀರಿರುವುದನ್ನು ಗಮನಿಸಬಹುದಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚಾರಿತ್ರಿಕ ಸನ್ನಿವೇಶವಾಗಲಿ ಆನಂತರ ಗಾಂಧಿ ಎಂಬ ವ್ಯಕ್ತಿತ್ವ ಅನಾವರಣಗೊಂಡ ಬಗೆಯಾಗಲಿ ನಮ್ಮ ಮುಂದೆ ದಾಖಲಾದ ನೆಲೆಯಂತೂ ವಿಶಿಷ್ಟವಾದದ್ದು. ‘ಗಾಂಧಿ’ ಎನ್ನುವ ಪ್ರಜ್ಞೆ ಕನ್ನಡ ಸಾಹಿತ್ಯವನ್ನು ಬಹಳಷ್ಟು ಪ್ರಭಾವಿಸಿದೆ ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವತಂತ್ರ ಭಾರತದ ಕುರಿತ ಸಾಹಿತ್ಯ ಬರವಣಿಗೆಯಲ್ಲಿ ಪ್ರಮುಖವಾಗಿ ಕಾಣಸಿಗುವ ಪಾತ್ರ ಅಥವಾ ಪ್ರಮುಖ ಪಾತ್ರಕ್ಕೆ ಪ್ರೇರಣೆಯಾಗಿ ನಿಂತಿರುವ ಶಕ್ತಿ ಅದು ಗಾಂಧಿ. ಹಾಗಾಗಿ ಗಾಂಧಿ ಕೇವಲ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಚಾರಿತ್ರಿಕ ಪ್ರಜ್ಞೆಯಾಗಿ ಮಾತ್ರ ಉಳಿಯದೆ, ಸಾಹಿತ್ಯ ಲೋಕದಲ್ಲೂ ತಮ್ಮ ಛಾಪನ್ನು ಮೂಡಿಸಿರುವುದು ಗಮನಾರ್ಹವಾದ ಸಂಗತಿ. ನವೋದಯ ಪೂರ್ವದಿಂದ ಆದಿಯಾಗಿ ಆಧುನಿಕ ಸ್ತ್ರೀವಾದ ಸಾಹಿತ್ಯದವರೆಗೂ ಗಾಂಧಿಯ ಕುರಿತಾಗಿ ಬಂದಿರುವ ಕತೆ, ಕವನ, ಕಾದಂಬರಿ, ನಾಟಕ ಇನ್ನಿತರ ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯ ಪ್ರಕಾರಗಳೇ ಇದಕ್ಕೆ ಸಾಕ್ಷಿ. ಕನ್ನಡದ ಬಹುತೇಕ ಸಾಹಿತಿಗಳು ತಮ್ಮ ಕಾವ್ಯ ವಸ್ತುವಾಗಿಯೋ, ಕಥನ ವಸ್ತುವಾಗಿಯೋ, ನಾಟಕ ರಚನೆಯ ಭಾಗೀದಾರನಾಗಿಯೋ, ಕಾದಂಬರಿಗಳ ಪಾತ್ರವಾಗಿಯೋ ಕಾಣಿಸಿರುವುದು ಸೃಜನಶೀಲತೆಗೆ ಹಿಡಿದ ದೊಡ್ಡ ಕೈಗನ್ನಡಿಯೇ ಸರಿ. ಈ ಸೃಜನಶೀಲತೆಯ ವ್ಯಾಪ್ತಿಯನ್ನು ವಿಸ್ತಾರವಾಗಿ ಅಧ್ಯಯನ ಮಾಡುವ, ಅದಕ್ಕೊಂದು ಹೊಸ ತಾತ್ವಿಕ ಪರಿಪ್ರೇಕ್ಷ್ಯವನ್ನು ಒದಗಿಸುವ ಮೂಲಕ ಕನ್ನಡ ಜಾಯಮಾನ ಗಾಂಧಿ ಎಂಬ ವಿಶ್ವಾತ್ಮಕನನ್ನು ಕನ್ನಡಿಗೀಕರಿಸಿದ, ಪ್ರಾದೇಶಿಕಗೊಳಿಸಿದ, ಸಮಕಾಲೀನಗೊಳಿಸಿದ ಕ್ರಿಯೆಯನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ಈ ಅಧ್ಯಯನವು ಮುನ್ನುಡಿಯನ್ನಿಟ್ಟಿದೆ. 

Article Details

Section

Research Articles

Author Biography

ನವ್ಯಶ್ರೀ ಎಸ್.

ಸಂಶೋಧನಾ ವಿದ್ಯಾರ್ಥಿನಿ, ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.

How to Cite

ನವ್ಯಶ್ರೀ ಎಸ್. (2026). ನವೋದಯ ಕವಿಗಳಿಗೆ ಸ್ಪೂರ್ತಿಯಾದ ಗಾಂಧಿ . ಅಕ್ಷರಸೂರ್ಯ (AKSHARASURYA), 18(03), 22 to 31. https://aksharasurya.com/index.php/latest/article/view/2469

References

ನಾಯಕ ಹಾ.ಮಾ. (ಪ್ರ.ಸಂ.), (1971), ಭಾರತೀಯ ಸಾಹಿತ್ಯದಲ್ಲಿ ಗಾಂಧೀಜಿ, ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.

ಶ್ರೀನಿವಾಸಯ್ಯ ಹೊ., (2004), ಕುವೆಂಪು ಕಂಡ ಗಾಂಧಿ, ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ.

ನಾಯಕ ಹಾ.ಮಾ., (1981), ಸೃಜನ, ಮೈಸೂರು: ಗೀತಾ ಬುಕ್ ಹೌಸ್.

ಭಟ್ಟ ಪ.ಶು. (ಸಂ.), (1952), ಅಮರನಾದೈ ತಂದೆ, ಉತ್ತರಕನ್ನಡ: ಗೆಳೆಯರ ಗುಂಪು.

ಶಿವರುದ್ರಪ್ಪ ಜಿ.ಎಸ್. (ಸಂ.), (1998), ರಾಷ್ಟ್ರೀಯತೆ ಮತ್ತು ಆಧುನಿಕ ಕನ್ನಡ ಸಾಹಿತ್ಯ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಚಂದ್ರಶೇಖರ ಪಾಟೀಲ (ಪ್ರ.ಸಂ.), (1998), ಗಾಂಧಿ ಎಂಬುವ ಹೆಸರು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ರಾಯಧಾರವಾಡಕರ (ಸಂ.), (1960), ಬಾಪೂ ಕಾವ್ಯಾಂಜಲಿ, ಧಾರವಾಡ: ಗಾಂಧಿ ಸ್ಮಾರಕ ನಿಧಿ.

ಸೂರ್ಯನಾಥ ಕಾಮತ್ (ಸಂ.), (1998), ಸ್ವಾತಂತ್ರ್ಯ ಸಮರದ ಗೇಯಗೀತೆಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.