ಡಾ. ಸಿದ್ದಯ್ಯ ಪುರಾಣಿಕರ ವಚನ ಸಾಹಿತ್ಯ ಚಿಂತನೆ ಮತ್ತು ಸಾಮಾಜಿಕ ಪ್ರಸ್ತುತತೆ

Main Article Content

ಕಲ್ಪನ ಪಿ.

Abstract

ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ದಕ್ಷ ಆಡಳಿತಗಾರರಾಗಿದ್ದ ಡಾ. ಸಿದ್ದಯ್ಯ ಪುರಾಣಿಕರ ವಚನ ಸಾಹಿತ್ಯ ಚಿಂತನೆ ಹಾಗೂ ಅದರ ಸಮಕಾಲೀನ ಸಾಮಾಜಿಕ ಪ್ರಸ್ತುತತೆಯನ್ನು ವಿಶ್ಲೇಷಿಸುತ್ತದೆ. 12ನೇ ಶತಮಾನದ ಶರಣರ ಕ್ರಾಂತಿಕಾರಕವಾದ ವಚನ ಸಾಹಿತ್ಯ ಪ್ರಕಾರಕ್ಕೆ 20ನೇ ಶತಮಾನದಲ್ಲಿ ‘ಸ್ವತಂತ್ರಧೀರ ಸಿದ್ಧೇಶ್ವರ’ ಎಂಬ ಅಂಕಿತನಾಮದೊಂದಿಗೆ ವಚನೋದ್ಯಾನದ ಮೂಲಕ ಮರುಜೀವ ನೀಡಿದ ಪುರಾಣಿಕರ ವಿಶಿಷ್ಟ ಕೊಡುಗೆಯನ್ನು ಇಲ್ಲಿ ಮುನ್ನೆಲೆಗೆ ತರಲಾಗಿದೆ. ಪ್ರಾಚೀನ ಪರಂಪರೆ ಮತ್ತು ಆಧುನಿಕ ವೈಜ್ಞಾನಿಕ ಪ್ರಜ್ಞೆಯನ್ನು ಸಮನ್ವಯಗೊಳಿಸಿದ ಇವರು ತಮ್ಮ ವಚನಗಳ ಮೂಲಕ ಜಾತಿ ಮತಗಳನ್ನು ಮೀರಿದ ಮಾನವೀಯತೆ, ವಿನಮ್ರತೆ, ಪರಿಸರ ಕಾಳಜಿ, ಕಾಯಕನಿಷ್ಠೆ ಮತ್ತು ಆಧುನಿಕ ದಾಸೋಹ ಪರಿಕಲ್ಪನೆಗಳನ್ನು ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ಭಾರತದ ಭ್ರಷ್ಟಾಚಾರ, ಮೌಲ್ಯಚ್ಯುತಿ, ಅಹಂಕಾರ ಮತ್ತು ಕಪಟ ರಾಜಕಾರಣವನ್ನು ಖಂಡಿಸಿ ಸಮಾಜಕ್ಕೆ ನೈತಿಕ ಹಾಗೂ ಬೌದ್ಧಿಕ ಮಾರ್ಗದರ್ಶನ ನೀಡುವಲ್ಲಿ ಇವರ ವಚನಗಳು ಇಂದಿಗೂ ಹೇಗೆ ದಾರಿದೀಪವಾಗಿವೆ ಎಂಬುದನ್ನು ಈ ಅಧ್ಯಯನವು ಚರ್ಚಿಸುತ್ತದೆ.

Article Details

Section

Research Articles

Author Biography

ಕಲ್ಪನ ಪಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ.

How to Cite

ಕಲ್ಪನ ಪಿ. (2026). ಡಾ. ಸಿದ್ದಯ್ಯ ಪುರಾಣಿಕರ ವಚನ ಸಾಹಿತ್ಯ ಚಿಂತನೆ ಮತ್ತು ಸಾಮಾಜಿಕ ಪ್ರಸ್ತುತತೆ. ಅಕ್ಷರಸೂರ್ಯ (AKSHARASURYA), 18(03), 16 to 21. https://aksharasurya.com/index.php/latest/article/view/2468

References

ಸಿದ್ದಯ್ಯ ಪುರಾಣಿಕ, (1976), ವಚನೋದ್ಯಾನ, ಬೆಂಗಳೂರು: ಕಾವ್ಯಾನಂದ ಪ್ರಕಾಶನ.

ಸಿದ್ದಯ್ಯ ಪುರಾಣಿಕ, (1977), ಸಿದ್ದರಾಮ ವಚನಗಳು, ಬೆಂಗಳೂರು: ಶರಣ ಸಾಹಿತ್ಯ ಕಾರ್ಯಾಲಯ.

ಚಿದಾನಂದ ಮೂರ್ತಿ ಎಂ., (1979), ವಚನ ಸಾಹಿತ್ಯ: ಐತಿಹಾಸಿಕ ಮತ್ತು ಸಾಮಾಜಿಕ ಅಧ್ಯಯನ, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.

ಸಿದ್ದಯ್ಯ ಪುರಾಣಿಕ, (1985), ಶರಣ ಚರಿತಾಮೃತ, ಮೈಸೂರು: ಗೀತಾ ಬುಕ್ ಹೌಸ್.

ಮುಗುಳಿ ರಂ. ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಉಷಾ ಸಾಹಿತ್ಯ ಮಾಲೆ.