ಬಿ. ಎ. ಸನದಿ ಅವರ ಸಾಹಿತ್ಯ

Main Article Content

ಎಸ್. ಪಿ. ಅರುಣ

Abstract

ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪ್ರಮುಖರಲ್ಲಿ ‘ಮಾನವ್ಯ ಕವಿ’ ಎಂದೇ ಖ್ಯಾತರಾದ ಡಾ. ಬಿ. ಎ. ಸನದಿ ಅವರ ಕೊಡುಗೆ ಅಪಾರವಾಗಿದೆ. ಬೆಳಗಾವಿಯ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಬಾಲ್ಯದ ಪರಿಸರದಿಂದಲೇ ಸರ್ವಧರ್ಮ ಸಮನ್ವಯ ಹಾಗೂ ಜಾನಪದ ಸಂಸ್ಕಾರವನ್ನು ಮೈಗೂಡಿಸಿಕೊಂಡರು. ಮನೆಮಾತು ಉರ್ದು ಆದರೂ ಕನ್ನಡವನ್ನು ಉಸಿರಾಗಿಸಿಕೊಂಡು ಕವನ, ಕಥೆ, ವಿಮರ್ಶೆ, ಅನುವಾದ ಸೇರಿದಂತೆ 50ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಸನದಿಯವರ ಸಾಹಿತ್ಯದಲ್ಲಿ ಪ್ರಾದೇಶಿಕ ಭಾಷೆಯ ಸೊಗಸು, ನಿಸರ್ಗದ ರಮ್ಯತೆ, ಶಬ್ದಮಾಧುರ್ಯ ಮತ್ತು ಮನುಷ್ಯ ಪ್ರೀತಿ ಹಾಸುಹೊಕ್ಕಾಗಿದೆ. ಕೃತಕತೆಯಿಲ್ಲದ, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸುಲಲಿತ ಕಾವ್ಯ ಹಾಗೂ ಕಥೆಗಳನ್ನು ರಚಿಸಿರುವ ಅವರು ಸಾಹಿತ್ಯ ಲೋಕದಲ್ಲಿ ಅಜರಾಮರರಾಗಿದ್ದಾರೆ. ಅವರ ಸರಳ ಸಜ್ಜನಿಕೆಯ ಬದುಕು, ಶ್ರೇಷ್ಠ ಮಾನವೀಯ ಮೌಲ್ಯಗಳು ಹಾಗೂ ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಎಸ್. ಪಿ. ಅರುಣ

ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕಡೂರು.

How to Cite

ಎಸ್. ಪಿ. ಅರುಣ. (2026). ಬಿ. ಎ. ಸನದಿ ಅವರ ಸಾಹಿತ್ಯ. ಅಕ್ಷರಸೂರ್ಯ (AKSHARASURYA), 18(03), 09 to 15. https://aksharasurya.com/index.php/latest/article/view/2467

References

ಬಸು ಬೇವಿನಗಿಡದ, (2020), ಬಿ. ಎ. ಸನದಿ, ಬೆಂಗಳೂರು: ಸಿ.ವಿ.ಜಿ. ಬುಕ್ಸ್.

ಕೃಷ್ಣರಾಯ ಶಾ. ಮಂ., (1993), ಕಾವ್ಯಕಾರವಾನ, ಬೆಂಗಳೂರು: ಸನದಿ ಅಭಿನಂದನ ಸಮಿತಿ.

ಶ್ರೀಧರ ಬಳಗಾರ, (2021), ಉಭಯ ಕುಶಲೋಪರಿ ಬಿ. ಎ. ಸನದಿ ಅವರೊಂದಿಗೆ, ಬೆಂಗಳೂರು: ಅಂಕಿತ ಪುಸ್ತಕ.