ಪ್ರದರ್ಶನ ಕಲೆ ಗುಮ್ಮಟೆವಾದನ

Main Article Content

ಡಾ. ಗೌರಮ್ಮ ಟಿ.

Abstract

ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ವಾದ್ಯ ಗುಮ್ಮಟೆ, ಹಾಲಕ್ಕಿಗಳು, ಅಂಬಿಗರು, ಕೋಮಾರಪಂತರು, ಸಿದ್ದಿಗಳು, ಮಹಾಲೆಗಳು, ಕುಣಬಿಗಳು, ಮರಾಠಿಗರು ಹೀಗೆ ಅನೇಕ ಜನಾಂಗಗಳು ಗುಮ್ಮಟೆಯೊಂದಿಗೆ ಬದುಕಿವೆ. ಎಲ್ಲಾ ಆದಿಮಕಲೆಗಳಲ್ಲಿ ಕಂಡುಬರುವಂತೆ ಉತ್ತರ ಕನ್ನಡದಲ್ಲಿಯೂ ಸಹ ಮಣ್ಣು ಚರ್ಮದಿಂದಾದ ಗುಮ್ಮಟೆ ವಾದ್ಯವನ್ನು ಬಳಸುತ್ತಾರೆ ಆದರೆ ಇಲ್ಲಿಯ ವಿಶಿಷ್ಟ ಪ್ರಕೃತಿ ಪರಿಸರಕ್ಕೆ ಅನುಗುಣವಾಗಿ ಗುಮ್ಮಟೆಯ ಆಕಾರ ಹಾಗೂ ವಾದನಕ್ರಮದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಇದೇ ರೀತಿ ಪ್ರದರ್ಶನ ಕ್ರಮ ಹಾಗೂ ಉದ್ದೇಶಗಳಲ್ಲಿಯೂ ವ್ಯತ್ಯಾಸಗಳಿವೆ. ಹಾಲಕ್ಕಿಗಳಿಗೆ ಹಾಗೂ ಸಿದ್ದಿಗಳಿಗೆ ಈ ವಾದ್ಯ ಮನರಂಜನೆ ಉದ್ದೇಶದ ಪ್ರದರ್ಶನಕಲೆಯಾದರೆ, ಮಹಾಲೆ ಜನಾಂಗದವರಲ್ಲಿ ಈ ವಾದ್ಯ ಚೌತಿ ಹಬ್ಬದ ಆಚರಣೆಯ ಜೊತೆ ತಳುಕು ಹಾಕಿಕೊಂಡಿದೆ. ಹಾಲಕ್ಕಿಗಳಲ್ಲಿ ಗುಮಟೆ ಸ್ವತಂತ್ರವಾದ ಖಾರ್ವಿ, ಮಹಾಲೆ, ಸಿದ್ದಿ, ಮರಾಠಿ, ಜನಾಂಗಗಳಿಗೆ ಅದು ತಾಸಮಾರ್‌ (ತಾಸ್ಮಾರ್) ಎಂಬ ವಾದ್ಯದೊಂದಿಗೆ ಸೇರಿ ನುಡಿಗೊಳ್ಳಬೇಕಾದ ವಾದ್ಯ.

Article Details

Section

Research Articles

Author Biography

ಡಾ. ಗೌರಮ್ಮ ಟಿ.

ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿ, ಯಲಹಂಕ, ಬೆಂಗಳೂರು.

How to Cite

ಗೌರಮ್ಮ ಟಿ. (2026). ಪ್ರದರ್ಶನ ಕಲೆ ಗುಮ್ಮಟೆವಾದನ. ಅಕ್ಷರಸೂರ್ಯ (AKSHARASURYA), 18(01), 113 to 116. https://aksharasurya.com/index.php/latest/article/view/2428

References

ಕೇರಳದಲ್ಲಿ ‘ನಂತುಣಿ’ ಎಂಬ ವಾದ್ಯವಿದೆ. ಈ ವಾದ್ಯ ‘ನಂ’ ಎಂಬ ಪ್ರತಿಧ್ವನಿ ನೀಡುವದರಿಂದ ‘ನಂತುಣಿ’ ಎಂಬ ಹೆಸರು ಬಂದಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. (ಪಳುಕಲ್ ಗಂಗಾಧರನ್ ನಾಯರ್, (1998), ಕೇರಳ ಜಾನಪದ ಅಧ್ಯಯನ, ಬೆಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.)

ನಾಯಕ ಎನ್. ಆರ್., (1993), ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ನಾಯಕ ಎನ್. ಆರ್., (1983), ಹೇಳತೇವೊ ಗುಮ್ಮೆ ಪದನಾಮ, ಹೊನ್ನಾವರ: ಜಾನಪದ ಪ್ರಕಾಶನ.

Most read articles by the same author(s)