ಡಿಜಿಟಲ್ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ

Main Article Content

ಸಂಗೀತ

Abstract

ಡಿಜಿಟಲ್ ತಂತ್ರಜ್ಞಾನವು ಮಾನವ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿರುವ ಇಂದಿನ ಕಾಲಘಟ್ಟದಲ್ಲಿ ರಂಗಭೂಮಿಯ ಪ್ರಸ್ತುತತೆಯ ಕುರಿತ ಚರ್ಚೆಯು ಅಗತ್ಯ ಮತ್ತು ಅವಶ್ಯಕವೆನಿಸಿಕೊಳ್ಳುತ್ತದೆ. ರಂಗಭೂಮಿಯ ವಿಶೇಷವೆಂದರೆ ವೇದಿಕೆಯ ಮೇಲೆ ನಡೆಯುವ ಅಭಿನಯ, ಸಂಭಾಷಣೆ, ಸಂಗೀತ ಮತ್ತು ಭಾವನೆಗಳು ಕಲಾವಿದ ಮತ್ತು ಪ್ರೇಕ್ಷಕರ ನಡುವೆ ನೇರ ಸಂಪರ್ಕವನ್ನು ಸಾಧಿಸುತ್ತದೆ. ಪ್ರತಿ ಪ್ರದರ್ಶನವೂ ಆ ಕ್ಷಣದಲ್ಲೇ ಜೀವ ತಳೆಯುವಂತಹದ್ದಾಗಿರುವುದರಿಂದ ರಂಗಭೂಮಿಯು ಭಾವನೆ ಮತ್ತು ಸಂಸ್ಕೃತಿಯನ್ನು ಜೀವಿಸುವ ವೇದಿಕೆಯಾಗಿದೆ. ಮತ್ತು ರಂಗಭೂಮಿಯು ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ (Digital Detox), ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಸಹಾಯ ಮಾಡುತ್ತದೆ. 
ಸಮಾಜದಲ್ಲಿ ನಡೆಯುವ ಹಲವು ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ, ವಿಚಾರವಂತಿಕೆ ಮೂಡಿಸುತ್ತಾ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಬಿತ್ತುವಲ್ಲಿ, ಸಮಾಜವನ್ನು ಚಿಂತನೆಗೆ ಒಳಪಡಿಸುವಲ್ಲಿ ರಂಗಭೂಮಿಯ ಪಾತ್ರ ಬಹಳ ದೊಡ್ಡದು. ಹಾಗಾಗಿ ಶೈಕ್ಷಣಿಕ ಚಟುವಟಿಕೆಯಾಗಿ ರಂಗಭೂಮಿಯ ಶಿಕ್ಷಣಕ್ಕೆ ವಿಶ್ವವಿದ್ಯಾಲಯಗಳಲ್ಲಿ ಆದ್ಯತೆ ನೀಡುವುದು ಡಿಜಿಟಲ್ ಯುಗದಲ್ಲಿ ಅಗತ್ಯವಾಗಿದೆ. 

Article Details

Section

Research Articles

Author Biography

ಸಂಗೀತ

ಸಂಶೋಧನಾ ವಿದ್ಯಾರ್ಥಿನಿ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, ಕೊಣಾಜೆ.

How to Cite

ಸಂಗೀತ. (2026). ಡಿಜಿಟಲ್ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ. ಅಕ್ಷರಸೂರ್ಯ (AKSHARASURYA), 17(06), 150 to 155. https://aksharasurya.com/index.php/latest/article/view/2409

References

ದಾಮೋದರ ಶೆಟ್ಟಿ ನಾ., (1998), ರಂಗಶೋಧನ (ರಂಗಭೂಮಿ ಹಾಗೂ ನಾಟಕಗಳ ವಿಮರ್ಶೆ, ಸಮೀಕ್ಷೆಗಳು), ಬೆಂಗಳೂರು: ಭಾರತಾ ಯಾತ್ರಾ ಕೇಂದ್ರ.

ಸಿದ್ದಲಿಂಗ ಪಟ್ಟಣಶೆಟ್ಟಿ, (1995), ರಂಗಾಯಣ, ರಂಗಭೂಮಿ - ನಾಟಕ - ಸಾಹಿತ್ಯ ಕುರಿತು ವಿಮರ್ಶಾ ಲೇಖನಗಳು, ಧಾರವಾಡ: ಅನನ್ಯ ಪ್ರಕಾಶನ.

ಆದ್ಯ ರಂಗಾಚಾರ್ಯ, (1968), ಕನ್ನಡ ರಂಗಭೂಮಿಯ ಪುರೋಭಿವೃದ್ಧಿ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

ಶ್ರೀನಿವಾಸಮೂರ್ತಿ ಕಾ.ವೆಂ., (2018), ಕನ್ನಡ ರಂಗಭೂಮಿ, ಬೆಂಗಳೂರು: ಪುಸ್ತಕ ಮಂಟಪ.