ರಂಗದರ್ಶನ: ವೃತ್ತಿ ರಂಗಭೂಮಿ ಅಧ್ಯಯನದ ತಾತ್ವಿಕ ನೆಲೆಗಳು

Main Article Content

ಡಾ. ಹೇಮಲತಾ ಜಿ.ಎಂ.

Abstract

ಕನ್ನಡ ವೃತ್ತಿರಂಗಭೂಮಿಯ ಇತಿಹಾಸವನ್ನು ಗಮನಿಸಿದಾಗ, ಅದರ ಅಧ್ಯಯನವು ಕೇವಲ ಕಲಾತ್ಮಕತೆಯಷ್ಟೇ ಅಲ್ಲದೆ ಬಹುಮುಖಿ ದೃಷ್ಟಿಕೋನಗಳನ್ನು ಒಳಗೊಂಡಿರುವುದು ತಿಳಿಯುತ್ತದೆ. ಆರಂಭದಲ್ಲಿ ಮನರಂಜನೆಯಾಗಿದ್ದ ಇದು, ವಸಾಹತುಶಾಹಿ ಕಾಲದಲ್ಲಿ ಮರಾಠಿ ನಾಟಕಗಳ ಎದುರು ಕನ್ನಡದ ಅಸ್ತಿತ್ವ ಮತ್ತು ಭಾಷಾಭಿಮಾನವನ್ನು ರಕ್ಷಿಸಿದ ಸಾಂಸ್ಕೃತಿಕ ಪ್ರತಿರೋಧದ ಸಂಕೇತವಾಗಿ ಬೆಳೆಯಿತು. ಅಲ್ಲದೆ, ಇತಿಹಾಸ ಮತ್ತು ಪುರಾಣಗಳ ಮರುಸೃಷ್ಟಿಯ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಸಾಮಾಜಿಕವಾಗಿ ವರ್ಣ-ವರ್ಗ ಸಂಘರ್ಷ, ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಸಮಸ್ಯೆಗಳನ್ನು ರಂಗದ ಮೇಲೆ ತಂದು ವೈಚಾರಿಕ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಆರ್ಥಿಕ ಸವಾಲುಗಳ ನಡುವೆಯೂ ಸ್ವಾವಲಂಬನೆ ಕಾಯ್ದುಕೊಂಡು, ತಿರುಗು ರಂಗಸಜ್ಜಿಕೆ ಹಾಗೂ ವಿದ್ಯುತ್ ಬಳಕೆಯಂತಹ ತಾಂತ್ರಿಕ ಆವಿಷ್ಕಾರಗಳ ಮೂಲಕ ಆಧುನಿಕತೆಗೆ ಹೊಸ ಆಯಾಮ ನೀಡಿತು. ವಿಶೇಷವಾಗಿ, ಮಹಿಳಾ ಕಲಾವಿದರ ಕೊಡುಗೆಗಳು ಈ ವಿಶ್ಲೇಷಣೆಗೆ ಸ್ತ್ರೀವಾದಿ ಚೌಕಟ್ಟನ್ನು ಒದಗಿಸಿವೆ. ಒಟ್ಟಾರೆಯಾಗಿ, ಸಂಗೀತ, ಕಾವ್ಯ ಮತ್ತು ಆಡುಭಾಷೆಯ ಸಮ್ಮಿಲನದೊಂದಿಗೆ ಮೂಡಿಬಂದ ಈ ವೃತ್ತಿರಂಗಭೂಮಿಯು ಕಲೆಯ ಮೂಲಕ ಸಮಾಜವನ್ನು ಪರಿವರ್ತಿಸುವ ಮತ್ತು ಕನ್ನಡದ ಸಾಂಸ್ಕೃತಿಕ ಚರಿತ್ರೆಯನ್ನು ಮರುನಿರ್ಮಿಸುವ ಪ್ರಮುಖ ಸೈದ್ಧಾಂತಿಕ ಹಾದಿಯಾಗಿದೆ.

Article Details

Section

Research Articles

Author Biography

ಡಾ. ಹೇಮಲತಾ ಜಿ.ಎಂ.

ಶ್ರೀ ಮಂಜುನಾಥ ನಿಲಯ, ಸ್ವಾಮಿ ವಿವೇಕಾನಂದ ಸರ್ಕಲ್, ಹಾರಂಗಿ ರೋಡ್, ಗುಮ್ಮನಕೊಲ್ಲಿ, ಕುಶಾಲನಗರ, ಕೊಡಗು.

How to Cite

ಹೇಮಲತಾ ಜಿ.ಎಂ. (2026). ರಂಗದರ್ಶನ: ವೃತ್ತಿ ರಂಗಭೂಮಿ ಅಧ್ಯಯನದ ತಾತ್ವಿಕ ನೆಲೆಗಳು. ಅಕ್ಷರಸೂರ್ಯ (AKSHARASURYA), 17(06), 141 to 149. https://aksharasurya.com/index.php/latest/article/view/2408

References

ಚಕ್ಕರೆ ಶಿವಶಂಕರ್, (2008), ಕರ್ನಾಟಕ ಜನಪದ ರಂಗಭೂಮಿ, ಬೆಂಗಳೂರು: ಕರ್ನಾಟಕ ಜನಪದ ಪರಿಷತ್ತು.

ರಾಜೇಂದ್ರ ಡಿ. ಕೆ., (1980), ದಕ್ಷಿಣ ಕರ್ನಾಟಕದ ಜಾನಪದ ರಂಗಭೂಮಿ, ಮೈಸೂರು: ಪ್ರಸಾರಾಂಗ.

ಮುನಿಕೃಷ್ಣಪ್ಪ, (1996), ಜಾನಪದ ಅಂತರಂಗ, ಬೆಂಗಳೂರು: ಹಂದರ ಪ್ರಕಾಶನ.

ಶ್ರೀರಂಗ, (1983), ಕನ್ನಡ ರಂಗಭೂಮಿ ನಡೆದುಬಂದ ದಾರಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಶಿವಪ್ರಕಾಶ್ ಎಚ್. ಎಸ್., (1993), ಸಾಹಿತ್ಯ ಮತ್ತು ರಂಗಭೂಮಿ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.