ಆಧುನಿಕ ಕನ್ನಡ ನಾಟಕ ಸಾಹಿತ್ಯದಲ್ಲಿ ಸಾಮಾಜಿಕತೆ

Main Article Content

ಡಾ. ಉಷಾ

Abstract

ಆಧುನಿಕ ಕನ್ನಡ ನಾಟಕ ಪರಂಪರೆಯು ಪೌರಾಣಿಕ ಮತ್ತು ಐತಿಹಾಸಿಕ ಕಥಾವಸ್ತುಗಳಿಂದ ಹೊರಬಂದು, ಸಮಕಾಲೀನ ವಾಸ್ತವ ಹಾಗೂ ಮಧ್ಯಮ ವರ್ಗದ ಬದುಕನ್ನು ರಂಗಭೂಮಿಯ ಮೇಲೆ ತರುವ ಮೂಲಕ ಹೊಸ ಆಯಾಮವನ್ನು ಪಡೆದುಕೊಂಡಿತು. ಇಂಗ್ಲಿಷ್ ಪ್ರಭಾವ ಹಾಗೂ ಆರಂಭಿಕ ಪ್ರಹಸನಗಳ ನಂತರ, ಟಿ.ಪಿ. ಕೈಲಾಸಂ ಮತ್ತು ಶ್ರೀರಂಗರು ಸಾಮಾಜಿಕ ನಾಟಕಗಳಿಗೆ ಭದ್ರ ಬುನಾದಿ ಹಾಕಿದರು. ಕೈಲಾಸಂ ಅವರು ತಮ್ಮ ‘ಟೊಳ್ಳು-ಗಟ್ಟಿ’ ಹಾಗೂ ‘ತಾಳಿ ಕಟ್ಟೋಕೂಲೀನೆ’ ಮುಂತಾದ ನಾಟಕಗಳಲ್ಲಿ ಹಾಸ್ಯದ ಮೂಲಕ ವರದಕ್ಷಿಣೆ, ಸ್ತ್ರೀ ಶೋಷಣೆ ಹಾಗೂ ಪೊಳ್ಳು ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸಿದರು. ಮತ್ತೊಂದೆಡೆ, ಶ್ರೀರಂಗರು ‘ಹರಿಜನವಾರ’ ಮತ್ತು ‘ಸಂಧ್ಯಾಕಾಲ’ದಂತಹ ಕೃತಿಗಳ ಮೂಲಕ ಮೌಢ್ಯ, ಅಸ್ಪೃಶ್ಯತೆ ಹಾಗೂ ಸನಾತನವಾದಿ ನಂಬಿಕೆಗಳ ವಿರುದ್ಧದ ಸಂಘರ್ಷವನ್ನು ಕಟ್ಟಿಕೊಟ್ಟರು. ಕೇವಲ ಮನರಂಜನೆಯ ಸಾಧನವಾಗಿದ್ದ ನಾಟಕವು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಮಾನವೀಯತೆಯನ್ನು ಎಚ್ಚರಿಸುವ ಪ್ರಬಲ ಮಾಧ್ಯಮವಾಗಿ ರೂಪುಗೊಂಡ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಡಾ. ಉಷಾ

ಡಾ. ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥ ಬೀದಿ, ಮಂಗಳೂರು.

How to Cite

ಉಷಾ. (2026). ಆಧುನಿಕ ಕನ್ನಡ ನಾಟಕ ಸಾಹಿತ್ಯದಲ್ಲಿ ಸಾಮಾಜಿಕತೆ. ಅಕ್ಷರಸೂರ್ಯ (AKSHARASURYA), 18(01), 18 to 25. https://aksharasurya.com/index.php/latest/article/view/2416

References

ಕೇಶವರಾವ್ ಬಿ. ಎಸ್., (2014), ಕೈಲಾಸಂ ಕನ್ನಡ ನಾಟಕಗಳು, ಬೆಂಗಳೂರು: ಅಂಕಿತ ಪ್ರಕಾಶನ.

ಮರುಳಸಿದ್ದಪ್ಪ ಕೆ., (2013), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪ್ರಕಾಶನ.

ರಂಗನಾಥ್ ಕೆ. ಎಚ್., (2014), ಕರ್ನಾಟಕ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ ಪ್ರಕಾಶನ.

ಶೇಷಗಿರಿರಾವ್ ಎಲ್. ಎಸ್., (2014), ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಸಪ್ನ ಪ್ರಕಾಶನ.

Most read articles by the same author(s)