ಕೆ.ಶಿವರಾಮ ಕಾರಂತರ ‘ಕಿಸಾಗೋತಮಿ’: ತಾತ್ವಿಕ ವಿಶ್ಲೇಷಣೆ

Main Article Content

ಭಂತೆ ಡಾ. ಕಲ್ಯಾಣ ಸಿರಿ

Abstract

ಕೆ. ಶಿವರಾಮ ಕಾರಂತರ ಪ್ರಥಮ ಬೌದ್ಧ ಗೀತನಾಟಕ ‘ಕಿಸಾಗೋತಮಿ’ಯ ತಾತ್ವಿಕ ಹಾಗೂ ಮನೋವೈಜ್ಞಾನಿಕ ಆಯಾಮಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಮಗುವನ್ನು ಕಳೆದುಕೊಂಡು ಶೋಕತಪ್ತಳಾದ ತಾಯಿ ಕಿಸಾಗೋತಮಿಗೆ, ಬುದ್ಧರು ‘ಸಾವಿಲ್ಲದ ಮನೆಯ ಸಾಸಿವೆ’ ತರುವಂತೆ ಸೂಚಿಸುತ್ತಾರೆ. ಆ ಮೂಲಕ ಸಾವಿನ ಸಾರ್ವತ್ರಿಕ ಹಾಗೂ ಅನಿವಾರ್ಯ ಸತ್ಯವನ್ನು ಆಕೆ ಸ್ವತಃ ಅರಿತುಕೊಳ್ಳುವಂತೆ ಮಾಡುವ ಈ ಪ್ರಾಯೋಗಿಕ ವಿಧಾನವನ್ನು, ಆಧುನಿಕ ಮನಃಶಾಸ್ತ್ರದ ‘ಜ್ಞಾನ ಗ್ರಹಣದ ವರ್ತನೆಯ ಚಿಕಿತ್ಸೆ’ಗೆ (CBT) ಸಮೀಕರಿಸಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಜಾನಪದ ಮತ್ತು ಮಾರ್ಗ ಪದ್ಧತಿಗಳ ಸುಂದರ ಸಂಯೋಜನೆಯಿರುವ ಈ ಕೃತಿಯು ಬೌದ್ಧ ಧರ್ಮದ ‘ಅನಿತ್ಯತೆ’ಯ ತತ್ವವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುತ್ತದೆ. ತಾಯಿಯ ಕರುಳಿನ ತವಕ, ಆನಂದನ ಸಾಂತ್ವನ ಹಾಗೂ ಬುದ್ಧರ ವೈಚಾರಿಕ ಚಿಕಿತ್ಸೆಯ ಹಿನ್ನೆಲೆಯಲ್ಲಿ ಮನುಷ್ಯನಿಗೆ ಅಂಟಿರುವ ಮೋಹ, ದುಃಖ ಮತ್ತು ಭ್ರಾಂತಿಯನ್ನು ಕಳಚಿ ವಾಸ್ತವದ ಬದುಕಿಗೆ ಮುಖಮಾಡುವ ಬಗೆಯನ್ನು ಬಹು ಮಾರ್ಮಿಕವಾಗಿ ತೆರೆದಿಡಲಾಗಿದೆ.

Article Details

Section

Research Articles

Author Biography

ಭಂತೆ ಡಾ. ಕಲ್ಯಾಣ ಸಿರಿ

ವಿಶ್ವ ಮೈತ್ರಿ ಬುದ್ಧವಿಹಾರ, ಮೈಸೂರು.

How to Cite

ಭಂತೆ ಕಲ್ಯಾಣ ಸಿರಿ. (2026). ಕೆ.ಶಿವರಾಮ ಕಾರಂತರ ‘ಕಿಸಾಗೋತಮಿ’: ತಾತ್ವಿಕ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 18(02), 36 to 41. https://aksharasurya.com/index.php/latest/article/view/2459

References

ಮಾಲಿನಿಮಲ್ಯ ಬಿ. (ಸಂ.), (2005), ಶಿವರಾಮ ಕಾರಂತ ಸಾಹಿತ್ಯ ಶ್ರೇಣಿ: ಗೀತನಾಟಕಗಳು - ಕಿಸಾಗೋತಮಿ (ಸಂಪುಟ-24), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ಉದಯ್‌ಕುಮಾರ್ ಹಬ್ಬು, (2015), ಬುದ್ಧತ್ವ - ಸಂತೋಷಕ್ಕೊಂದೆ ದಾರಿ, ಕಿನ್ನಿಗೋಳಿ: ಅನಂತ ಪ್ರತಿಭಾ ಪ್ರಕಾಶನ.

ಮರುಳಸಿದ್ದಪ್ಪ ಕೆ., (1993), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಲಿಪಿ ಪ್ರಕಾಶನ.