ರಂಗಭೂಮಿ ಮತ್ತು ಚಲನಚಿತ್ರ
Main Article Content
Abstract
ಕನ್ನಡ ಚಲನಚಿತ್ರ ರಂಗದ ಉಗಮ ಮತ್ತು ವಿಕಾಸದಲ್ಲಿ ವೃತ್ತಿ ರಂಗಭೂಮಿಯ ಪಾತ್ರ ಹಾಗೂ ಪ್ರಭಾವವನ್ನು ಇಲ್ಲಿ ಐತಿಹಾಸಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ನಾಟಕದ ಮೂಲದಿಂದ ಬಂದ ಸಿನಿಮಾವು ಹೇಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಭಾವಿ ಮಾಧ್ಯಮವಾಗಿ ಬೆಳೆಯಿತು ಎಂಬುದನ್ನು ವಿವರಿಸಲಾಗಿದೆ. ‘ಸತಿ ಸುಲೋಚನಾ’, ‘ಭಕ್ತ ಧ್ರುವ’, ‘ಸಂಸಾರ ನೌಕೆ’ಯಂತಹ ಆರಂಭಿಕ ವಾಕ್ಚಿತ್ರಗಳು ಸಂಪೂರ್ಣವಾಗಿ ರಂಗಭೂಮಿಯ ಕಥೆ, ಹಾಡು ಮತ್ತು ಕಲಾವಿದರನ್ನೇ ನೆಚ್ಚಿಕೊಂಡಿದ್ದವು. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಅವರಂತಹ ರಂಗ ದಿಗ್ಗಜರು ಬೆಳ್ಳಿತೆರೆಗೆ ಭದ್ರ ಬುನಾದಿ ಹಾಕಿಕೊಟ್ಟರು. ನಾಟಕ ಮತ್ತು ಚಲನಚಿತ್ರಗಳ ನಡುವಿನ ಪ್ರಾಯೋಗಿಕ ವ್ಯತ್ಯಾಸಗಳನ್ನು ಗುರುತಿಸುವ ಜೊತೆಗೆ, ಕಾಲಘಟ್ಟದಲ್ಲಿ ಸಿನಿಮಾವು ರಂಗಭೂಮಿಗೆ ಮತ್ತು ಪ್ರಸ್ತುತ ದೂರದರ್ಶನ ವಾಹಿನಿಗಳು ಸಿನಿಮಾಗೆ ಒಡ್ಡಿರುವ ಸವಾಲುಗಳನ್ನು ಚರ್ಚಿಸಲಾಗಿದೆ. ಪ್ರೇಕ್ಷಕರ ಬದಲಾಗುವ ಅಭಿರುಚಿಗೆ ತಕ್ಕಂತೆ ಈ ಕಲಾಮಾಧ್ಯಮಗಳು ಕಾಲಕಾಲಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಿರೂಪಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪ್ರಶಾಂತ ನಾಯಕ ಜಿ., (2009), ಕನ್ನಡ ಸಿನಿಮಾಲೋಕ, ಮೈಸೂರು: ರಚನಾ ಪ್ರಕಾಶನ.
ಸತ್ಯ ಲಿಂಗರಾಜು ಆರ್. ಜೆ., (2004), ಸಿನಿಮಾ ಸಿನಿಮಾ, ಮೈಸೂರು: ರೂಪ ಪ್ರಕಾಶನ.
ವೈಕುಂಠರಾಜು ಬಿ. ವಿ., (2007), ಕನ್ನಡ ರಂಗಭೂಮಿ, ಬೆಂಗಳೂರು: ಸನ್ನತ್ ಪ್ರಕಾಶನ.
ಗೌರಿ ಸುಂದರ್, (2009), ಬೆಳ್ಳಿತೆರೆಯ ಬಾಂಧವ್ಯ, ಬೆಂಗಳೂರು: ಸುಂದರ ಪ್ರಕಾಶನ.
ಶ್ರೀಧರಮೂರ್ತಿ ಎನ್. ಎಸ್. (ಸಂ.), (2009), ಜೋಡಿದೀಪಗಳು, ಬೆಂಗಳೂರು: ಸುಂದರ ಪ್ರಕಾಶನ.